ಕೂಡಿಗೆ, ನ. 3: ಕೂಡಿಗೆ ಕ್ರೀಡಾಶಾಲೆಯ ಇಬ್ಬರು ಕ್ರೀಡಾಪಟುಗಳು 63ನೇ ರಾಷ್ಟ್ರೀಯ ಶಾಲಾ ಅಥ್ಲೇಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ.

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಶಾಲಾ ಬಾಲಕರ ವಿಭಾಗದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಉದ್ದಜಿಗಿತ, 100 ಮೀ. ಹರ್ಡಲ್ಸ್‍ನಲ್ಲಿ ದ್ವಿತೀಯ ಸ್ಥಾನ ಹಾಗೂ ತ್ರಿವಳಿ ಜಿಗಿತದಲ್ಲಿ ತೃತೀಯ ಸ್ಥಾನಗಳಿಸಿರುವ ಕೂಡಿಗೆ ಕ್ರೀಡಾಶಾಲೆಯ ಕ್ರೀಡಾಪಟು ಎ.ಆರ್. ಇರ್ಫಾನ್ ಮತ್ತು ಬಾಲಕಿಯರ ವಿಭಾಗದಲ್ಲಿ 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕವನ್ನು ಪಡೆದಿದ್ದು, 3000 ಮೀ. ಓಟದಲ್ಲಿ ದ್ವಿತೀಯ ಸ್ಥಾನಗಳಿಸಿ ಬೆಳ್ಳಿ ಪದಕವನ್ನು ಗಳಿಸಿರುವ ಸಿ.ಎಂ. ರಾಶಿ ತಾ. 7 ರಿಂದ 12 ರವರೆಗೆ ಮಧ್ಯಪ್ರದೇಶ ರಾಜ್ಯದ ಭೂಪಾಲ್‍ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಇರ್ಫಾನ್, ಬಾಲರಾಜ್, ಸಚಿನ್, ಸಾಯಿದರ್ಶನ್ ತಂಡವು 4x100 ಮೀಟರ್ ರಿಲೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅಥ್ಲೆಟಿಕ್ ತರಬೇತುದಾರ ಅಂತೋಣಿ ಡಿಸೋಜ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಕುಂತಿ ಬೋಪಯ್ಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದ್ದಾರೆ.