ಮಡಿಕೇರಿ, ನ. 5 : ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಅಧೀನಕ್ಕೆ ಒಳಪಡುವ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಲ್ಲಿರುವ ಪ್ರತಿಭಾ ಅನಾವರಣದ 5 ನೇ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ ಕಾರ್ಯಕ್ರಮ ‘ಯುವ ಸ್ಪಂದನ’ ತಾ. 8 ಮತ್ತು 9 ರಂದು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ| ಸಿ.ಜಿ. ಕಿರಣ್ ಕುಶಾಲಪ್ಪ, ಎರಡು ದಿನಗಳ ಕಾಲ ಕಾಲೇಜು ಆವರಣದಲ್ಲಿ ನಡೆಯುವ ಯುವ ಸ್ಪಂದನದ ಕುರಿತು ಮಾಹಿತಿ ನೀಡಿದರು. ತಾ. 8 ರಂದು ಬೆಳಗ್ಗೆ 8.30 ಗಂಟೆಗೆ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಶ್ರೀ ಜಗದಾತ್ಮಾನಂದ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಪೊನ್ನಂಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದಿಂದ ಕಾಲೇಜು ಆವರಣದವರೆಗೆ ವೈಭವಯುತ ಸಾಂಸ್ಕøತಿಕ ಮೆರವಣಿಗೆ ನಡೆಯಲಿದೆ. ಡಾ| ಸಿ.ಜಿ. ಕುಶಾಲಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಬೆಳಗ್ಗೆ 10 ಗಂಟೆಗೆ ರಾಜ್ಯ ಅರಣ್ಯ ಕಾರ್ಯಪಡೆಯ ಮುಖ್ಯಸ್ಥರು ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಸುಗಾರ ಉದ್ಘಾಟಿಸಲಿದ್ದಾರೆ.

ಶಿವಮೊಗ್ಗದ ಕೃಷಿ ತೋಟಗಾರಿಕಾ ವಿಶ್ವವಿದ್ಯಾನಿಲಯದ ಡಾ| ವೈ. ವಿಶ್ವನಾಥ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಶ್ರೀ ರಾಮಕೃಷ್ಣ ಶಾರದಾಶ್ರಮದ ಶ್ರೀ ಬೋಧ ಸ್ವರೂಪಾನಂದ ಸ್ವಾಮೀಜಿ, ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯದ ಡಾ| ಎಂ. ಮಂಜುನಾಥ್, ಕೃಷಿ ತೋಟ ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದ ಡಾ| ಟಿ.ಎಸ್. ವಾಗೀಶ್, ಸಂಶೋಧನಾ ನಿರ್ದೇಶP ಡಾ| ಎಂ.ಕೆ. ನಾಯಕ್, ವಿಸ್ತರಣಾ ನಿರ್ದೇಶಕ ಡಾ| ಟಿ.ಹೆಚ್. ಗೌಡ, ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಡಾ| ಎಂ. ಹನುಮಂತಪ್ಪ, ಹಿರಿಯೂರು ತೋಟಗಾರಿಕಾ ಮಹಾವಿದ್ಯಾಲಯದ ಡಾ| ಆರ್. ಬಸವರಾಜಪ್ಪ, ವಿಶ್ವ ವಿದ್ಯಾನಿಲಯದ ಗ್ರಂಥ ಪಾಲಕ ಡಾ| ಹೆಚ್.ಎಂ. ಚಿದಾನಂದಪ್ಪ, ಹಣಕಾಸು ನಿಯಂತ್ರಣಾಧಿಕಾರಿ ಕೆ. ಗಣೇಶಪ್ಪ, ಆಸ್ತಿ ಅಧಿಕಾರಿ ಡಾ| ರಘುರಾಂ ಶೆಟ್ಟಿ, ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯದ ಪ್ರಾಂಶುಪಾಲ ಎಸ್.ಯು. ಪಾಟೀಲ್ ಹಾಗೂ ಕತ್ತಲಗರೆ ಕೃಷಿ ಡಿಪ್ಲೋಮಾ ಮಹಾವಿದ್ಯಾನಿಲಯದ ಪ್ರಾಂಶುಪಾಲ ಡಾ| ಬಿ.ಎಂ. ಆನಂದ ಕುಮಾರ್ ವಿಶೇಷ ಆಹ್ವಾನಿತರಾಗಿರುತ್ತಾರೆ ಎಂದು ವಿವರಿಸಿದರು.

ತಾ. 9 ರಂದು ನಡೆಯುವ ಸಮಾರೋಪ ಸಮಾರಂಭ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ| ಕೆ. ನಾರಾಯಣ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮೈಸೂರು ರಂಗಾಯಣದ ನಿರ್ದೇಶಕಿ ಭಾಗೀರಥಿ ಬಾಯಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶಿವಮೊಗ್ಗ ಕೃಷಿ ತೋಟಗಾರಿಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕಲ್ಯಾಣದ ಡೀನ್ ಡಾ| ವೈ ವಿಶ್ವನಾಥ್ ಶೆಟ್ಟಿ ಸಮಾರೋಪ ವರದಿ ಮಂಡಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಶಾಸಕ ಕಿಮ್ಮನೆ ರತ್ನಾಕರ,

(ಮೊದಲ ಪುಟದಿಂದ) ಕೃಷಿ ತೋಟಗಾರಿಕಾ ವಿಶ್ವ ವಿದ್ಯಾನಿಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ವಿ. ವೀರಭದ್ರಯ್ಯ, ನೀತು ಯೋಗಿರಾಜ್ ಪಾಟೀಲ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

ತಾ. 7 ರಂದು ನೋಂದಣಿ ಹಾಗೂ ವಿವಿಧ ತಂಡಗಳ ನಿರ್ವಾಹಕರ ಸಭೆ ನಡೆಯಲಿದೆ. ತಾ. 8 ರಂದು ಸಾಂಸ್ಕøತಿಕ ಮೆರವಣಿಗೆ, ಲಘು ಸಂಗೀತ, ಮಣ್ಣಿನ ಆಕೃತಿ ರಚನೆ, ದೇಶಭಕ್ತಿಗೀತೆ, ಸಮೂಹ ಗಾಯನ, ಮೂಕಾಭಿನಯ, ಕೊಲೇಜ್, ಏಕಾಂಕ ನಾಟಕ ಹಾಗೂ ವ್ಯಂಗ್ಯ ಚಿತ್ರ ಬಿಡಿಸುವ ಕಾರ್ಯಕ್ರಮಗಳು ನಡೆಯಲಿವೆ. ತಾ. 9 ರಂದು ಸ್ಥಳದಲ್ಲೆ ಚಿತ್ರ ರಚನೆ, ಏಕ ಪಾತ್ರಾಭಿನಯ, ರಂಗೋಲಿ, ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಆಶು ಭಾಷಣ ಸ್ಪರ್ಧೆ, ಭಿತ್ತಿ ಚಿತ್ರ ಬಿಡಿಸುವುದು, ಭಾಷಣ ಸ್ಪರ್ಧೆ, ಲಘು ಪ್ರಹಸನ, ಜಾನಪದ ಸಮೂಹ ನೃತ್ಯ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಡಾ| ಸಿ.ಜಿ. ಕುಶಾಲಪ್ಪ ಮಾಹಿತಿ ನೀಡಿದರು.

ಬೋಧನೆ, ಸಂಶೋಧನೆ ಮತ್ತು ವಿಸ್ತರಣೆ ಎನ್ನುವ ಪರಿಕಲ್ಪನೆಯಡಿ ಕಾರ್ಯನಿರ್ವಹಿಸುತ್ತಿರುವ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ದೇಶದಲ್ಲಿರುವ ಐದು ಉನ್ನತ ಮಟ್ಟದ ವಿಶ್ವ ವಿದ್ಯಾನಿಲಯಗಳಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರವೆಂದರು.

ಎರಡು ದಿನಗಳ ಕಾಲ ನಡೆಯುವ ಯುವ ಸ್ಪಂದನ ಕಾರ್ಯಕ್ರಮದಲ್ಲಿ ವಿಶ್ವ ವಿದ್ಯಾಲಯ ವ್ಯಾಪ್ತಿಯ ಎಲ್ಲಾ ತೋಟಗಾರಿಕೆ, ಕೃಷಿ, ಕೃಷಿ ಡಿಪ್ಲೋಮ ಹಾಗೂ ಆತಿಥೇಯ ಅರಣ್ಯ ಮಹಾವಿದ್ಯಾಲಯವನ್ನು ಪ್ರತಿನಿಧಿಸುವ ಒಟ್ಟು ಆರು ತಂಡಗಳು ಸಾಂಸ್ಕøತಿಕ ಮೇಳದಲ್ಲಿ ಸ್ಪರ್ಧಿಸಲಿವೆ. ಎರಡು ದಿನಗಳ ಕಾಲ ನಡೆಯುವ ಸ್ಪರ್ಧೆಗಳಲ್ಲಿ ನಾಟಕ, ನೃತ್ಯ ಒಳಗೊಂಡಂತೆ ಗ್ರಾಮೀಣ ಸೊಗಡು, ಜಾನಪದ ಕಲೆ ಮತ್ತು ಕೃಷಿ ಸಂಬಂಧಿತ ವಿಚಾರÀಗಳಿಗೆ ಪೂರಕವಾಗಿರುತ್ತದೆ. ಸುಮಾರು 14 ವರ್ಷಗಳ ನಂತರ ಇಂತಹ ಸಾಂಸ್ಕøತಿಕ ಮೇಳದ ಆತಿಥ್ಯ ವಹಿಸುವ ಅವಕಾಶ ಕೊಡಗಿನ ಅರಣ್ಯ ಮಹಾವಿದ್ಯಾಲಯಕ್ಕೆ ಲಭಿಸಿದ್ದು, ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆಯೆಂದು ಮಹಾವಿದ್ಯಾಲಯದ ಮುಖ್ಯಸ್ಥರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡಾ| ಆರ್.ಎನ್. ಕೆಂಚಾರೆಡ್ಡಿ, ಡಾ| ರಾಮಕೃಷ್ಣ ಹೆಗ್ಡೆ, ಎಂ.ಎನ್.ರಮೇಶ್ ಹಾಗೂ ಡಾ| ಜಿ.ಎಂ. ದೇವಗಿರಿ ಉಪಸ್ಥಿತರಿದ್ದರು.