ಮಡಿಕೇರಿ, ನ. 4: ವೀರಾಜಪೇಟೆ ರೋಟರಿ ಕ್ಲಬ್ ವತಿಯಿಂದ ಕೊಡಗು ವೈದ್ಯಕೀಯ ಕಾಲೇಜು, ತಾಲೂಕು ಕಾನೂನು ಸೇವಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ವೀರಾಜಪೇಟೆಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಜಯಪ್ರಕಾಶ್ ಶಿಬಿರವನ್ನು ಸ್ವತಃ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು. ರೋಟರಿಯಂಥ ಸೇವಾ ಸಂಸ್ಥೆಗಳು ರಕ್ತದಾನ ಶಿಬಿರದ ಮೂಲಕ ರಕ್ತ ಅಗತ್ಯವುಳ್ಳವರಿಗೆ ನೆರವು ನೀಡಲು ಮುಂದಾಗಿ ರುವದನ್ನು ನ್ಯಾಯಾಧೀಶರು ಶ್ಲಾಘಿಸಿದರು. ಭ್ರಷ್ಟಾಚಾರದ ವಿರುದ್ಧ ರೋಟರಿಯಂಥ ಸೇವಾ-ಸಂಸ್ಥೆಗಳು ಕಾರ್ಯಪ್ರವೃತ್ತವಾಗಬೇಕೆಂದು ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ಪ್ರತಿಜ್ಞಾ ವಿಧಿಯನ್ನು ನ್ಯಾಯಾಧೀಶರು ಬೋಧಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಶಾಂತರಾಮ್ ಕಾಮತ್, ಗೌರವ ಕಾರ್ಯದರ್ಶಿ ಆದಿತ್ಯ, ಜೋನಲ್ ಲೆಫ್ಟಿನೆಂಟ್ ಹರಿಶಂಕರ್ ಪ್ರಸಾದ್, ಕೊಡಗು ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿ ಡಾ. ಕರುಂಬಯ್ಯ, ವೀರಾಜಪೇಟೆ ರೋಟರಿ ಶಾಲಾ ಸಮಿತಿ ಅಧ್ಯಕ್ಷ ಬಿ.ಬಿ. ಮಾದಪ್ಪ, ಮೋಹನ್ ಅಯ್ಯಪ್ಪ, ಸುನಿಲ್ ನಾಣಯ್ಯ, ಡಾ. ಲವೀನ್, ಡಾ. ಉತ್ತಪ್ಪ, ಪ್ರಥ್ವಿ, ಅಯ್ಯಣ್ಣ, ಚಿತ್ರಭಾನು, ಭರತ್, ರಾಬಿನ್, ಸರೋಜ ಪಾಲ್ಗೊಂಡಿದ್ದರು. ಶಿಬಿರದಲ್ಲಿ 28 ಮಂದಿ ರಕ್ತದಾನ ನೀಡಿದರು.