ಮಡಿಕೇರಿ, ನ. 6: ಕಾವ್ಯ ಮತ್ತು ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ಸಂತಶ್ರೇಷ್ಠ, ದಾರ್ಶನಿಕ ಭಕ್ತ ಕನಕದಾಸರ ಕೀರ್ತನೆಗಳು ಸಾರ್ವಕಾಲಿಕ ಎಂದು ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಭಕ್ತ ಕನಕದಾಸ ಜಯಂತ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಪ್ರಕಾರಗಳಲ್ಲಿ ದಾಸ ಸಾಹಿತ್ಯವೂ ಒಂದು. ಕನಕದಾಸರು ದಾಸ ಸಾಹಿತ್ಯದ ಅಗ್ರಗಣ್ಯರಾಗಿದ್ದು, ದಾಸರಾಗಿ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ ಎಂದು ನೆನಪಿಸಿದರು.
ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ ರಾಜ್ಯದಲ್ಲಿ ಹರಿದಾಸ ಪರಂಪರೆಗೆ ಸುಮಾರು ಐದುನೂರು ವರ್ಷಗಳ ಇತಿಹಾಸವಿದೆ. ಕನಕದಾಸರು ಹಾಗೂ ಪುರಂದರ ದಾಸರಂತಹ ಸಂತರಿಂದಾಗಿ ಸಮಾಜದಲ್ಲಿನ ಅಸಮಾನತೆ ಕಡಿಮೆಯಾದವು ಎಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ ಮಾತನಾಡಿ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನ ಹಾಗೂ ದಾಸ ಸಾಹಿತ್ಯಗಳೆರಡೂ ಪ್ರಮುಖ ಘಟ್ಟಗಳಾಗಿದ್ದು, ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸಾಹಿತ್ಯ ರಚಿಸುವ ಮೂಲಕ ಶಿಕ್ಷಣದ ಅರಿವು ಮೂಡಿಸಿದರು ಎಂದರು.
ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕೆ.ವಿ.ಸುರೇಶ್ ಮಾತನಾಡಿ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ, ನಾಡುಕಂಡ ಅಪರೂಪದ ದಾರ್ಶನಿಕ ಭಕ್ತ ಕನಕದಾಸರಾಗಿದ್ದಾರೆ. ಕನಕದಾಸರು ತತ್ವ ಪರಂಪರೆಯ ವಾರಸುದಾರರು ಎಂದರೆ ತಪ್ಪಾಗ ಲಾರದು, ದಾಸರಾಗಿ ಕೀರ್ತನೆ ಕಾರರಾಗಿ 300 ಕ್ಕೂ ಹೆಚ್ಚ್ಚು ಕೀರ್ತನೆಗಳನ್ನು ಬರೆದಿದ್ದಾರೆ ಎಂದರು.
ಕನಕದಾಸರು ‘ಕುಲ ಕುಲವೆಂದು ಹೊಡೆದಾಡದಿರಿ, ಕುಲದ ನೆಲೆಯನೇನಾದರು ಬಲ್ಲಿರಾ? ಕುಲ ಕುಲವೆನ್ನತಿಹರು ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ ಆತ್ಮ ಯಾವ ಕುಲ -ಜೀವ ಯಾವ ಕುಲ ತತ್ವೇಂದ್ರಿಯ ಕುಲ ಪೇಳಿರಯ್ಯಾ’ ಹೀಗೆ ಕುಲ-ಗೋತ್ರಗಳ ಬಗ್ಗೆ ಕನಕದಾಸರು ಹೊಂದಿದ್ದ ನಿಲುವು ವೇದ್ಯವಾಗುತ್ತದೆ ಎಂದು ನುಡಿದರು.
ಕನಕದಾಸರು ಮೋಹನ ತರಂಗಿಣಿ (ಶೃಂಗಾರ ರಸಕಾವ್ಯ) ಮತ್ತು ನಳ ಚರಿತ್ರೆ (ನಳ ದಮಯಂತಿಯರ ಪ್ರೇಮ ಕಾವ್ಯ) ರಚಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು. ಜತೆಗೆ ಹರಿಭಕ್ತಸಾರ (ಅನುಭಾವ ಲಘು ಕಾವ್ಯ) ಮತ್ತು ರಾಮಧ್ಯಾನ ಚರಿತ್ರೆ (ಸಾಮಾಜಿಕ ಆಶಯಗಳ ನ್ನೊಳಗೊಂಡ ಲಘುಕಾವ್ಯ)ಗಳು ಕನಕದಾಸರ ವೈವಿಧÀ್ಯಮಯ ಮತ್ತು ಜನಪರ ನಿಲುವಿಗೆ ಸಾಕ್ಷಿಯಂತಿದೆ ಎಂದು ನೆನಪಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರು ಮಾತನಾಡಿ ಬುದ್ದ, ಅಶೋಕ ಚಕ್ರವರ್ತಿ, ಕನಕದಾಸ ಇವರು ರಾಜ್ಯಾಭಾರ ಮಾಡುವದರ ಜೊತೆಗೆ ಸಮಾಜಕ್ಕೆ ತಮ್ಮದೇ ಆದ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.
ಕೊಡಗು ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ.ಗಂಗಾಧರ ಅವರು ಮಾತನಾಡಿ ಜಿಲ್ಲೆಯ ಕುಶಾಲನಗರದಲ್ಲಿ ಕುರುಬ ಸಮಾಜ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕನಕದಾಸರ ಜೀವನ ಚರಿತ್ರೆ ಕುರಿತು ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ಪ್ರೌಢಶಾಲಾ
ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು. ಜತೆಗೆ ಹರಿಭಕ್ತಸಾರ (ಅನುಭಾವ ಲಘು ಕಾವ್ಯ) ಮತ್ತು ರಾಮಧ್ಯಾನ ಚರಿತ್ರೆ (ಸಾಮಾಜಿಕ ಆಶಯಗಳ ನ್ನೊಳಗೊಂಡ ಲಘುಕಾವ್ಯ)ಗಳು ಕನಕದಾಸರ ವೈವಿಧÀ್ಯಮಯ ಮತ್ತು ಜನಪರ ನಿಲುವಿಗೆ ಸಾಕ್ಷಿಯಂತಿದೆ ಎಂದು ನೆನಪಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರು ಮಾತನಾಡಿ ಬುದ್ದ, ಅಶೋಕ ಚಕ್ರವರ್ತಿ, ಕನಕದಾಸ ಇವರು ರಾಜ್ಯಾಭಾರ ಮಾಡುವದರ ಜೊತೆಗೆ ಸಮಾಜಕ್ಕೆ ತಮ್ಮದೇ ಆದ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.
ಕೊಡಗು ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ.ಗಂಗಾಧರ ಅವರು ಮಾತನಾಡಿ ಜಿಲ್ಲೆಯ ಕುಶಾಲನಗರದಲ್ಲಿ ಕುರುಬ ಸಮಾಜ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಕಲ್ಪಿಸಬೇಕು ಎಂದು ಮನವಿ ಮಾಡಿದರು.