ನಾಪೋಕ್ಲು, ನ. 3: ಇಲ್ಲಿಗೆ ಸಮೀಪದ ಕೊಳಕೇರಿ ಚಪ್ಪೆಂಡಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಕೇಲೆಟ್ಟಿರ ಕಾವೇರಮ್ಮ ಮುತ್ತಣ್ಣ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಕಾವೇರಮ್ಮ ಅವರ 26 ವರ್ಷಗಳ ಸೇವಾ ಅವಧಿಯ 10 ವರ್ಷ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದು, ನಿವೃತ್ತಿ ಹೊಂದಿ ವಿಶ್ರಾಂತ ಜೀವನಕ್ಕೆ ಕಾಲಿಡುತ್ತಿರುವದರಿಂದ ಶಾಲಾ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲು ಹೊದಿಸಿ ಫಲತಾಂಬೂಲ ನೀಡಿ ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ವೈ.ಅಶ್ರಫ್ ವಹಿಸಿದ್ದ ವೇದಿಕೆಯಲ್ಲಿ ಸ್ಥಳ ದಾನಿಗಳಾದ ಅಬ್ಬಾಸ್, ಶಿಕ್ಷಣ ತಜ್ಞರಾದ ಮಹಮ್ಮದ್ ಹಾಜಿ, ಮಮ್ಮುಞÂ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಅಬ್ದುಲ್ಲಾ, ಸಿ.ಆರ್.ಪಿ. ಮಾದೇಶ್, ಮುಖ್ಯ ಶಿಕ್ಷಕಿ ಹೇಮಾವತಿ, ಎಸ್. ಡಿ.ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥನೆಗೈದ ಕಾರ್ಯಕ್ರಮವನ್ನು ಸಹ ಶಿಕ್ಷಕ ಗಣೇಶ್ ಸ್ವಾಗತಿಸಿ, ಪ್ರವೀಣ್ ನಿರೂಪಿಸಿ, ಹೇಮಾವತಿ ವಂದಿಸಿದರು.