ಕೊಡಗು ಪತ್ರಿಕಾ ಭವನ ಟ್ರಸ್ಟ್: ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನುಶೆಣೈ ಅವರು ಧ್ವಜಾರೋಹಣ ಮಾಡುವ ಮೂಲಕ ಪತ್ರಿಕಾ ಭವನದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು.

ಮಾಜಿ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ. ರಮೇಶ್, ಟ್ರಸ್ಟಿಗಳಾದ ಶ್ರೀಧರ್ ಹೂವಲ್ಲಿ, ಕೆ. ತಿಮ್ಮಪ್ಪ ಸಿಬ್ಬಂದಿಗಳಾದ ಯಮುನ, ಸವಿತ, ರಾಜೇಶ್ ಹಾಗೂ ಫ್ಯಾಮಿಲಿ ಸ್ಟೋರ್‍ನ ಮಾಲೀಕ ರೆಹಮಾನ್, ಸಫಾ ಬೇಕರಿಯ ಅಶ್ರಫ್, ಪತಂಜಲಿ ಸ್ಟೋರ್‍ನ ಮನೋಹರ್ ಹಾಗೂ ರಾಜೇಶ್ವರಿ ಕ್ಯಾಂಟೀನ್‍ನ ಲೀಲಾವತಿ ಮುಂತಾದವರು ಭಾಗವಹಿಸಿದ್ದರು.

ಕ.ಸಾ.ಪ. ಶ್ರೀಮಂಗಲ ಹೋಬಳಿ: ಟಿ. ಶೆಟ್ಟಿಗೇರಿ ಮಾಯಣಮಾಡ ಮಂದಯ್ಯ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶ್ರೀಮಂಗಲ ಹೋಬಳಿ ಘಟಕ, ಟಿ. ಶೆಟ್ಟಿಗೇರಿ ಎಂ.ಎಂ. ಪ್ರೌಢಶಾಲೆ ಹಾಗೂ ಟಿ. ಶೆಟ್ಟಿಗೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಕ.ಸಾ.ಪ. ಶ್ರೀಮಂಗಲ ಹೋಬಳಿ ಘಟಕದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವದರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಎಂ.ಎಂ. ಪ್ರೌಢಶಾಲೆಯ ಸಹಶಿಕ್ಷಕ ರಾಜೇಶ್, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುನಂದ ಇವರುಗಳು ಮಾತನಾಡಿದರು. ಕ.ಸಾ.ಪ. ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕ.ಸಾ.ಪ. ಶ್ರೀಮಂಗಲ ಹೋಬಳಿ ಘಟಕ ಕಾರ್ಯದರ್ಶಿ ಬುಟ್ಟಿಯಂಡ ಸುನಿತ, ನಿರ್ದೇಶಕಿ ಬುಟ್ಟಿಯಂಡ ಪೊನ್ನಮ್ಮ ಉಪಸ್ಥಿತರಿದ್ದರು. ಈ ಸಂದರ್ಭ ಕನ್ನಡ ಗೀತೆ ಹಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಂ.ಎಂ. ಪ್ರೌಢಶಾಲೆಯ ಸಹಶಿಕ್ಷಕ ಪ್ರಸನ್ನ ಸ್ವಾಗತಿಸಿ, ವಂದಿಸಿದರು. ದೈಹಿಕ ಶಿಕ್ಷಕಿ ಗುಂಬೀರ ಪದ್ಮಾವತಿ ನಿರೂಪಿಸಿದರು.

ಶನಿವಾರಸಂತೆ: ಶನಿವಾರಸಂತೆ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಮತ್ತು ಶ್ರೀ ವಿಘ್ನೇಶ್ವರ ಬಾಲಿಕ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಕೆ. ಸುಬ್ರಮಣ್ಯ ವಹಿಸಿದ್ದರು. ಮುಖ್ಯ ಭಾಷಣಕಾರರಾದ ಕೊಡ್ಲಿಪೇಟೆಯ ಸದಾಶಿವ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್.ಎಂ. ಚಂದ್ರಶೇಖರ್ ಮುಖ್ಯ ಭಾಷಣ ಮಾಡಿದರು.

ಸಭಾ ಕಾರ್ಯಕ್ರಮವನ್ನು ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್. ಅನಂತಕುಮಾರ್, ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮದ್ ಗೌಸ್, ಕ.ಸಾ.ಪ. ಜಿಲ್ಲಾ ಸಮಿತಿಯ ಮಾಧ್ಯಮ ಕಾರ್ಯದರ್ಶಿ ಎನ್.ಎ. ಅಶ್ವಥ್, ಸೋಮವಾರಪೇಟೆ ಕ.ಸಾ.ಪ. ಪದಾಧಿಕಾರಿ ಹೆಚ್.ಬಿ. ಜಯಮ್ಮ, ಶನಿವಾರಸಂತೆ ಕನ್ನಡ ಸಂಘದ ಅಧ್ಯಕ್ಷ ಪುಷ್ಪ ನಾಗರಾಜ್, ಶನಿವಾರಸಂತೆ ಹೋಬಳಿ ಕ.ಸಾ.ಪ. ಘಟಕದ ಖಜಾಂಚಿ ಬಿ.ಡಿ. ಸೋಮಪ್ಪ ಮಾತನಾಡಿದರು.

ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಕೆ.ಇ. ಕೃಷ್ಣರಾಜ್, ನಿರ್ದೇಶಕಿ ಡಿ.ಜಿ. ನಿತ್ಯಾನಿಧಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಭಾನು ರಿಜ್ವಾನ್, ಹೇಮಾ ಲಿಂಗರಾಜ್, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರುಗಳಾದ ನಂಜಪ್ಪ, ಶಿವಣ್ಣ, ರಾಮ್‍ಕುಮಾರ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಸರಫ್‍ರಾಜ್ ಅಹಮ್ಮದ್, ಉಪನ್ಯಾಸಕ ಕೆ.ಪಿ. ಜಯಕುಮಾರ್ ನಿರೂಪಿಸಿ, ಕ.ಸಾ.ಪ. ಹೋಬಳಿ ಘಟಕದ ಬಿ.ಬಿ. ನಾಗರಾಜು ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶನ ನಡೆಯಿತು.

ಕುಶಾಲನಗರ ಆಟೋ ಸಂಘ: ಕುಶಾಲನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಪಟ್ಟಣದ ಆಟೋ ನಿಲ್ದಾಣದಲ್ಲಿ ಸಂಘದ ಕಾನೂನು ಸಲಹೆಗಾರ ಆರ್.ಕೆ. ನಾಗೇಂದ್ರ ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಸಂಘದ ಅಧ್ಯಕ್ಷ ವಿ.ಪಿ. ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸ್ಥಳೀಯ ಬಾಲಕಿಯರ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಶಿವಣ್ಣ ದಿನದ ಮಹತ್ವದ ಕುರಿತು ಮಾತನಾಡಿದರು. ಬಾಲಕಿಯರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.

ಸಂಘದ ಕಾರ್ಯದರ್ಶಿ ಜೋಸ್, ಖಜಾಂಚಿ ಜಗದೀಶ್, ಸಂಚಾಲಕ ಶಿವಪ್ಪ, ಪ್ರಮುಖರಾದ ಕೆ.ಜಿ. ಕೃಷ್ಣಮೂರ್ತಿ, ಜವರ, ಕಿಟ್ಟಿ, ದರ್ಶನ್, ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಬಲಂ ಬೋಜಣ್ಣ ರೆಡ್ಡಿ ಸೇರಿದಂತೆ ಆಟೋ ಚಾಲಕರು ಇದ್ದರು.ಸುಂಟಿಕೊಪ್ಪ: ಇಲ್ಲಿನ ಕನ್ನಡ ವೃತ್ತದಲ್ಲಿ ಕನ್ನಡಾಭಿಮಾನಿಗಳ ಸಂಘ, ಸ್ನೇಹಿತರ ಕೂಟ ಹಾಗೂ ಪ್ರತಿಭಾ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಿತು.

ಕನ್ನಡ ವೃತ್ತದಲ್ಲಿ ಅಳವಡಿಸಿದ್ದ ಭುವನೇಶ್ವರಿ ಮಾತೆಗೆ ನೆರೆದಿದ್ದ ಅತಿಥಿಗಳು ಮಾಲಾರ್ಪಣೆ ಮಾಡಿದರು. ಕುಶಾಲನಗರ ಮುಖ್ಯ ಕೇಂದ್ರವಾಗಿರಿಸಿಕೊಂಡು ಸುಂಟಿಕೊಪ್ಪ ಹೋಬಳಿಯನ್ನು ಕಾವೇರಿ ತಾಲೂಕು ರಚಿಸಬೇಕೆಂಬ ಹಕ್ಕೊತ್ತಾಯದ ಮನವಿಯನ್ನು ಸುಂಟಿಕೊಪ್ಪ ಕಾವೇರಿ ತಾಲೂಕು ಹೋರಾಟ ಸ್ಥಾನೀಯ ಸಮಿತಿ ಅಧ್ಯಕ್ಷ ಪಿ.ಎಫ್. ಸಬಾಸ್ಟೀನ್ ಸಭೆಯಲ್ಲಿ ವಾಚಿಸಿದರಲ್ಲದೆ ಮುಖ್ಯ ಮಂತ್ರಿಗಳಿಗೆ ಮನವಿ ಕಳುಹಿಸಿಕೊಡಲಾಗುವದೆಂದೂ ಹೇಳಿದರು.

ಸನ್ಮಾನ: ಈ ಸಂದರ್ಭ ಪತ್ರಕರ್ತರಾದ ಸುಂಟಿಕೊಪ್ಪ ಹೋಬಳಿ ಭೂತನಕಾಡಿನ ವಿಘ್ನೇಶ್ ಅವರನ್ನು ರಾಜ್ಯೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ನಂತರ ಮಾತನಾಡಿದ ವಿಘ್ನೇಶ್ ಭೂತನಕಾಡು, ಸುಂಟಿಕೊಪ್ಪದಲ್ಲಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವವನ್ನು ಕೊಡವ ಗೌಡ, ತುಳು, ಮಾಲೆಯಾಳಿ ತಮಿಳು ಇತರ ಎಲ್ಲಾ ಧರ್ಮಿಯರು ಸೇರಿ ಆಚರಿಸಿಕೊಂಡು ಬರುತ್ತಿರುವದು ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ತಾಲೂಕು ಪಂಚಾಯಿತಿ ಸದಸ್ಯೆ ವಿಮಲಾವತಿ, ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಮತ್ತಿತರರು ಇದ್ದರು. ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿ, ಕನ್ನಡಾಂಬೆಯ ಭಾವಚಿತ್ರಕ್ಕೆ ಅತಿಥಿ ಗಣ್ಯರು ಪುಷ್ಪನಮನ ಸಲ್ಲಿಸಿ, ಕೆ.ಎಸ್. ಅನಿಲ್‍ಕುಮಾರ್ ಸ್ವಾಗತಿಸಿ, ನಿರೂಪಿಸಿದರೆ, ಬಿ.ಎಸ್. ಅಶೋಕ್ ಶೇಟ್ ವಂದಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ: ಕುಶಾಲನಗರದ ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಕಾರು ನಿಲ್ದಾಣದ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಕೆ. ಜಗದೀಶ್ ನೇತೃತ್ವ ವಹಿಸಿದ್ದರು. ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ಸ್ಥಳೀಯ ಬಾಲಕಿಯರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ದಿನದ ಮಹತ್ವದ ಬಗ್ಗೆ ಮಾತನಾಡಿದರು.

ನಗರ ಅಧ್ಯಕ್ಷ ಬಿ.ಜಿ. ಅಣ್ಣಯ್ಯ, ವೇದಿಕೆಯ ಪ್ರಮುಖರಾದ ಟಿ.ಜೆ. ರಾಜು, ಮಂಜುನಾಥ್ ರೈ, ಪ್ರಕಾಶ್, ರೋನಾಲ್ಡ್, ಭಾಗೀರಥಿ, ಪೂವಮ್ಮ, ಸಂಪತ್, ರವಿ ಮತ್ತಿತರರು ಇದ್ದರು.

ಮಡಿಕೇರಿ ವೀರನಾಡು: ಕನ್ನಡ ಭಾಷಾಭಿಮಾನವಿರಬೇಕೆ ಹೊರತು ದುರಾಭಿಮಾನವಿರಬಾರದು ಎಂದು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯೂ ಕಿವಿಮಾತು ಹೇಳಿದರು.

ವೀರನಾಡು ರಕ್ಷಣಾ ವೇದಿಕೆ ವತಿಯಿಂದ ನಗರದ ಉದ್ದೇಶಿತ ನೂತನ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಇಂದು ಕನ್ನಡಿಗರೇ ಸ್ವಚ್ಛ ಕನ್ನಡ ಭಾಷೆಯನ್ನು ನಗಣ್ಯಗೊಳಿಸಿ ಆಂಗ್ಲ ಮಿಶ್ರಿತ ಕನ್ನಡ ಭಾಷೆಯನ್ನೇ ಫ್ಯಾಷನ್ ಮಾಡಿಕೊಂಡಿದ್ದಾರೆ. ಎರಡೂವರೆ ಸಾವಿರ ವರ್ಷಗಳ ಇತಿಹಾಸವನ್ನು ಕನ್ನಡ ಭಾಷೆ ಹೊಂದಿದ್ದು, ಇತರ ಯಾವ ಭಾಷೆಗಳಿಗೂ ಸಿಗದಷ್ಟು ಜ್ಞಾನಪೀಠ ಪ್ರಶಸ್ತಿಗಳು ಕರ್ನಾಟಕದ ಪಾಲಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ವೀರನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಹರೀಶ್ ಆಚಾರ್ಯ ಮಾತನಾಡಿ, ಈಗಾಗಲೇ ತಾಲೂಕು ಹಾಗೂ ಹೋಬಳಿ ಮಟ್ಟಗಳಲ್ಲಿ ವೇದಿಕೆಗೆ ಪ್ರಮುಖರನ್ನು ನೇಮಿಸಲಾಗಿದೆ ಎಂದರು. ತಾ. 26 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುವದು ಎಂದು ತಿಳಿಸಿದರು. ವೇದಿಕೆಯ ಪದಾಧಿಕಾರಿಗಳಾದ ಪ್ರದೀಪ್, ಗಣೇಶ್ ರೈ, ಪ್ರವೀಣ್ ಮತ್ತಿತರ ಪ್ರಮುಖರು ಈ ಸಂದರ್ಭ ಹಾಜರಿದ್ದರು.

ಗೋಣಿಕೊಪ್ಪಲು: ಇಲ್ಲಿನ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ನಡೆದ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ಮೈಸೂರಿನ ಸೋನು ಮೆಲೋಡಿಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ತಂಡದ ಕಲಾವಿದರಿಂದ ಕನ್ನಡ ಅಭಿಮಾನ ಮೂಡಿಸುವ ಹಾಡುಗಳು ಮೂಡಿಬಂದವು.

ಈ ಸಂದರ್ಭ ದಿಯೋಟಿಬ್ಬ ಪರ್ವತಾರೋಹಣ ಮಾಡಿದ ಯುವಕರುಗಳಾದ ಮಧು, ಸಂಚೀತ್, ಪ್ರೀತಂ, ಸನತ್ ಇವರುಗಳನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ, ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಡಿ.ಹೆಚ್. ಮೇದಪ್ಪ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಸಿ.ಕೆ. ಬೋಪಣ್ಣ, ಜಿ.ಪಂ. ಸದಸ್ಯ ಬಾನಂಡ ಪೃಥ್ಯು ರಾಜ್ಯ ಬಿ.ಜೆ.ಪಿ. ಉಪಾಧ್ಯಕ್ಷ ರಹೀಂ ಉಚ್ಚಿಲ್, ಕನ್ನಡ ಚಿತ್ರ ರಂಗದ ಕಲಾವಿದ ರಾಜ್‍ಗೋಪಾಲ್ ಮಿಮಿಕ್ರಿ ಹಾಗೂ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಸಿದ್ದಾಪುರ: ನೆಲ್ಲಿಹುದಿಕೇರಿಯ ಡೊಮಿನೋಸ್ ಕ್ಲಬ್ ವತಿಯಿಂದ ಕನ್ನಡ ರಾಜೋತ್ಸವವನ್ನು ಅಚರಿಸಲಾಯಿತು. ನಂತರ ಪಟ್ಟಣದ ಅಂಗಡಿ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಅಳವಡಿಸಬೇಕೆಂದು ಅಂಗಡಿ ಮಾಲೀಕರಿಗೆ ಮನವಿ ಪತ್ರವನ್ನು ಹಂಚುವ ಮೂಲಕ ಕನ್ನಡದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭ ಕ್ಲಬ್‍ನ ಪದಾಧಿಕಾರಿಗಳಾದ ಶಿಹಾಬುದ್ದೀನ್, ಶೌಕತ್, ನೌಫಲ್ ಶಾಕೀರ್ ಇತರರು ಹಾಜರಿದ್ದರು.ಕುಶಾಲನಗರ: ಕನ್ನಡ ಭಾಷೆಯ ಅಭಿಮಾನ ಕೇವಲ ತೋರ್ಪಡಿಕೆಯಾಗದೆ ಪ್ರತಿಯೊಬ್ಬರೂ ಭಾಷೆಯ ಬಗ್ಗೆ ಆತ್ಮಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಪ್ರಾಧ್ಯಾಪಕ ಜ್ಞಾನೇಶ್ ಕರೆ ನೀಡಿದರು.

ಸ್ಥಳೀಯ ಭಾರತ ಮಾತಾ ವಿದ್ಯಾಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ವರ್ಷದ ಎಲ್ಲ ದಿನಗಳಲ್ಲಿ ಕನ್ನಡದ ಬಗ್ಗೆ ಕಾಳಜಿ ಹೊಂದುವದರೊಂದಿಗೆ ಭಾಷಾ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.

ಸಂಸ್ಥೆಯ ಪ್ರಾಂಶುಪಾಲ ಫಾ. ಜೋಸೆಫ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ನಡೆದ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಫಾ. ರೆನಿ, ಉಪ ಪ್ರಾಂಶುಪಾಲ ಫಾ. ಪ್ರತೀಶ್, ಸಿಸ್ಟರ್ ಟ್ರಿಸ, ಸಿಸ್ಟರ್ ಸಿನಿ ಮ್ಯಾಥ್ಯು ಮುಂತಾದವರು ಉಪಸ್ಥಿತರಿದ್ದರು.

ಕೂಡಿಗೆ: ಕನ್ನಡ ಭಾಷೆಯ ಹಿರಿಮೆ ಉಳಿದಿರುವದು ಗ್ರಾಮಾಂತರಗಳಿಂದ. ಕನ್ನಡ ಭಾಷೆಗೆ ಅಪಮಾನ ಮಾಡದೆ, ನಮ್ಮ ಮಾತೃಭಾಷೆಗೆ ಗೌರವಕೊಟ್ಟು, ಉಳಿಸಿ-ಬೆಳೆಸುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ. ಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ನಡೆದ 62ನೇ ಕನ್ನಡ ರಾಜ್ಯೋತ್ಸವ ಆಚರಣಾ ಕಾರ್ಯಕ್ರಮ ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎಸ್. ರವಿ, ಗ್ರಾಮಸ್ಥರಾದ ಗೋವಿಂದ್ ರಾಜ್ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಕುಮಾರ್, ಸದಸ್ಯರುಗಳಾದ ರತ್ನಮ್ಮ, ಪುಷ್ಪ, ಕಲ್ಪನಾ, ರಾಮಚಂದ್ರ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸ್ವಾಮಿನಾಯಕ್ ಹಾಜರಿದ್ದರು.

ಮಾಲ್ದಾರೆ: ಮಾಲ್ದಾರೆ ಗ್ರಾಮ ಪಂಚಾಯಿತಿಯಲ್ಲಿ ನಡೆದ 62 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ರಾಣಿ ಉದ್ಘಾಟಿಸಿದರು.

ಈ ಸಂದರ್ಭ ಕನ್ನಡ ಭಾಷೆ, ನಾಡು, ನುಡಿಯ ಬಗ್ಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಆಟೋ ಚಾಲಕರು, ಗ್ರಾ.ಪಂ. ಸದಸ್ಯರುಗಳಾದ ರಘು ಕರುಂಬಯ್ಯ, ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಹಾಜರಿದ್ದರು.

ಆಲೂರು-ಸಿದ್ದಾಪುರ: ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದಿನದ ಮಹತ್ವದ ಕುರಿತು ಮಾತನಾಡಿದರು. ನಂತರ ವಿದ್ಯಾರ್ಥಿಗಳು ಕನ್ನಡ ಗೀತೆಗಳು, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೆರೆದಿದ್ದವರ ಮನರಂಜಿಸಿತು.

ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲೂ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮಕ್ಕಳಿಂದ ಭಾಷಣ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.

ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು ಕಾಲೇಜು ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.

ವಿಶ್ವಮಾನವ ಉದ್ಯಾನ: ಮಡಿಕೇರಿಯ ವಿಶ್ವಮಾನವ ಉದ್ಯಾನದಲ್ಲಿ ಕನ್ನಡ ರಾಜ್ಯೋತ್ಸವವನ್ನು ಕಲಾಸಾಗರದ ವತಿಯಿಂದ ಆಚರಿಸಲಾಯಿತು. ಅಬ್ದುಲ್ ಹಫೀಜ್ ಸಾಗರ್ ಧ್ವಜಾರೋಹಣ ಮಾಡಿದರು. ರಾಮನಗರದ ಮುಶ್ತಾಖ್ ಸಾಹೇಬ್ ಚನ್ನಪಟ್ಟಣದ ತಜಮ್ಮು ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು ಪೂರ್ಣಿಮಾ ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಕೂಡುಮಂಗಳೂರು: ಕೂಡುಮಂಗಳೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಮಾರಂಭದಲ್ಲಿ ಧ್ವಜಾರೋಹಣವನ್ನು ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಿ ನೆರವೇರಿಸಿದರು. ದಿನದ ಮಹತ್ವದ ಕುರಿತು ಗ್ರಾ.ಪಂ. ಉಪಾಧ್ಯಕ್ಷ ಕೆ.ವಿ. ಸಣ್ಣಪ್ಪ ಮಾತನಾಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಸಾವಿತ್ರಿ ರಾಜನ್, ಶೀಲಾ ಲಕ್ಷ್ಮಣ್‍ರಾಜ್ ಅರಸ್, ಸುರೇಶ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಯೇಷಾ, ಕಾರ್ಯದರ್ಶಿ ಮಾದಪ್ಪ ಹಾಜರಿದ್ದರು.ಮೂರ್ನಾಡು: ಮೂರ್ನಾಡು ವಿದ್ಯಾಸಂಸ್ಥೆ ವತಿಯಿಂದ ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾದ 62ನೇ ಕನ್ನಡ ರಾಜ್ಯೋತ್ಸವವನ್ನು ಪೂಮಾಲೆ ವಾರಪತ್ರಿಕೆ ಸಂಪಾದಕ ಅಜ್ಜನಿಕಂಡ ಮಹೇಶ್ ನಾಚಯ್ಯ ಉದ್ಘಾಟಿಸಿದರು.

ಮೂರ್ನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಸ್ಥೆ ಉಪಾಧ್ಯಕ್ಷ ಪಳಂಗಂಡ ಮುದ್ದಪ್ಪ, ಕಾರ್ಯದರ್ಶಿ ಚೌರೀರ ಎಂ. ಪೆಮ್ಮಯ್ಯ, ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಈರಮಂಡ ಸೋಮಣ್ಣ, ಎ.ಎಂ. ಶೈಲ, ಪ್ರೊ. ಸುಶೀಲ, ದಾನಿ ಬಾಚ್ಚೆಟಿರ ಲಾಲು ಮುದ್ದಯ್ಯ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಭಾಗೀರಥಿ, ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಪಿ.ಎಂ. ದೇವಕಿ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್.ಡಿ. ಪ್ರಶಾಂತ್ ಉಪಸ್ಥಿತರಿದ್ದರು. ಮುಖ್ಯ ಅತಿಥಿ ಅಜ್ಜನಿಕಂಡ ಪ್ರಮೀಳ ನಾಚಯ್ಯ ಬಹುಮಾನ ವಿತರಿಸಿದರು. ಸರಳ ತಂಡದವರು ಪ್ರಾರ್ಥಿಸಿ, ದಮಯಂತಿ ಸ್ವಾಗತಿಸಿದರು. ಪದವಿಪೂರ್ವ ಕಾಲೇಜು ಉಪನ್ಯಾಸಕಿ ಕುಮುದ ಕಾರ್ಯಕ್ರಮ ನಿರೂಪಿಸಿ, ಪ್ರೌಢಶಾಲೆ ಶಿಕ್ಷಕ ಕೃಷ್ಣಪ್ಪ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.

ಕ.ಸಾ.ಪ. ಹೋಬಳಿ: ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ಹೋಬಳಿ ಘಟಕದ ವತಿಯಿಂದ ಕುಶಾಲನಗರದ ಸಿದ್ದಯ್ಯ ಪುರಾಣಿಕ ಬಡಾವಣೆಯ ಉದ್ಯಾನವನದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.

ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ಹೋಬಳಿ ಘಟಕದ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ಧ್ವಜಾರೋಹಣ ಮಾಡಿದರು.

ಹೋಬಳಿ ಕಸಾಪ ನಿರ್ದೇಶಕ ಊ.ರಾ. ನಾಗೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಕೆ.ಕೆ. ನಾಗರಾಜ ಶೆಟ್ಟಿ ಮಾತನಾಡಿದರು. ಕಸಾಪ ಹೋಬಳಿ ಘಟಕದ ಕಾರ್ಯದರ್ಶಿ ಹೆಚ್.ಬಿ. ದಿನೇಶಾಚಾರಿ, ನಿರ್ದೇಶಕರಾದ ಹರೀಶ್, ಸೌಭಾಗ್ಯ, ಶಿಕ್ಷಕ ಖಾನ್, ನಾಗೇಶ್ ಮೊದಲಾದವರು ಹಾಜರಿದ್ದರು.

ಕುಶಾಲನಗರ ಪಟ್ಟಣ ಪಂಚಾಯಿತಿ: ಕುಶಾಲನಗರ ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಪೂಜೆ ಸಲ್ಲಿಸಲಾಯಿತು.

ಪಂಚಾಯಿತಿ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್, ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಸೇರಿದಂತೆ ಸದಸ್ಯರು, ಸಿಬ್ಬಂದಿಗಳು ಹಾಜರಿದ್ದರು.

ಮಾಲ್ದಾರೆ ಜನಪರ ಸಂಘಟನೆ: ಇಲ್ಲಿನ ಜನಪರ ಸಂಘಟನೆ ವತಿಯಿಂದ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಕಲಾವಿದ ಬಾವ ಅವರು ಧ್ವಜಾರೋಹಣ ಮಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಣಿ, ಜನಪರ ಸಂಘಟನೆಯ ಅಧ್ಯಕ್ಷ ಆ್ಯಂಟೋನಿ, ಸದಸ್ಯರುಗಳಾದ ಪ್ರವೀಣ್, ಅಲಿ, ಅಸೀಸ್, ಪುನೀತ್, ಅನೀಸ್, ಶೌಕತ್‍ಅಲಿ, ಸುರೇಶ್, ಹರಿಪ್ರಸಾದ್, ಮಂಜು, ಮುಂತಾದವರು ಹಾಜರಿದ್ದರು.