ವೀರಾಜಪೇಟೆ, ನ. 5: ದೇಶದ ಹೆಣ್ಣು ಮಕ್ಕಳಿಗೆ ಯಾವ ದೇಶ ಗೌರವ, ಸಮಾನತೆಯನ್ನು ಕಲ್ಪಿಸುತ್ತದೆ ಆ ದೇಶ ಪ್ರಗತಿ ಸಾಧಿಸಲು ಕಾರಣವಾಗಲಿದೆ. ಪ್ರತಿಯೊಂದು ದೇಶದಲ್ಲಿಯೂ ಮಹಿಳೆಯರ ಸಬಲೀಕರಣವಾಗಬೇಕು ಎಂದು ಜಾತ್ಯತೀತ ಜನತಾ ದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು. ವೀರಾಜಪೇಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಎನ್.ಎಸ್.ಎಸ್. ಶಿಬಿರದ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿ ಸಿದ್ದ ಸಂಕೇತ್ ಪೂವಯ್ಯ ಅವರು ಸರಕಾರದ ಪ್ರಕಾರ ಹೆಣ್ಣಿಗೆ 18 ವರ್ಷವಾದರೆ, ಗಂಡಿಗೆ 21 ವರ್ಷವಾದರೆ ವಯಸ್ಕರಾಗುತ್ತಾರೆ. ವಿವಾಹಕ್ಕೂ ಅರ್ಹತೆಯನ್ನು ಪಡೆಯುತ್ತಾರೆ. ವಿವಾಹಕ್ಕಾಗಿ ಪದವಿ ಮುಗಿಯುವ ಮೊದಲೇ ಹೆಣ್ಣಿಗೆ ವಯಸ್ಕರ ಪಟ್ಟ ಕಟ್ಟಿದರೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಕುಂಠಿತಗೊಳ್ಳುವ ಸಾಧ್ಯತೆ ಇದೆ. ಹೆಣ್ಣು ಗಂಡಿನ ವಯಸ್ಸನ್ನು 21 ವರ್ಷಕ್ಕೆ ನಿಗದಿಪಡಿಸಿದರೆ ಯಾವ ಸಮಸ್ಯೆಯು ಇರುವದಿಲ್ಲ. ಇದರಿಂದ ಹೆಣ್ಣು ಕೂಡ ಸ್ವಾವಲಂಬನೆಯ ಬದುಕನ್ನು ಸಾಗಿಸಲು ಸಾಧ್ಯ. ಹೆಣ್ಣು ಒಬ್ಬ ಮಾತೆಯಾಗಿ, ಮಕ್ಕಳ ತಾಯಿಯಾಗಿ ಸಮಾಜದ ನಾರಿಯಾಗಿ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸು ತ್ತಾಳೆ. ಮಹಿಳಾ ಸಬಲೀಕರ ಣಗೊಂಡರೆ ಮಾತ್ರ ಸಮಾಜದ ಪ್ರಗತಿ ಸುಧಾರಣೆ ಸಾಧ್ಯ ಎಂದರು. ಮಹಿಳಾ ಸಬಲೀಕರಣದ ವಿಷಯದ ಕುರಿತು ಕಾಲೇಜಿನ ಉಪನ್ಯಾಸಕಿ ಹೆಚ್.ಆರ್. ನಳಿನಿ, ಅತಿಥಿಯಾಗಿ ಭಾಗವಹಿಸಿದ್ದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ: ರೇಣುಕಾ, ಉಪನ್ಯಾಸಕಿ ಜ್ಯೋತಿ ಮಾತನಾಡಿ ದರು. ಉಪನ್ಯಾಸಕ ಆಂಟೋನಿ ಅಳ್ವಾರೀಸ್ ಅಧ್ಯಕ್ಷತೆ ವಹಿಸಿದ್ದರು.