ಮಡಿಕೇರಿ ನ.4 : ವಿಯೆಟ್ನಾಂ ಕಾಳುಮೆಣಸು ಆಮದು ಮತ್ತು ಕೊಡಗಿನ ಜಮ್ಮಾ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಲು ಶೀಘ್ರದಲ್ಲೇ ಮುಖ್ಯಮಂತ್ರಿಗಳ ಬಳಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ನಿಯೋಗ ತೆರಳಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಳುಮೆಣಸಿನ ಆಮದಿನಿಂದಾಗಿ ಜಿಲ್ಲೆಯ ಬೆಳೆಗಾರರು ಧಾರಣೆ ಕುಸಿತದಿಂದಾಗಿ ಕಂಗಾಲಾಗಿದ್ದಾರೆ. ಜಮ್ಮಾ ಸಮಸ್ಯೆ ಇನ್ನೂ ಕೂಡ ಬಗೆಹರಿಯದೇ ಇರುವದರಿಂದ ಈ ಬಗ್ಗೆ ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪಡೆದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವದೆಂದರು.

ಕಾಂಗ್ರೆಸ್ ನಿಯೋಗದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಮುಖರು, ಪಕ್ಷದ ಮುಖಂಡ ಹಾಗೂ ಹಿರಿಯ ವಕೀಲ ಚಂದ್ರಮೌಳಿ, ಮುಖ್ಯ ಘಟಕಗಳ ಪದಾಧಿಕಾರಿಗಳು ಹಾಜರಿರುತ್ತಾರೆ ಎಂದು ಶಿವು ಮಾದಪ್ಪ ತಿಳಿಸಿದರು.

ನಗರ ಸಂಚಾರ : ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸಮಸ್ಯೆಗಳು ಇರುವದು ಸತ್ಯ. ಈಗಾಗಲೆ ಈ

(ಮೊದಲ ಪುಟದಿಂದ) ಕುರಿತು ನಗರಸಭಾ ಅಧ್ಯಕ್ಷರೊಂದಿಗೆ ಜಿಲ್ಲಾ ಕಾಂಗ್ರೆಸ್ ಮಾತುಕತೆ ನಡೆಸಿದೆ. ಒಳಚರಂಡಿಯ ಯುಜಿಡಿ ಯೋಜನೆಯಿಂದ ಹೊಂಡ ಗುಂಡಿಗಳಿಂದ ಕೂಡಿರುವ ನಗರದ ರಸ್ತೆಗಳ ದುರಸ್ತಿ ಕಾರ್ಯವನ್ನು ಆದಷ್ಟು ಶೀಘ್ರ ನಡೆಸಲು ಈಗಾಗಲೇ ಯುಜಿಡಿ ಅಧಿಕಾರಿಗಳು ಒಪ್ಪಿಗೆ ಸೂಚಿಸಿರುವದಾಗಿ ಮಾಹಿತಿ ನೀಡಿದರು. ಸಧ್ಯದಲ್ಲಿಯೇ ನಗರಸಭಾಧ್ಯಕ್ಷರು ಹಾಗೂ ಸದಸ್ಯರೊಂದಿಗೆ ನಗರ ಸಂಚಾರ ಮಾಡಿ ನಗರದ ಪ್ರಮುಖ ಸಮಸ್ಯೆಗಳನ್ನು ಬಗೆ ಹರಿಸುವ ಕುರಿತು ಚಿಂತನೆ ನಡೆಸಲಾಗುವದೆಂದು ಶಿವು ಮಾದಪ್ಪ ಭರವಸೆ ನೀಡಿದರು.

ಜಿಲ್ಲೆಯಲ್ಲಿ ವಿಶೇಷ ಪ್ಯಾಕೇಜ್‍ನಡಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದೆ. ಹೀಗಿದ್ದು, ಕಾಮಗಾರಿಗಳು ಅನುಷ್ಠಾನವಾಗದಿರುವದನ್ನು ಪರಿಗಣಿಸಿ ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪÀÅ್ಪ ಪಟ್ಟಿಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗುವದು ಎಂದರು.

ಸಂಪಾಜೆಗೆ ಪೆÀÇೀಯಿ : ರಾಷ್ಟ್ರದ ಜನತೆಯ ಬದುಕನ್ನು ಹದಗೆಡಿಸಿದ ನೋಟು ಅಮಾನ್ಯೀಕರಣದ ನಿರ್ಧಾರವನ್ನು ಪ್ರಧಾನಿ ಮೋದಿ ಅವರು ಪ್ರಕಟಿಸಿದ ನವೆಂಬರ್ 8 ರಂದು ಕೊಡಗು ಜಿಲ್ಲಾ ಕಾಂಗ್ರೆಸ್ ಮತ್ತು ಜಿಲ್ಲೆಯ ಐದು ಬ್ಲಾಕ್ ಕಾಂಗ್ರೆಸ್‍ಗಳಿಂದ ಕರಾಳ ದಿನವನ್ನು ಆಚರಿಸಲಾಗುವದು. ನೆರೆಯ ಸುಳ್ಯ ಬ್ಲಾಕ್ ಕಾಂಗ್ರೆಸ್‍ನ ಸಹಕಾರದೊಂದಿಗೆ ಸುಳ್ಯದಿಂದ ಸಂಪಾಜೆಯವರೆಗೆ ‘ಸಂಪಾಜೆಗೆ ಪೆÀÇೀಯಿ’ ಕಾಲ್ನಡಿಗೆ ಜಾಥ ಕಾರ್ಯಕ್ರಮ ನಡೆಯಲಿದೆಯೆಂದು ಶಿವು ಮಾದಪ್ಪ ತಿಳಿಸಿದರು. ನಾಪೆÀÇೀಕ್ಲು ಬ್ಲಾಕ್‍ನಿಂದ ನಡೆಯುವ ಈ ಪ್ರತಿಭಟನೆಯನ್ನು ಕೆಪಿಸಿಸಿ ಮತ್ತು ಎಐಸಿಸಿಗಳ ನಿರ್ದೇಶನದ ಅನ್ವಯ ಜಿಲ್ಲಾ ಮಟ್ಟದ ಪ್ರತಿಭಟನಾ ಕಾರ್ಯಕ್ರಮವನ್ನಾಗಿ ನಡೆಸಲಾಗುತ್ತಿದ್ದು, ಇದರಲ್ಲಿ ಜಿಲ್ಲೆಯ ಎಲ್ಲಾ ಬ್ಲಾಕ್‍ಗಳ ಕಾಂಗ್ರೆಸ್ಸಿಗರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ವಕ್ತಾರರಾಗಿ ಅಯ್ಯಪ್ಪ : ಕೊಡಗು ಜಿಲ್ಲಾ ಕಾಂಗ್ರೆಸ್‍ನ ನೂತನ ವಕ್ತಾರರನ್ನಾಗಿ ನಗರಸಭೆಯ ಮಾಜಿ ಸದಸ್ಯ ಟಿ.ಎಂ.ಅಯ್ಯಪ್ಪ ಅವರನ್ನು ನಿಯುಕ್ತಿಗೊಳಿಸಿರುವದಾಗಿ ಇದೇ ಸಂದರ್ಭ ಶಿವು ಮಾದಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಕ್ತಾರ ಟಿ.ಎಂ.ಅಯ್ಯಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್ ಹಾಗೂ ತಾ.ಪಂ ಸದಸ್ಯ ಅಪÀÅ್ರ ರವೀಂದ್ರ ಉಪಸ್ಥಿತರಿದ್ದರು.