ಕೂಡಿಗೆ, ನ. 3: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಸಿಕ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಜಮಾಬಂದಿ ಬಗ್ಗೆ ಚರ್ಚೆಗಳು ನಡೆದವು. ನಂತರ ಹಾಜರಿದ್ದ ಸದಸ್ಯರುಗಳು ತಮ್ಮ ತಮ್ಮ ವಾರ್ಡಿನ ಕಾಮಗಾರಿಗಳ ಕ್ರಿಯಾ ಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. 14ನೇ ಹಣಕಾಸಿನ ಯೋಜನೆಯ ಬಗ್ಗೆ ಚರ್ಚೆ ನಡೆದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ಯೋಜನೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಸದಸ್ಯರುಗಳು ತಮ್ಮ ಅಭಿಪ್ರಾಯಗಳನ್ನು ಸಭೆಗೆ ತಿಳಿಸಿದರು. ಶುಚಿತ್ವ ಮತ್ತು ಕುಡಿಯುವ ನೀರಿನ ಯೋಜನೆಗೆ ಹೆಚ್ಚು ಹಣವನ್ನು ಇಡುವದರ ಮೂಲಕ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಲಹೆ ನೀಡಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಯೆಷಾ, ಸಭೆಗೆ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಹಾಗೂ ಸರಕಾರದ ಸುತ್ತೋಲೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ವಿ. ಸಣ್ಣಪ್ಪ, ಸದಸ್ಯರಾದ ಫಿಲೋಮಿನ, ಪಾರ್ವತಮ್ಮ ಸೋಮಾಚಾರಿ, ಸಾವಿತ್ರಿ ರಾಜನ್, ಪಾರ್ವತಮ್ಮ ರಾಮೇಗೌಡ, ಜ್ಯೋತಿ, ಡಿ.ಎಸ್. ಗಣೇಶ್, ಮಹೇಶ್ ಕಾಳಪ್ಪ, ದೇವರಾಜ್, ಸುರೇಶ್, ಕೆ.ಜೆ. ಮಂಜುನಾಥ, ಈರಪ್ಪ, ಶಿವಣ್ಣ, ಶೇಖರ್, ಶ್ರೀನಿವಾಸ್, ಶಿಲ್ಪ, ಜಲಜಾಕ್ಷಿ, ಶೀಲ ಲಕ್ಷ್ಮಣ್‍ರಾಜ್‍ಅರಸ್, ಜ್ಯೋತಿ ಪ್ರಮೀಳ, ನದಿಯ ಇದ್ದರು.