ಸಿದ್ದಾಪುರ, ನ. 5: ಪಾಲಿಬೆಟ್ಟದ ಜಮ್ಮಾ ಮಸೀದಿಯ ವಿರುದ್ಧ ಇತ್ತೀಚೆಗೆ ಮಾಡಿರುವ ಆರೋಪ ನಿರಾಧಾರ ವಾಗಿದ್ದು ಆಧಾರ ರಹಿತ ಹೇಳಿಕೆ ನೀಡಿರುವದು ಖಂಡನೀಯ ವಾಗಿದೆಯೆಂದು ಪಾಲಿಬೆಟ್ಟ ಜುಮ್ಮಾ ಮಸೀದಿ ಅಧ್ಯಕ್ಷ ಸಿ.ಎಂ. ಅಬ್ದುಲ್ ಜಬ್ಬಾರ್ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ. ಪಾಲಿಬೆಟ್ಟದ ಮಸೀದಿಯ ಮದ್ರಸ ಸಭಾಂಗಣದಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಪಾಲಿಬೆಟ್ಟದ ನಿವಾಸಿಗಳಾದ ಸಿ.ವೈ. ಫೈಝಲ್, ಯಂ.ಕೆ. ಹೈದರ್ ಹಾಗೂ ಎ. ಕುಂಞಮೊಹಮ್ಮದ್ ಅವರು ಮಸೀದಿಯ ಕಟ್ಟಡ ನಿರ್ಮಾಣದ ವಿರುದ್ಧ ಆಧಾರ ರಹಿತ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿರುವದು ಖಂಡನೀಯವಾಗಿದೆ. ಪಾಲಿಬೆಟ್ಟ ಜಮಾಅತ್‍ನ ಮಾಜಿ ಕಾರ್ಯದರ್ಶಿ ಎಂದು ಸಿ.ವೈ. ಫೈಝಲ್ ಹೇಳಿಕೆಯಲ್ಲಿ ಹೇಳಿದ್ದು ಶುದ್ಧ ಸುಳ್ಳಾಗಿದ್ದು, ಅವರು ಕಾರ್ಯದರ್ಶಿಯಾಗಿದ್ದರು ಎಂಬದಕ್ಕೆ ದಾಖಲೆ ಸಮೇತ ಸಾಬೀತು ಪಡಿಸಲಿ ಎಂದು ಸವಾಲೆಸೆದರು. ಉತ್ತಮ ರೀತಿಯಲ್ಲಿ ಮಸೀದಿ ನಿರ್ಮಾಣ ಕಾರ್ಯ ಮುಂದುವರಿಯುತ್ತಿದ್ದು, ಇದನ್ನು ಸಹಿಸಲಾರದ ಈ ಮೂವರು ತಮ್ಮ ಸ್ವಾರ್ಥ ಲಾಭಕ್ಕಾಗಿ ಅವ್ಯವಹಾರಗಳು ನಡೆದಿದೆ ಎಂದು ಆರೋಪಿಸಿರುವದಲ್ಲಿ ಯಾವದೇ ಸತ್ಯಾಂಶವಿರುವದಿಲ್ಲವೆಂದು ಹೇಳಿದರು. ಯಾವದೇ ಅವ್ಯವಹಾರ ಗಳು ನಡೆದಿರುವದಿಲ್ಲವೆಂದು ಸ್ಪಷ್ಟಪಡಿಸಿದರು. ಈ ಹಿಂದೆ ಮಸೀದಿಯ ಸಭಾಂಗಣದಲ್ಲಿ ಅಧ್ಯಕ್ಷ ಸಿ.ಎಂ. ಅಬ್ದುಲ್‍ಜಬ್ಬಾರ್ ಅಧ್ಯಕ್ಷv Éಯಲ್ಲಿ ನಡೆದ ಸಭೆಯಲ್ಲಿ ಮಸೀದಿ ನಿರ್ಮಾಣದ ವೆಚ್ಚ ಮೊತ್ತ ರೂ. 41,48664 ವಿವರವನ್ನು ಮಂಡಿಸಲಾಗಿತ್ತು. ಅದೇ ಸಭೆಯಲ್ಲಿ ಈ ಮೂವರು ಭಾಗವಹಿಸಿದ್ದು, ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿರುತ್ತಾರೆ. ಆ ಸಂದರ್ಭದಲ್ಲಿ ಚಕಾರವೆತ್ತದ ಈ ಮಂದಿ ಇದೀಗ ಸ್ವಾರ್ಥಕ್ಕಾಗಿ ವೈಯಕ್ತಿಕ ಲಾಭಕ್ಕಾಗಿ ಆರೋಪ ಮಾಡುತ್ತಿರುವದು ಸಮಂಜಸವಲ್ಲ ಎಂದರು.

ಮಸೀದಿಯ ಉಪಾಧ್ಯಕ್ಷ ಸಿ.ಹೆಚ್. ಅಬ್ದುಲ್‍ಖಾದರ್ ಮಾತನಾಡಿ ಜಮಾಅತ್ ಸದಸ್ಯರ ಸಾಮಾನ್ಯ ಸಭೆಯನ್ನು ಕರೆಯಾಲಾಗುತ್ತಿಲ್ಲವೆಂಬ ಆರೋಪ ನಿರಾಧಾರವಾಗಿದ್ದು ಅಬ್ದುಲ್‍ಜಬ್ಬಾರ್ ಅಧ್ಯಕ್ಷತೆಯಲ್ಲಿ ಹಲವಾರು ಸಭೆಗಳು ನಡೆದಿದ್ದರೂ, ಈ ಮೂವರು ಅನಗತ್ಯವಾಗಿ ಸುಳ್ಳು ಆರೋಪ ಹೊರಿಸಿ ಮಸೀದಿಗೆ ಕಳಂಕ ತರುವ ಉದ್ದೇಶದಿಂದ ಹೇಳಿಕೆ ನೀಡಿರುವದು ಸರಿಯಾದ ಕ್ರಮವಲ್ಲವೆಂದರು. ಪಾಲಿಬೆಟ್ಟ ಜಮಾಅತ್ ಸಮಿತಿಯ ಅಧೀನದಲ್ಲಿ ರುವ ಆರ್ಕಾಡ್ ಪಟ್ಟಾಣ್ ಬಾವ ಶಾವಲಿ ಉರೂಸ್ ಹಾಗೂ ಅಂಗಡಿ ಮಳಿಗೆಗಳಿಂದ ಸಂಗ್ರಹವಾಗುತ್ತಿರುವ ಮೊತ್ತವನ್ನು ಸಿ.ವೈ. ಫೈಝಲ್, ಯಂ.ಕೆ. ಹೈದರ್ ಹಾಗೂ ಎ.ಕುಂಞಮೊಹಮ್ಮದ್ ಅವರು ಹಾಜರಿದ್ದ ಸಂದರ್ಭದಲ್ಲಿ ಮದ್ರಸ ಸಭಾಂಗಣದಲ್ಲಿ ಆಯವ್ಯಯ ಮಂಡನೆ ಮಾಡಿದ್ದು, ಉರೂಸ್ ಮುಗಿದ ಬಳಿಕ ಕೆಲವೇ ದಿನಗಳಲ್ಲಿ ಸಭೆಯನ್ನು ಕರೆಯಲಾಗಿದೆ ಎಂದರು ಆದರೂ ಅನಗತ್ಯವಾಗಿ ಹೇಳಿಕೆ ನೀಡುವದು ಸರಿಯಲ್ಲ ಎಂದರು. ಮಸೀದಿಯ ಲೆಕ್ಕ ಪತ್ರಗಳು ಪಾರದರ್ಶಕದಿಂದ ಕೂಡಿದೆ ಎಂದರು. ಮಸೀದಿಯ ಉದ್ದೇಶಿತ ನಕ್ಷೆಯನ್ನು ಪ್ಲೆಕ್ಸ್ ಮೂಲಕ ಅಳವಡಿಸಿಲ್ಲವೆಂಬ ಆರೋಪವನ್ನು ಮಾಡಿರುವದು ಫ್ಲೆಕ್ಸ್ ಅಳವಡಿಕೆಯು ಹೆಚ್ಚುವರಿ ಖರ್ಚಿಗೆ ಕಾರಣವಾಗುವ ಉದ್ದೇಶದಿಂದ ಹಾಗೂ ಅನುಪಯುಕ್ತ ವಾದ ಹಿನ್ನೆಲೆಯಲ್ಲಿ ಅಳವಡಿಸಿರುವದಿಲ್ಲವೆಂದು ತಿಳಿಸಿದರು. ಇನ್ನದರೂ ಸುಳ್ಳು ಹೇಳಿಕೆಯನ್ನು ನೀಡಿ ಗ್ರಾಮಸ್ಥರಲ್ಲಿ ಗೊಂದಲ ಮೂಡಿಸುವದನ್ನು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಎಲ್.ಖಾಲಿದ್, ಕೋಶಾಧಿಕಾರಿ ಕೆ.ಎಸ್. ಅಬೂಬಕ್ಕರ್, ಜಂಟಿ ಕಾರ್ಯದರ್ಶಿ ಕೆ.ಯು. ಇಸ್ಮಾಯಿಲ್, ಜಂಟಿ ಕಾರ್ಯದರ್ಶಿ ಕೆ.ಎ. ಅಬ್ದುಲ್ ರಶೀದ್, ಸದಸ್ಯರುಗಳಾದ ಪಿ.ಕೆ. ಇಸ್ಮಾಯಿಲ್, ಕೆ.ವಿ. ರಶೀದ್, ಡಿ.ಎ. ಕರೀಂ, ಪಿ,ಕೆ, ಮುಸ್ತಫ ಹಾಜರಿದ್ದರು.