ವೀರಾಜಪೇಟೆ, ನ. 6: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ವೀರಾಜಪೇಟೆ, ನ. 6: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ನೀಡಬೇಕು ಎಂದು ಆಗ್ರಹಿಸಿ ಜಾತ್ಯತೀತ ಜನತಾ ದಳದ ಜಿಲ್ಲಾ ಅಧ್ಯಕ್ಷ ಮೇರಿಯಂಡ ಸಂಕೇತ್ ನೀಡಬೇಕು ಎಂದು ಆಗ್ರಹಿಸಿ ಜಾತ್ಯತೀತ ಜನತಾ ದಳದ ಜಿಲ್ಲಾ ಅಧ್ಯಕ್ಷ ಮೇರಿಯಂಡ ಸಂಕೇತ್ (ಮೊದಲ ಪುಟದಿಂದ) ನ್ಯಾಯಾಲಯ ಸಿಬಿಐ ತನಿಖೆಗೆ ಆದೇಶ ನೀಡಿ ತನಿಖೆ ನಡೆಯುತ್ತಿದೆ. ಜಾರ್ಜ್ ಸಚಿವ ಸ್ಥಾನದ ಅಧಿಕಾರದಲ್ಲಿದ್ದರೆ ಸಿಬಿಐ ತನಿಖೆಗೂ ಅಡಚಣೆ ಉಂಟಾಗಲಿದೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ತನಕ ಹೋರಾಟವನ್ನು ಮುಂದುವರೆಸುವದಾಗಿ ಹೇಳಿದರು.
ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ತಿಲಾಂಜಲಿ ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಭ್ರಷ್ಟತೆಯಿಂದ ಕೂಡಿರುವದಕ್ಕೆ ಗಣಪತಿ ಆತ್ಮಹತ್ಯೆ ಸಾಕ್ಷಿ. ಕೊಡಗಿನಲ್ಲಿ ಕಾಡಾನೆಗಳಿಂದ 32 ಮಂದಿ ಸಾವು, ನಿಷ್ಕ್ರೀಯ
ಅರಣ್ಯ ಸಚಿವ, ರೈತರ ನಿರಂತರ ಸರದಿ ಆತ್ಮಹತ್ಯೆ ಕೊಡಗಿಗೂ ಮಾರಕವಾಗಿದೆ ಎಂದು ಸಂಕೇತ್ ಪೂವಯ್ಯ ದೂರಿದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಎಚ್. ಮತೀನ್ ಮಾತನಾಡಿ ಗಣಪತಿ ಕುಟುಂಬಕ್ಕೆ ನ್ಯಾಯ ಕೊಡಿಸುವದೇ ಜೆ.ಡಿ.ಎಸ್. ಉದ್ದೇಶ. ಇದಕ್ಕಾಗಿ ರಾಜ್ಯ ಸರಕಾರದ ವಿರುದ್ಧ ಉಗ್ರ ಹೋರಾಟ ಮುಂದುವರೆಯಲಿದೆ ಎಂದರು.
ಉಪವಾಸ ಸತ್ಯಾಗ್ರಹದಲ್ಲಿ ಕ್ಷೇತ್ರದ ಉಪಾಧ್ಯಕ್ಷ ಬಾಳೆಕುಟ್ಟಿರ ಬೋಪಯ್ಯ, ಅಮ್ಮಂಡ ವಿವೇಕ್, ಮಾತಂಡ ಚಂಗಪ್ಪ, ಪಂದಿಯಂಡ ರವಿ, ಇಟ್ಟಿರ ಸಂಪತ್, ಪಿ.ಎ ಮಂಜುನಾಥ್, ಆಶ್ರಫ್ ಆಲಿ, ರಾಜ್ಯ ಸಮಿತಿಯ ಮನ್ಸೂರ್ ಆಲಿ, ಅಮ್ಮತ್ತಿ ಕಾರ್ಮಾಡು ಪಂಚಾಯಿತಿ ಸದಸ್ಯೆ ಜಯಮ್ಮ ವೀರಾಜಪೇಟೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕÀ್ಷ ಹಾಗೂ ಹಿರಿಯ ವಕೀಲ ಎಂ.ಕೆ. ಪೂವಯ್ಯ ಪಟ್ಟಣ ಪಂಚಾಯಿತಿ ಸದಸ್ಯೆ ನಾಗಮ್ಮ, ಕೆ.ಎ.ಆಯೂಬ್ ಪಿ.ಎಂ.ಗಣೇಶ್, ಪಡಿಕ್ಕಲ್ ಕುಸುಮಾವತಿ, ಚಂದ್ರಶೇಖರ್, ಆರ್.ಎ. ಸಕ್ಲೇನ್, ಎಚ್.ಕೆ. ಗೋಪಾಲ್ ಕುಟ್ಟದ ಪಿ.ವಿ.ರೆನ್ನಿ ಸೋಮವಾರಪೇಟೆಯ ಡಿ.ಪಿ. ಬೋಜಪ್ಪ, ಪಾಪಣ್ಣ ಶನಿವಾರಸಂತೆಯ ಆದಿಲ್ ಪಾಶ, ನಾಜೀಂ ಪಾಶ, ಎಸ್.ಜಿ.ನರೆಶ್ಚಂದ್ರ ಇತರ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರುಗಳು ಹಾಜರಿದ್ದರು.