“ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತರತ್ನವನ್ನು ದೇಶಕಂಡ ಅಪ್ರತಿಮ ದೇಶಭಕ್ತ ವೀರ ಸೇನಾನಿ ‘ಫೀಲ್ಡ್ ಮಾರ್ಷಲ್ ಕಾರ್ಯಾಪ್ಪ’ನವರಿಗೆ ಕೊಡಬೇಕು; ನಾನು ಈ ಬಗ್ಗೆ ಪ್ರಾಮಾಣಿಕವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ’’ ಈ ಮಾತನ್ನು ಮೊನ್ನೆ ಹೇಳಿದ್ದು ದೇಶದ ಭೂಸೇನೆಯ ಮಹಾ ದಂಡನಾಯಕ ಜನರಲ್ ಬಿಪಿನ್ ರಾವತ್. ಇವರು ವೀರ ಸೇನಾನಿಯ ಜನ್ಮ ಭೂಮಿ ಕೊಡಗಿನ ಗೋಣಿಕೊಪ್ಪಲಿನಲ್ಲಿ ಫೀಲ್ಡ್‍ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ ತುಂಬಿ ತುಳುಕುತಿದ್ದ ನಿವೃತ್ತ ಯೋಧರು ಮತ್ತು ಕೊಡವರನ್ನು ಸಾಕ್ಷೀಕರಿಸಿ ಹೇಳಿದ್ದರು.

ಇದು ವಾಹಿನಿಗಳಲ್ಲಿ ಸುದ್ದಿಯಾಗಿದ್ದೆ ತಡ, ಆ ಕ್ಷಣದಲ್ಲಿ ಕಾಂಗ್ರೆಸಿನ ವಕ್ತಾರ ಅಭಿಷೇಕ್ ಮನು ಸಿಂಗ್ವಿ ಪ್ರತಿಕ್ರಿಯಿಸಿ “ಜನರಲ್ ಬಿಪಿನ್ ರಾವತ್‍ಗೆ ಏನು ಕೆಲಸವಿದೆಯೋ ಅದನ್ನು ಮಾಡಿಕೊಂಡು ಹೋಗಲಿ, ಆಡಳಿತಾತ್ಮಕ ವ್ಯವಹಾರದಲ್ಲಿ ಮೂಗು ತೂರಿಸುವ ಅಗತ್ಯ ಅವರಿಗಿಲ್ಲ” ಎಂದು ಹೇಳಿಬಿಟ್ಟರು.

ಇದು ಒಬ್ಬ ವೀರ ದೇಶಭಕ್ತ ಸೇನಾನಿಗೆ ಕಾಂಗ್ರೆಸ್ ಮಾಡಿದ ಅವಮಾನ. ಕೊಡಗಿಗೆ ಮಾಡಿದ ಅವಮಾನ... ದೇಶಕ್ಕೆ ಮಾಡಿದ ಅವಮಾನ. ಇಂದು ಭಾರತ ರತ್ನ ಪ್ರಶಸ್ತಿ ಮಾರಾಟಕ್ಕೆ ಇಟ್ಟಂತೆ ಕೊಟ್ಟಿದ್ದು ಇದೆ. ಕಾಂಗ್ರೆಸಿಗರಿಗೆ ದೇಶಭಕ್ತಿ ಎಂದರೆ ಕಸಬ್‍ನನ್ನು ಕೊಂಡಾಡುವದು, ಕನ್ನಯ್ಯನನ್ನು ಅಪ್ಪಿ ಮುದ್ದಾಡುವದು, ಓಟಿಗಾಗಿ ದೇಶವನ್ನು ಮಾರಾಟಕ್ಕಿಡುವದು ಎಂಬಂತಾಗಿದೆ.

ಹಾಗೆ ನೋಡಿದರೆ ಕಾಂಗ್ರೆಸಿಗರಿಗೆ ಕಾರ್ಯಪ್ಪ ಮತ್ತು ತಿಮ್ಮಯ್ಯರ ಮೇಲಿನ ದ್ವೇಷ ಇನ್ನೂ ಕಡಿಮೆ ಆದಂತಿ¯್ಲ. ನೆಹರುವಿನಿಂದ ಇಂದಿನವರೆಗೆ ಈ ವೀರ ಸೇನಾನಿಗಳನ್ನು ಅಪಮಾನಿಸಿ ಹೆಮ್ಮೆ ಪಟ್ಟುಕೊಳ್ಳುತ್ತಿರುವದು ಸಾಮಾನ್ಯವಾಗಿದೆ.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ದೇಶಕಂಡ ಮಹಾನ್ ದೇಶಭಕ್ತ. ಸ್ವತಂತ್ರ ಭಾರತದ 3 ಸೇನೆಯ ಪ್ರಥಮ ಮಹಾ ದಂಡನಾಯಕರಾಗಿ, ಒಬ್ಬ ಜಾತ್ಯತೀತ ಯೋಧನಾಗಿ ಹಿಂದು -ಮುಸ್ಲಿಂ ಸೈನಿಕರನ್ನು ಸಮನಾಂತರವಾಗಿ ಪ್ರೀತಿಸಿ ಗೌರವಿಸಿದವರು. ಭಾರತ-ಪಾಕಿಸ್ತಾನ ಎಂದು ದೇಶ ವಿಭಜನೆಯ ಸಂದರ್ಭದಲ್ಲಿ ಇಡೀ ದೇಶ ಕೋಮು ದಳ್ಳುರಿಯಲ್ಲಿ ಬೆಂದುಹೋಗುತ್ತಿದ್ದಾಗ ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬಿ ದೇಶ ರಕ್ಷಿಸಿದವರು.

ಜವಹರಲಾಲ್ ನೆಹರುರವರ ಕಮ್ಯುನಿಸ್ಟ್ ಪ್ರೇರಿತ ನೀತಿಯನ್ನು ಮನಸ್ಸಿಲ್ಲದ ಮನಸ್ಸಿನಿಂದ ಸಹಿಸಿಕೊಂಡು, ಭಾರತೀಯ ಸೇನೆಯನ್ನು ಬಲಿಷ್ಠಗೊಳಿಸಲು ಸೆಣಸಿದವರು. “ನನಗೆ ಜನ್ಮ ನೀಡಿದ ತಾಯಿ ನನ್ನ ಮೊದಲ ತಾಯಿಯಾದರೆ ಈ ಭಾರತ ನನ್ನ ಎರಡನೇ ತಾಯಿ” ಎಂದ ಪ್ರಾಮಾಣಿಕ ಸೇನಾನಿ. ಯುದ್ಧದ ಸಂದÀರ್ಭದಲ್ಲಿ ಕಛೇರಿಯಲ್ಲಿ ಕುಳಿತು ಆದೇಶ ನೀಡದೆ ಸಾಮಾನ್ಯ ಯೋಧರ ಮಧ್ಯೆ ಓಡಾಡುತ್ತಾ ಈ ದಂಡನಾಯಕ ನಿಮ್ಮ ಹಾಗೆ ಒಬ್ಬ ಸೈನಿಕ ಎನ್ನುವದನ್ನು ಕಾರ್ಯರೂಪಕ್ಕೆ ತಂದವರು.

ನೆಹರು ಕುಟಿಲ ನೀತಿಗೆ ಆನೇಕ ಬಾರಿ ಛಾಟಿ ಬೀಸಿದ್ದ ಕಾರ್ಯಪ್ಪನವರನ್ನು ಸಾಕಷ್ಟು ಬಾರಿ ತೇಜೋವಧೆ ಮಾಡಲು ಸರ್ಕಾರಿ ಮಟ್ಟದಲ್ಲಿ ಯತ್ನ ನಡೆದಿದೆ. “ಕಾಂಗ್ರೆಸ್ ಭಾರತೀಯ ಸೈನ್ಯವನ್ನು ಗುಲಾಮರನ್ನಾಗಿ ಮಾಡಿಬಿಡುತ್ತದೆ’’ ಎಂದು, ಕಾರ್ಯಪ್ಪ ಕಾಂಗ್ರೆಸ್ ವಿರುದ್ಧ ಮುಂಬೈ ಕ್ಷೇತ್ರದಿಂದ ಸಂಸತ್ತಿಗೆ ಶಿವಸೇನೆ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು. ಕಾರ್ಯಪ್ಪ ಒಬ್ಬ ಬಲಪಂಥೀಯ ಎಂಬ ಹಣೆ ಪಟ್ಟಿಯನ್ನು ಕಾಂಗ್ರೆಸಿಗರು ಕಟ್ಟಿದ್ದರು.

ಇಂದು ಟಿಪ್ಪÅವಿನಂತಹ ಮತಾಂಧನ ಜಯಂತಿಗೆ ಸರಕಾರ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ, ತಾಲೂಕುಗಳಿಗೆ ಅನುದಾನ ನೀಡಿ, ಬಂದೂಕಿನ ತುದಿಯಿಂದ ಭಯಹುಟ್ಟಿಸಿ ಬಲತ್ಕಾರದಿಂದ ಜಯಂತಿ ಆಚರಿಸುತ್ತಿದೆ. ಆದರೆ ಫೀಲ್ಡ್ ಮಾರ್ಷಲ್ ಕಾರ್ಯಾಪ್ಪ, ಜನರಲ್ ತಿಮ್ಮಯ್ಯರಂತಹ ಯೋಧರ ಜಯಂತಿಯನ್ನು ಕಾಟಾಚಾರಕ್ಕೆ ಕೊಡಗು ಜಿಲ್ಲೆಯಲ್ಲಿ ಮಾತ್ರ, ಅದೂ ಕೊಡಗಿನವರ ಶ್ರದ್ಧೆ ಭಕ್ತಿಯ ಫಲದಿಂದ ಆಚರಿಸಲಾಗುತ್ತಿದೆ. ಈ ಮಹಾನ್ ದೇಶಭಕ್ತ ಯೋಧರು ನಮ್ಮ ಮುಂದಿನ ಪೀಳಿಗೆಗೆ, ದೇಶ ಭಕ್ತಿಗೆ ಪ್ರೇರಕ ಶಕ್ತಿ ಅಲ್ಲವೇನು?

ಕಾಂಗ್ರೆಸ್‍ಗೆ ಗೊತ್ತಿದೆ. ಕಾರ್ಯಪ್ಪ-ತಿಮ್ಮಯ್ಯರ ಜಯಂತಿ ಆಚರಿಸುವದರಿಂದ, ಇವರಿಗೆ ಭಾರತರತ್ನ ಕೊಡಿಸಲು ಪ್ರಯತ್ನಿಸುವದರಿಂದ ಓಟ್‍ಬ್ಯಾಂಕ್ ನಿರ್ಮಾಣವಾಗುವದಿಲ್ಲ. “ದೇಶವನ್ನು ತುಂಡುಮಾಡಿ, ಕಾಶ್ಮೀರ ಅeóÁದಿ...... ಕಸಬ್ ಜಿಂದಾಬಾದ್’’ ಎನ್ನುವ ಶಕ್ತಿಗಳ ಮೇಲೆ ಕಾಂಗ್ರೆಸ್‍ಗೆ ಬಲು ಪ್ರೀತಿ, ಅಭಿಮಾನ. ಏಕೆಂದರೆ ಇದೇ ಓಟ್‍ಬ್ಯಾಂಕ್, ಇವರೇ ಅವರ ಪಾಲಿನ ದೇಶ ಭಕ್ತರು!

ಅಡ್ಡಂಡ ಸಿ. ಕಾರ್ಯಪ್ಪ

ಇತಿಹಾಸಕಾರರರು, ಕೊಡಗು

ಚಿಜಜಚಿಟಿಜಚಿಛಿಚಿಡಿiಚಿಠಿಠಿಚಿ@gmಚಿiಟ.ಛಿom