ಮಡಿಕೇರಿ, ನ. 6: ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿದ ಜನಪ್ರತಿನಿಧಿಗಳು ಮತ್ತು ಬೆಳೆಗಾರ ಮಡಿಕೇರಿ, ನ. 6: ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿದ ಜನಪ್ರತಿನಿಧಿಗಳು ಮತ್ತು ಬೆಳೆಗಾರ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಬೇಲೂರು ಶಾಸಕ ರುದ್ರೇಶ್ ಗೌಡ, ಮೂಡಿಗೆರೆ ಶಾಸಕ ಬಿ.ಬಿ. ಲಿಂಗಯ್ಯ, ವಿಧಾನಪರಿಷತ್ ಸದಸ್ಯ ಪ್ರಾಣೇಶ್, ವಿಧಾನಸಭೆಯ ಮಾಜಿ ಅಧ್ಯಕ್ಷ ಬಿ.ಎಲ್. ಶಂಕರ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಜಯರಾಮ್, ಉಪಾಧ್ಯಕ್ಷ ನಂದಾ ಬೆಳ್ಯಪ್ಪ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಬೆಳೆಗಾರ ಸಂಘಟನೆಗಳ ಪ್ರತಿನಿಧಿಗಳು ಇದ್ದ ನಿಯೋಗ ಕಂದಾಯ ಸಚಿವರೊಂದಿಗೆ ಬೆಳೆಗಾರರ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿತು.
(ಮೊದಲ ಪುಟದಿಂದ) ರಾಜ್ಯದಲ್ಲಿ ಸರಕಾರಿ ಭೂಮಿ ಯನ್ನು ಒತ್ತುವರಿ ಮಾಡಿಕೊಂಡು ಕೃಷಿ ಅಭಿವೃದ್ಧಿ ಮಾಡಿಕೊಂಡಿರುವ ರೈತರು ಹಾಗೂ ಬೆಳೆಗಾರರಿಗೆ ಜಾಗದ ಹಕ್ಕು ನೀಡುವಂತೆ ನಿಯೋಗ ಮನವಿ ಮಾಡಿ ಈ ವಿಚಾರವನ್ನು ಬೆಳಗಾವಿ ಯಲ್ಲಿ ನಡೆಯಲಿರುವ ಚಳಿಗಾಲದ (ಮೊದಲ ಪುಟದಿಂದ) ರಾಜ್ಯದಲ್ಲಿ ಸರಕಾರಿ ಭೂಮಿ ಯನ್ನು ಒತ್ತುವರಿ ಮಾಡಿಕೊಂಡು ಕೃಷಿ ಅಭಿವೃದ್ಧಿ ಮಾಡಿಕೊಂಡಿರುವ ರೈತರು ಹಾಗೂ ಬೆಳೆಗಾರರಿಗೆ ಜಾಗದ ಹಕ್ಕು ನೀಡುವಂತೆ ನಿಯೋಗ ಮನವಿ ಮಾಡಿ ಈ ವಿಚಾರವನ್ನು ಬೆಳಗಾವಿ ಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚಿಸಿ ಶಾಶ್ವತ ಪರಿಹಾರ ನೀಡುವಂತೆ ಕೋರಿತು. ಈ ಬಗ್ಗೆ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸುವದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಜನಪ್ರತಿನಿಧಿಗಳು ಹಾಗೂ ಬೆಳೆಗಾರರ ನಿಯೋಗಕ್ಕೆ ಭರವಸೆ ನೀಡಿದರು.