ಕುಶಾಲನಗರ, ನ. 4: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ 2ನೇ ಹಂತದ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲು ಕಾವೇರಿ ತಾಲೂಕು ಹೋರಾಟ ಸಮಿತಿಯ ಕೇಂದ್ರ ಸಮಿತಿ ಸದಸ್ಯರ ಸಭೆ ಕನ್ನಿಕಾ ಸಭಾಂಗಣದಲ್ಲಿ ನಡೆಯಿತು.

ಡಿಸೆಂಬರ್ 9 ರಂದು ಪ್ರಸ್ತಾವಿತ ಕಾವೇರಿ ತಾಲೂಕು ವ್ಯಾಪ್ತಿಯಲ್ಲಿ ರಸ್ತೆ ತಡೆ ಮತ್ತು ಬಂದ್ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ. ಸಭೆಯ ನಂತರ ಮಾತನಾಡಿದ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ತಾಲೂಕು ರಚನಾ ಬೇಡಿಕೆಯನ್ನು ಸರ್ಕಾರದ ಮುಂದೆ ಪರಿಣಾಮಕಾರಿಯಾಗಿ ಮಂಡಿಸಲು ಸಫಲವಾಗಿದೆ. 2ನೇ ಹಂತದ ಹೋರಾಟದಲ್ಲಿ ತಾ. 12 ರಿಂದ ಕುಶಾಲನಗರದಲ್ಲಿ ಮತ್ತೆ ಸರಣಿ ಪ್ರತಿಭಟನೆಗಳನ್ನು ಕೈಗೆತ್ತಿಕೊಳ್ಳ ಲಾಗುವದು. ಹೋರಾಟ ಸಮಿತಿಯ ತಂಡ ಬೆಂಗಳೂರಿನಲ್ಲಿ ಬೀಡುಬಿಟ್ಟು ರಾಜಕೀಯ ಪ್ರಮುಖರಿಗೆ ತಾಲೂಕು ನಂತರ ಮಾತನಾಡಿದ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ತಾಲೂಕು ರಚನಾ ಬೇಡಿಕೆಯನ್ನು ಸರ್ಕಾರದ ಮುಂದೆ ಪರಿಣಾಮಕಾರಿಯಾಗಿ ಮಂಡಿಸಲು ಸಫಲವಾಗಿದೆ. 2ನೇ ಹಂತದ ಹೋರಾಟದಲ್ಲಿ ತಾ. 12 ರಿಂದ ಕುಶಾಲನಗರದಲ್ಲಿ ಮತ್ತೆ ಸರಣಿ ಪ್ರತಿಭಟನೆಗಳನ್ನು ಕೈಗೆತ್ತಿಕೊಳ್ಳ ಲಾಗುವದು. ಹೋರಾಟ ಸಮಿತಿಯ ತಂಡ ಬೆಂಗಳೂರಿನಲ್ಲಿ ಬೀಡುಬಿಟ್ಟು ರಾಜಕೀಯ ಪ್ರಮುಖರಿಗೆ ತಾಲೂಕು ಬಂದ್ ಮತ್ತು ರಸ್ತೆ ತಡೆ ಹಿನ್ನೆಲೆಯಲ್ಲಿ ಈ ಪಾದಯಾತ್ರೆ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿಯ ಕೆಲಸ ಮಾಡಲಾಗುವದು ಎಂದು ತಿಳಿಸಿದರು.

ಮೂರನೇ ಹಂತದ ಹೋರಾಟದ ಭಾಗವಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ಬೆಂಗಳೂರು ಚಲೋ ಕಾರ್ಯಕ್ರಮದ ಬಗ್ಗೆ ಚಿಂತನೆ ನಡೆಸಲಾಗುವದು ಎಂದು ಅವರು ಮಾಹಿತಿ ನೀಡಿದರು.

ಕೇಂದ್ರ ಸಮಿತಿ ಕಾರ್ಯದರ್ಶಿ ಆರ್.ಕೆ. ನಾಗೇಂದ್ರ ಬಾಬು, ಪ.ಪಂ. ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್, ಜಿ.ಪಂ. ಸದಸ್ಯೆ ಸುನಿತಾ, ತಾ.ಪಂ. ಸದಸ್ಯೆ ವಿಮಲಾ, ವಿವಿಧ ಸ್ಥಾನೀಯ ಸಮಿತಿಗಳ ಪದಾಧಿಕಾರಿಗಳು ಸಭೆಯಲ್ಲಿದ್ದರು.