ಶನಿವಾರಸಂತೆ, ನ. 5: ಕೊಡ್ಲಿಪೇಟೆ ಹೋಬಳಿಯ ಜೈ ಭೀಮ್ ಸಿದ್ದಾರ್ಥ ಸಮಿತಿ ವತಿಯಿಂದ ಕೊಡ್ಲಿಪೇಟೆ ಅಂಬೇಡ್ಕರ್ ಭವನದಲ್ಲಿ 15 ಜೋಡಿ ನವ ವಧು-ವರರಿಗೆ ಸಾಮೂಹಿಕ ಸರಳ ವಿವಾಹ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಜೈ ಭೀಮ್ ಸಿದ್ದಾರ್ಥ ಸಮಿತಿ ಅಧ್ಯಕ್ಷ ಎಂ. ಕಾಳಯ್ಯ ವಹಿಸಿದ್ದರು.ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯ ಉಪನ್ಯಾಸಕ ಕೆ.ಪಿ. ಜಯಕುಮಾರ್ ನವ ವಧು-ವರರಿಗೆ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು. ಸಮಾರಂಭವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್ ಉದ್ಘಾಟಿಸಿದರು.

(ಮೊದಲ ಪುಟದಿಂದ) ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಾರಾವ್, ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷೆ ಅನುಸೂಯ ಹೇಮರಾಜ್, ಬ್ಯಾಡಗೊಟ್ಟ ಗ್ರಾ.ಪಂ. ಅಧ್ಯಕ್ಷೆ ನಿರ್ಮಲ ಸುಂದರ್, ಪ್ರಮುಖರಾದ ಡಿ.ಸಿ. ನಿರ್ವಾಣಪ್ಪ, ಎಸ್.ಎಸ್. ಶಿವಶಂಕರ್, ಟಿ.ಈ. ಸುರೇಶ್ ಉಪಸ್ಥಿತರಿದ್ದರು.

ಅರಣ್ಯ ಇಲಾಖೆಯ ಗೋವಿಂದರಾಜು, ಕೊಡ್ಲಿಪೇಟೆ ಸಹಾಯಕ ಠಾಣಾಧಿಕಾರಿ ಚೆಲುವರಾಜ್, ಪ್ರಮುಖರಾದ ಕೆಂಚಯ್ಯ, ಶಿವಣ್ಣ, ಯತೀಶ್, ಕೆಂಚೇಶ್ವರ, ಚಿಕ್ಕಬಸವಯ್ಯ, ಜಯಕರ್ನಾಟಕ ಸಂಘಟನೆ ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆಯವರು, ಆಟೋ ಮಾಲೀಕ-ಚಾಲಕರ ಸಂಘದವರು, ದಲಿತ ಸಂಘರ್ಷ ಸಮಿತಿ, ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಜೈ ಭೀಮ್ ಸಿದ್ದಾರ್ಥ ಸಮಿತಿಯ ವೀರಭದ್ರ ಸ್ವಾಗತಿಸಿ, ಪ್ರಾರ್ಥಿಸಿದರು. ವೇದ ನಿರೂಪಿಸಿ, ವಂದಿಸಿದರು.\