ಮಡಿಕೇರಿ, ನ.3 : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಮೂರೂವರೆ ವರ್ಷಗಳ ಅವಧಿಯಲ್ಲಿ ರಾಷ್ಟ್ರದ ಜನತೆಗೆ ಸಾವಿರಾರು ಸುಳ್ಳುಗಳನ್ನು ಹೇಳಿದೆ ಎಂದು ಆರೋಪಿಸಿರುವ ನಾಪೆÀÇೀಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ರಮಾನಾಥ್, ಪ್ರಧಾನಿ ವಿರುದ್ಧ ಜನಾಂದೋಲನ ರೂಪವಾಗಿ ನಾಪೆÀÇೀಕ್ಲು ಮತ್ತು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ತಾ. 8 ರಂದು ಸುಳ್ಯದಿಂದ ಸಂಪಾಜೆ ಯವರೆಗೆ ‘ಸಂಪಾಜೆಗೆ ಪೆÀÇೀಯಿ’ ಬೃಹತ್ ಕಾಲ್ನಡಿಗೆ ಜಾಥಾವನ್ನು ಆಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ಕಪÀÅ್ಪ ಹಣ, ಭಯೋತ್ಪಾದನೆಗಳ ನಿಗ್ರಹಕ್ಕಾಗಿ ನೋಟು ಅಮಾನ್ಯೀಕರಣ ಮಾಡಿರುವದಾಗಿ ಹೇಳಿ ಜನರ ಬದುಕನ್ನು ಅಸಹನೀಯ ಗೊಳಿಸಿದ್ದಾರೆ ಎಂದು ಆರೋಪಿಸಿದರು. ರಾಷ್ಟ್ರದ ಜನತೆಯನ್ನು ಭ್ರಮೆಯಲ್ಲಿ ತೇಲಿ ಬಿಟ್ಟ ದಿನವಾದ ನ.8 ರಂದು ಕೇಂದ್ರದ ಕ್ರಮಗಳನ್ನು ವಿರೋಧಿಸಿ ಜಾಥಾವನ್ನು ಆಯೋಜಿಸಿರುವದಾಗಿ ಮಾಹಿತಿ ನೀಡಿದರು.

ಕಾಲ್ನಡಿಗೆ ಜಾಥಾವನ್ನು ಅಂದು ಬೆಳಿಗ್ಗೆ 9 ಗಂಟೆಗೆ ಸುಳ್ಯದಲ್ಲಿ ರಾಜ್ಯ ಅರಣ್ಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಉದ್ಘಾಟಿಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸದಸ್ಯರಾದ ಡಾ| ರಘು, ಎಐಸಿಸಿ ಕಾರ್ಯದರ್ಶಿ ಪಿ.ಸಿ. ವಿಷ್ಣುನಾಥ್, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಸ್. ಶಂಕರ್, ಎಂಎಲ್‍ಸಿ ವೀಣಾ ಅಚ್ಚಯ್ಯ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಕೆಪಿಸಿಸಿ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ ಸೇರಿದಂತೆ ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ಸಂಪಾಜೆಯಲ್ಲಿ ಜಾಥ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.

ಕಳೆದ 2014 ರಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡ, ಮಧ್ಯಮ ಮತ್ತು ಯುವ ಜನರಿಗೆ ಕೇವಲ ಭರವಸೆಗಳನ್ನು ನೀಡುತ್ತಾ ಬಂದಿದೆಯಷ್ಟೆ ಎಂದು ರಮಾನಾಥ್ ಟೀಕಿಸಿದರು. ಅಧಿಕಾರಕ್ಕೆ ಬಂದ ಆರಂಭದಲ್ಲೇ ಪ್ರಧಾನಿ ಮೋದಿ ಅವರು ವಿದೇಶಿ ಪ್ರವಾಸಕ್ಕೆ ಕೋಟ್ಯಂತರ ಹಣವನ್ನು ವ್ಯಯಿಸಿದ್ದಾರೆ ಎಂದು ಟೀಕಿಸಿದÀರು. ಅಧಿಕಾರಕ್ಕೆ ಬರುವದಕ್ಕೆ ಮುನ್ನ 60 ದಿನಗಳಲ್ಲಿ ವಿದೇಶಗಳಲ್ಲಿರುವ ಕಪ್ಪು ಹಣವನ್ನು ತಂದು ಜನಸಾಮಾನ್ಯರಿಗೆ ಹಂಚುವದಾಗಿ ನೀಡಿದ ಭರವಸೆಗಳು ಏನಾಯಿತು ಎಂದು ಪ್ರಶ್ನಿಸಿದರು.

ಸ್ವಚ್ಛ ಭಾರತ್ ಮತ್ತು ಜನಧನ್ ಯೋಜನೆಗಳು ಬೂಟಾಟಿಕೆಯಾಗಿದ್ದು, ಇವುಗಳ ಪ್ರಚಾರಕ್ಕೆ ವ್ಯಯಿಸಿದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿದ್ದರೆ ಸಮಾಜದಲ್ಲಿ ಬದಲಾವಣೆ ಕಾಣಬಹುದಿತ್ತು. ಹಿಂದಿನ ಆರ್‍ಬಿಐ ಮುಖ್ಯಸ್ಥ ರಘುರಾಂ ರಾಜನ್ ಅವರೇ ನೋಟು ಅಮಾನ್ಯೀಕರಣ ದೇಶದ ಆರ್ಥಿಕತೆಗೆ ಹಿನ್ನಡೆಯನ್ನು ಉಂಟು ಮಾಡುತ್ತದೆ ಎಂದು ಉಲ್ಲೇಖಿಸಿದ್ದರು ಎಂದು ರಮಾನಾಥ್ ಹೇಳಿದರು.

ಯುಪಿಎ ಕಾಲದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರದ ಅವಧಿಯಲ್ಲಿ ದೇಶದ ಆರ್ಥಿಕತೆಯ ಮಟ್ಟ ಉತ್ತಮವಾಗಿತ್ತು. ಆದರೆ, ಪ್ರಸ್ತುತ ರಾಷ್ಟ್ರದ ಜಿಡಿಪಿ ಕುಸಿತಕ್ಕೆ ಒಳಗಾಗಿ ಎಲ್ಲವೂ ದುಬಾರಿಯಾಗಿದೆ ಎಂದು ಟೀಕಿಸಿದರು.

ನೆರೆಯ ಸುಳ್ಯದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಮತ್ತು ಕೊಡಗಿನಲ್ಲಿ ಕಳೆÉದ 15 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿರುವದರಿಂದ ಈ ವಿಭಾಗಗಳಲ್ಲಿ ನಿರೀಕ್ಷೆಯ ಅಭಿವೃದ್ಧಿ ಸಾಧ್ಯವಾಗಿಲ್ಲವೆಂದು ಇದೇ ಸಂದರ್ಭ ತಿಳಿಸಿ, ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಜಾಥಾ ನಡೆಸುತ್ತಿರುವದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಯು. ಹ್ಯಾರಿಸ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಸಂಪಾಜೆ, ಉಪಾಧ್ಯಕ್ಷ ರಾಘವೇಂದ್ರ, ಸಂಪಾಜೆ ಕಾಂಗ್ರೆಸ್‍ನ ಪಿ.ಎಲ್. ಸುರೇಶ್ ಹಾಗೂ ಭಾಗಮಂಡಲದ ಸುನಿಲ್ ಪತ್ರಾವೋ ಉಪಸ್ಥಿತರಿದ್ದರು.