ಗೋಣಿಕೊಪ್ಪಲು, ನ. 6: ಮೈಸೂರು ವಿಶ್ವವಿದ್ಯಾಲಯದ ಜಿಮ್ನಾಸ್ಟಿಕ್ ಹಾಲ್‍ನಲ್ಲಿ ನಡೆದ 15 ನೇ ರಾಷ್ಟ್ರಮಟ್ಟದ ಶೋರಿನ್ ಕೈ ಕರಾಟೆ ಚಾಂಪಿಯನ್ಸ್‍ಷಿಪ್‍ನಲ್ಲಿ ಇಲ್ಲಿನ ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ 18 ಕರಾಟೆಪಟುಗಳು 28 ಪದಕ ಜಯಿಸಿದೆ.

ಪದಕ ವಿವರ : ತ್ರಿಷಾ 2 ಚಿನ್ನ, ಸೋಮಣ್ಣ 2 ಚಿನ್ನ, ದೀನತ್ 1 ಚಿನ್ನ ಮತ್ತು 1 ಕಂಚು, ರಿತ್ವಿಕ್ 1 ಚಿನ್ನ ಮತ್ತು 1 ಬೆಳ್ಳಿ, ಅಕಾಶ್ 1 ಚಿನ್ನ, ಧ್ಯಾನ್ 1 ಚಿನ್ನ ಮತ್ತು 1 ಕಂಚು, ಮನ್ವಿತ್ 1 ಚಿನ್ನ ಮತ್ತು 1 ಕಂಚು, ಶಿಶಿರ್ 1 ಚಿನ್ನ, ಆಸ್ಟಿನ್ 1 ಚಿನ್ನ ಮತ್ತು 1 ಕಂಚು, ಮೋನಿಕ 1 ಬೆಳ್ಳಿ ಮತ್ತು 1 ಕಂಚು, ಸಂದೇಶ್ 2 ಬೆಳ್ಳಿ, ಮೋಹನ್ 2 ಬೆಳ್ಳಿ, ವಿಕಾಸ್ 1 ಬೆಳ್ಳಿ ಮತ್ತು 1 ಕಂಚು, ಪೂಜ 1 ಬೆಳ್ಳಿ ಮತ್ತು 1 ಕಂಚು, ದೇವಯ್ಯ 1 ಕಂಚು, ಸಿದ್ದಿಕ್ 1 ಕಂಚು, ರವಿಕುಮಾರ 2 ಕಂಚು, ರಿಕಿತ್ 1 ಕಂಚು ಪಡೆದುಕೊಂಡಿದ್ದಾರೆ.