ಮಡಿಕೇರಿ, ನ. 6: ಅಜಿಲಯಾನೆ ನಲಿಕೆ ಸೇವಾ ಸಮಿತಿಯ 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಪ್ರಧಾನ ಕಚೇರಿಯ ಆನ್ಯಾಳದ ದ್ವಾಕ್ರಭವನದಲ್ಲಿ ಇತ್ತೀಚೆಗೆ ಜರುಗಿತು. ಸ್ಥಾಪಕಾಧ್ಯಕ್ಷ ತುಕ್ರ ಅಜಿಲ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಕೆ. ಬಾಲಕೃಷ್ಣ ವಹಿಸಿದ್ದರು. ಉದ್ಘಾಟನಾ ಸಮಾರಂಭದ ನಂತರ ಭಾರತ ದೇಶದ ವೀರಯೋಧ ದಿ. ಶಿವರಾಮ ಕಾಚೇಲು ಇವರ ಪ್ರತಿಮೆಗೆ ಅಜಿಲಯಾನೆ ನಲಿಕೆ ಸೇವಾ ಸಮಿತಿಯ ಸದಸ್ಯರಿಂದ ಗೌರವಾರ್ಪಣೆ ಮಾಡಲಾಯಿತು. ನಂತರ ಸಮಾಜ ಬಾಂಧವರ ಅಂಗನವಾಡಿ ಪುಟಾಣಿ ಗಳಿಗೆ, ಶಾಲಾ ಮಕ್ಕಳಿಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ನಂತರ ಸಮಾರೋಪ ಸಮಾರಂಭ ನಡೆಯಿತು. ಸಂಘದ ವಾರ್ಷಿಕ ವರದಿಯನ್ನು ಮಾಜಿ ಕೋಶಧಿಕಾರಿ ಬಿ. ಕೃಷ್ಣಪ್ಪ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಚೆಂಬು ಗ್ರಾ.ಪಂ. ಅಧ್ಯಕ್ಷ ಪಿ.ಕೆ. ಮಾಧವ, ಉಪಾಧ್ಯಕ್ಷೆ ವನಿತಾ ವಿಜಯ, ಪಂಚಾಯಿತಿ ಸದಸ್ಯರಾದ ಎನ್.ಸಿ. ಮನೋಹರ, ಎನ್.ವಿ. ಶ್ರೀನಿವಾಸ, ನಗರಸಭೆ ಸದಸ್ಯೆ ಲೀಲಾ ಶೇಷಮ್ಮ, ಎ.ಪಿ.ಎಂ.ಸಿ. ಸದಸ್ಯ ಕೆ.ಕೆ ದೇವಪ್ಪ, ಅಜಿಲಯಾನೆ ನಲಿಕೆ ಸೇವಾ ಸಮಿತಿಯ ಸದಸ್ಯ ಎ.ಬಿ. ಮಾಧವ, ದಕ್ಷಿಣ ಕನ್ನಡ ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ಸುಬ್ರಾಯ, ನಲಿಕೆ ಕಾರ್ಯಕ್ರಮ ನಡೆಸಲು ಸ್ಥಳ ದಾನಿಗಳಾದ ನಾಗಪ್ಪ ಸಣ್ಣ ಮನೆ ಇದ್ದರು. ಪಿ. ಕೆ. ಮಾಧವ ಮಾತನಾಡಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಎ.ಪಿ. ರಾಮಕೃಷ್ಣ ಸ್ವಾಗತಿಸಿದರು. ಅರುಣ್ ಸಿ. ಆನ್ಯಾಳ ನಿರೂಪಿಸಿ, ಎ.ಬಿ. ಮಾಧವ ವಂದಿಸಿದರು.