ಸಿದ್ದಾಪುರ, ನ. 3: ಭ್ರಷ್ಟಾಚಾರ ಬಹುದೊಡ್ಡ ಪಿಡುಗು. ಇದನ್ನು ಹೋಗಲಾಡಿಸಬೇಕೆಂದು ವೀರಾಜ ಪೇಟೆ ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ ಅಂಚಿ ಅವರು ಕರೆ ನೀಡಿದರು.

ವೀರಾಜಪೇಟೆ ತಾಲೂಕು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ ಹಾಗೂ ಸಿದ್ದಾಪುರ ಗುಹ್ಯ ಅಗಸ್ತ್ಯೇಶ್ವರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಸಪ್ತಾಹ, ಲಿಂಗ ಪತ್ತೆ ಮತ್ತು ಸ್ತ್ರೀ ಭ್ರೂಣ ಹತ್ಯೆ ನೀಷೇಧದ ಕುರಿತು ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವರದಕ್ಷಿಣೆ ಕೊಡುವದು ಹಾಗೂ ಪಡೆದು ಕೊಳ್ಳುವದು ಅಪರಾಧವಾಗಿದ್ದು. ಅದೇ ರೀತಿ ಲಂಚ ಕೊಡುವದು ಮತ್ತು ಪಡೆದುಕೊಳ್ಳುವದು ಅಪರಾಧ ವೆಂದರು. ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಎಂ.ಜಿ. ಕಾಮತ್ ಮಾತನಾಡಿ, ತಾಯಿಯ ಗರ್ಭಗುಡಿ ದೇವರ ಗುಡಿ ಇದ್ದಂತೆ. ಈ ಹಿನ್ನೆಲೆ ಸ್ತ್ರೀ ಭ್ರೂಣ ಹತ್ಯೆ ಮಹಾ ಅಪರಾಧವೆಂದು ಹೇಳಿದರು.

ಇದೆ ಸಂದರ್ಭ ಭ್ರೂಣ ಹತ್ಯೆ ಬಗ್ಗೆ ವಕೀಲೆ ಸಿಂಧೂರ ಎನ್. ಸ್ವಾಮಿ ಹಾಗೂ ವಕೀಲ ಎಂ.ಎಸ್. ವೆಂಕಟೇಶ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಅಗಸ್ತ್ಯೇಶ್ವರ ಸಹಕಾರ ಸಂಘದ ಉಪಾಧ್ಯಕ್ಷ ಎಂ. ಬೀಜೊಯ್, ಸ್ತ್ರೀ ಶಕ್ತಿ ಮತ್ತು ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ದೇವಜಾನು, ವಕೀಲ ಕೃಷ್ಣಮೂರ್ತಿ ಹಾಗೂ ಸಹಕಾರ ಸಂಘದ ನಿರ್ದೇಶಕರು ಹಾಜರಿದ್ದರು. ಪಾರ್ವತಿ ಸ್ವಾಗತಿಸಿ, ವೆಂಕಟೇಶ್ ವಂದಿಸಿದರು.