ಶ್ರೀಮಂಗಲ, ನ. 5: ಕೊಡವ ಜನಾಂಗದ ಹಿರಿಯರು ಅತೀ ಕಷ್ಟದ ಸಂದರ್ಭದಲ್ಲೂ ಕೊಡವ ಸಂಸ್ಕøತಿಯನ್ನು ಪಾಲನೆ ಮಾಡುವದರೊಂದಿಗೆ ಇಂದಿನ ಪೀಳಿಗೆಗೆ ಉಳಿಸಿ ಹೋಗಿದ್ದಾರೆ. ಪ್ರಪಂಚದಲ್ಲೇ ವಿಶೇಷ ಸಂಸ್ಕøತಿಯೆಂದು ಹೆಸರು ಗಳಿಸಿರುವ ಕೊಡವ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಇಂದಿನ ಪೀಳಿಗೆಯ ಕೊಡವರು ಹಿಂದೇಟು ಹಾಕಬಾರದು ಎಂದು ಮಂಚಳ್ಳಿ ಬಾಂಧವ್ಯ ಪೊಮ್ಮಕ್ಕಡ ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಕರೆ ನೀಡಿದರು.

ಕೊಡವ ತಕ್ಕ್ ಎಳ್ತ್‍ಕಾರಡ ಕೂಟ ಹಾಗೂ ಬಾಂಧವ್ಯ ಪೊಮ್ಮಕ್ಕಡ ಸಾಂಸ್ಕøತಿಕ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಡೆದ ವಿಶೇಷ ಕೊಡವ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ‘ಜನಪ್ರಿಯ ಕೊಡವ ಸಾಹಿತ್ಯ ಮಾಲೆ’ ಯೋಜನೆಯ 149ನೇ ಹೆಜ್ಜೆಯ ‘ಕವನ ಕಾವೇರಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಬಲ್ಲಡಿಚಂಡ ಕಸ್ತೂರಿ ರತನ್ ಕೊಡವ ಸಂಸ್ಕøತಿ ಉಳಿಸಲು ಮಕ್ಕಳಲ್ಲಿ ಅಭಿಮಾನ ಹುಟ್ಟುವಂತೆ ಮಾಡುವಲ್ಲಿ ಪೋಷಕರ ಜವಬ್ದಾರಿ ಏನು ಎಂಬದನ್ನು ಪ್ರಬಂಧ ಮಂಡಿಸುವದರೊಂದಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

‘ಕೂಟ’ದ ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆಯ 149ನೆ ಹೆಜ್ಜೆಯ ‘ಕವನ ಕಾವೇರಿ’ ಪುಸ್ತಕದ ಲೇಖಕಿ ಉಳುವಂಗಡ ಕಾವೇರಿ ಉದಯ ಮಾತನಾಡಿ ಪುಸ್ತಕ ಬರೆಯಲು ಮನೆಯಲ್ಲಿ ಸಾಹಿತ್ಯಾಸಕ್ತರ ಸಹಕಾರ ಹಾಗೂ ಉತ್ತಮ ವಾತಾವರಣವಿರಬೇಕು ಎಂದರು.

ಪುಸ್ತಕ ಪ್ರಕಟಣೆಯ ಪ್ರಾಯೋಜಕರಾದ ಪುಗ್ಗೇರ ರೇವತಿ ಚಂಗಪ್ಪ ಮಾತನಾಡಿ ಸಾಹಿತ್ಯ ಸೃಷ್ಟಿಸುವದು ಎಲ್ಲರಿಂದ ಆಗುವ ಕೆಲಸವಲ್ಲ. ಆದರೆ, ಅವರಿಗೆ ಸಹಕರಿಸುವದು ಎಲ್ಲರಿಂದ ಸಾಧ್ಯವಿದೆ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಹಕಾರ ನೀಡಿದರೆ ಕೊಡವ ಭಾಷೆಯಲ್ಲಿ ಹೆಚ್ಚು ಸಾಹಿತ್ಯ ಪ್ರಕಟವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ‘ಕೂಟ’ದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ ಕೊಡವ ಜನಾಂಗದ ಮೂಲ ಬೇರಾದ ಭಾಷೆ ಹಾಗೂ ಸಾಹಿತ್ಯವನ್ನು ಉಳಿಸಿ ಬೆಳೆಸುವದು ಪ್ರತಿಯೊಬ್ಬ ಕೊಡವರ ಜವಾಬ್ದಾರಿಯಾಗಿದ್ದು, ಭಾಷೆ ಅಳಿದರೆ ಇಡೀ ಜನಾಂಗವೇ ನಾಶವಾಗುವದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಕಳೆದÀ 23 ವರ್ಷಗಳಿಂದ ನಿರಂತರವಾಗಿ ತೊಡಗಿಸಿಕೊಂಡಿರುವ ಕೊಡವ ತಕ್ಕ್ ಎಳ್ತ್‍ಕಾರಡ ಕೂಟವು ಪ್ರತೀ ತಿಂಗಳಿಗೊಂದು ನೂತನ ಪುಸ್ತಕ ಪ್ರಕಟಿಸುತ್ತಿದೆ. ಈ ಕಾರ್ಯಕ್ಕೆ ಕೊಡವ ಭಾಷೆಯ ಲೇಖಕರು ಹಾಗೂ ಪುಸ್ತಕ ಪ್ರಾಯೋಜಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ‘ಕೂಟ’ದ ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆಯ 149ನೇ ಹೆಜ್ಜೆಯ ನೂತನ ಪುಸ್ತಕ ಉಳುವಂಗಡ ಕಾವೇರಿ ಉದಯ ಬರೆದ ‘ಕವನ ಕಾವೇರಿ’ ಬಿಡುಗಡೆ ಹಾಗೂ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳು ಜರುಗಿದವು.