ಸೋಮವಾರಪೇಟೆ, ನ.4: ರಾಜಕೀಯ ಹಿತದ ಮತಕ್ಕಾಗಿ ದೇಶದಲ್ಲಿ ಧರ್ಮ ಹಾಗೂ ದೇಶದ್ರೋಹಿಗಳ ವೈಭವೀಕರಣ ನಡೆಯುತ್ತಿದ್ದು, ಇದನ್ನು ಪ್ರಜ್ಞಾವಂತ ಹಿಂದೂ ಸಮಾಜ ಎಂದಿಗೂ ಒಪ್ಪಬಾರದು ಎಂದು ಆರ್‍ಎಸ್‍ಎಸ್ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಕರೆ ನೀಡಿದರು.ಸಮೀಪದ ತೋಳೂರು ಶೆಟ್ಟಳ್ಳಿಯಲ್ಲಿ ಆಯೋಜಿಸ ಲಾಗಿದ್ದ ಆರ್‍ಎಸ್‍ಎಸ್ ಮಂಡಲ ಶಾಖಾ ವಾರ್ಷಿಕೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಅವರು, ಕೊಡಗಿನ ಪೂರ್ವಿಕರನ್ನು ನಿರಾಯುಧರಾಗಿ ಬರುವಂತೆ ಮಾಡಿ ಕಪಟತನದಿಂದ ಹತ್ಯೆ ಮಾಡಿದ ಟಿಪ್ಪುವಿನ ಜಯಂತಿ ಆಚರಣೆಗೆ ಮುಂದಾಗಿರುವದು ಸರಿಯಲ್ಲ ಎಂದು ಪ್ರತಿಪಾದಿಸಿದರು.

ಟಿಪ್ಪುವಿನ ಕ್ರೌರ್ಯಕ್ಕೆ ಕೊಡಗಿನ ಭಾಗಮಂಡಲ, ಮಲಬಾರ್ ಪ್ರದೇಶ ಸೇರಿದಂತೆ ನೂರಾರು ದೇವಾಲಯಗಳು ಸಾಕ್ಷಿಯಾಗಿವೆ. ಬಲವಂತದ ಮತಾಂತರ, ಅತ್ಯಾಚಾರ, ದೌರ್ಜನ್ಯ ನಡೆಸಿದ ವ್ಯಕ್ತಿಯನ್ನು ಜಯಂತಿ ಹೆಸರಿನಲ್ಲಿ ವೈಭವೀಕರಿಸಲಾಗುತ್ತಿದೆ. ಇದರ ವಿರುದ್ಧ ಹೋರಾಡಿದ ಕುಟ್ಟಪ್ಪ ಹತ್ಯೆ ನಡೆದಿದೆ. ಹಿಂದೂ ಸಮಾಜ ಇನ್ನಷ್ಟು ಸಂಘಟಿತವಾಗಿ ಇಂತಹ ದೌರ್ಜನ್ಯಗಳ ವಿರುದ್ಧ ಹೋರಾಟ ನಡೆಸಬೇಕಿದೆ ಎಂದರು.

ಗೋಹತ್ಯೆ, ಲವ್ ಜಿಹಾದ್ ಬಗ್ಗೆ ಸಮಾಜ ಜಾಗೃತಗೊಳ್ಳಬೇಕು. ಭಾರತದಲ್ಲಿರುವ ಎಲ್ಲರೂ ಈ ದೇಶದ ಆದರ್ಶ ಪುರುಷರು, ಸಂಸ್ಕøತಿ, ಧಾರ್ಮಿಕ ನಂಬಿಕೆಗಳಿಗೆ ಗೌರವ ನೀಡಬೇಕು. ಆದರೆ ಆದರ್ಶ ಪುರುಷ ಶ್ರೀರಾಮನ ಬಗ್ಗೆಯೇ ಅವಹೇಳನ ಮಾಡುವ ಕಾರ್ಯ ನಡೆಯುತ್ತಿದೆ. ಹಿಂದೂ ಧರ್ಮ ಒಂದಾದರೆ

(ಮೊದಲ ಪುಟದಿಂದ) ಮಾತ್ರ ದುಷ್ಟ ಶಕ್ತಿಗಳ ನಿರ್ನಾಮ ಸಾಧ್ಯ. ಭಾರತ ದೇಶ ಉಳಿಯಬೇಕಾದರೆ ಇಲ್ಲಿನ ಅಸ್ಮಿತೆಯಾಗಿರುವ ಹಿಂದೂ ಸಮಾಜ ಉಳಿಯಬೇಕಿದೆ ಎಂದು ಅಭಿಪ್ರಾಯಿಸಿದರು.

ಆರ್‍ಎಸ್‍ಎಸ್ ಶಾಖೆಗಳು ದೇಶಭಕ್ತಿಯನ್ನು ಉದ್ದೀಪನ ಗೊಳಿಸುವ ಶಾಲೆಗಳಾಗಿವೆ. ಮತ್ತೆ ಭಾರತವನ್ನು ಜಗತ್ತಿಗೆ ಗುರುವನ್ನಾಗಿ ಮಾಡುವ ಸಂಕಲ್ಪದಿಂದ ಕಳೆದ 92 (ಮೊದಲ ಪುಟದಿಂದ) ಮಾತ್ರ ದುಷ್ಟ ಶಕ್ತಿಗಳ ನಿರ್ನಾಮ ಸಾಧ್ಯ. ಭಾರತ ದೇಶ ಉಳಿಯಬೇಕಾದರೆ ಇಲ್ಲಿನ ಅಸ್ಮಿತೆಯಾಗಿರುವ ಹಿಂದೂ ಸಮಾಜ ಉಳಿಯಬೇಕಿದೆ ಎಂದು ಅಭಿಪ್ರಾಯಿಸಿದರು.

ಆರ್‍ಎಸ್‍ಎಸ್ ಶಾಖೆಗಳು ದೇಶಭಕ್ತಿಯನ್ನು ಉದ್ದೀಪನ ಗೊಳಿಸುವ ಶಾಲೆಗಳಾಗಿವೆ. ಮತ್ತೆ ಭಾರತವನ್ನು ಜಗತ್ತಿಗೆ ಗುರುವನ್ನಾಗಿ ಮಾಡುವ ಸಂಕಲ್ಪದಿಂದ ಕಳೆದ 92 ಸಿ.ಕೆ. ಮಲ್ಲಪ್ಪ ವಹಿಸಿದ್ದರು. ಸ್ವಯಂ ಸೇವಕರಿಂದ ದಂಡ ಕೌಶಲ್ಯ, ನಿಯುದ್ಧ, ಯೋಗಾಸನ, ಆಟ ಪ್ರದರ್ಶನಗಳು ನಡೆದವು.

ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಮಂದಿ ಸಾರ್ವಜನಿಕರು, ಆರ್‍ಎಸ್‍ಎಸ್ ಸ್ವಯಂ

ಸೇವಕರು ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು.