ಗೋಣಿಕೊಪ್ಪ, ನ. 6: ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದ ಜಿಮ್ನಾಸ್ಟಿಕ್ ಹಾಲ್‍ನಲ್ಲಿ ನಡೆದ 15ನೇ ರಾಷ್ಟ್ರಮಟ್ಟದ ‘ಶೋರಿನ್ ಕೈ’ ಕರಾಟೆಚಾಂಪಿಯನ್ಸ್‍ಷಿಪ್‍ನಲ್ಲಿ ಭಾಗವಹಿಸಿದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯ 18 ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗಳಿಸಿದ್ದಾರೆ.
ತ್ರಿಷಾ 2 ಚಿನ್ನ, ಸೋಮಣ್ಣ 2 ಚಿನ್ನ, ದೀನತ್ 1 ಚಿನ್ನ ಮತ್ತು ಕಂಚು, ರಿತ್ವಿಕ್ 1 ಚಿನ್ನ ಮತ್ತು ಬೆಳ್ಳಿ, ಅಕಾಶ್ 1 ಚಿನ್ನ, ಧ್ಯಾನ್ 1 ಚಿನ್ನ ಮತ್ತು ಕಂಚು, ಮನ್ವಿತ್ 1 ಚಿನ್ನ ಮತ್ತು 1 ಕಂಚು, ಶಿಶಿರ್ 1 ಚಿನ್ನ, ಆಸ್ಟಿನ್ 1 ಚಿನ್ನ ಮತ್ತು ಕಂಚು, ಮೋನಿಕ 1 ಬೆಳ್ಳಿ ಮತ್ತು ಕಂಚು, ಸಂದೇಶ್ 2 ಬೆಳ್ಳಿ, ಮೋಹನ್ 2 ಬೆಳ್ಳಿ, ವಿಕಾಸ್ 1 ಬೆಳ್ಳಿ ಮತ್ತು ಕಂಚು, ಪೂಜ 1 ಬೆಳ್ಳಿ ಮತ್ತು ಕಂಚು, ದೇವಯ್ಯ 1 ಕಂಚು, ಸಿದ್ದಿಕ್ 1 ಕಂಚು, ರವಿಕುಮಾರ 2 ಕಂಚು, ರಿಕಿತ್ 1 ಕಂಚಿನ ಪದಕ ಗಳನ್ನು ಪಡೆದಿದ್ದಾರೆ ಎಂದು ಶಿಕ್ಷಕ ವಿ.ಜಿ. ಮಧುಸೂದನ ತಿಳಿಸಿದ್ದಾರೆ.