ನಾಪೆÉÇೀಕ್ಲು, ನ. 5: ಕೊಡವರು ಕ್ರೀಡೆಯಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕಾದರೆ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಾಪೆÉÇೀಕ್ಲು ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಹೇಳಿದರು.

ನಾಪೆÇೀಕ್ಲು ಕೊಡವ ಸಮಾಜದಲ್ಲಿ ನಾಪೆÇೀಕ್ಲು ಕೊಡವ ಸಮಾಜದ ಕ್ರೀಡಾ, ಸಾಂಸ್ಕøತಿಕ ಮತ್ತು ಮನರಂಜನಾ ಕೂಟದ ವತಿಯಿಂದ ಆಯೋಜಿಸಲಾಗಿದ್ದ 5 ನೇ ವರ್ಷದ ಒತ್ತೋರ್ಮೆ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತ ನಾಡಿದರು. ನಾಪೆÉÇೀಕ್ಲು ಕೊಡವ ಸಮಾಜದ ಮನರಂಜನಾ ಕೂಟವು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಇದರಿಂದ ಮಕ್ಕಳಿಗೆ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಹಕಾರಿ ಯಾಗುತ್ತದೆ ಎಂದರು. ಕೂಟವು ಶೆಟಲ್ ಟೂರ್ನಮೆಂಟ್ ಮತ್ತಿತ್ತರ ಸ್ವರ್ಧೆಗಳನ್ನು ಏರ್ಪಡಿಸುವ ಮೂಲಕ ಕೊಡವ ಯುವ ಜನಾಂಗ ಕ್ರೀಡೆಯಲ್ಲಿ ಮುಂದೆ ಬರಲು ಅವಕಾಶ ಮಾಡಿ ಕೊಟ್ಟಿದೆ. ಎಲ್ಲಾ ಸದಸ್ಯರು ಮತ್ತು ಅವರ ಕುಟುಂಬಸ್ಥರು ಇದರ ಸದುಪ ಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು. ಶೆಟಲ್ ಟೂರ್ನಮೆಂಟ್ ಪಂದ್ಯಾಟವನ್ನು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಳ್ತಂಡ ಬೋಪಣ್ಣ ಉದ್ಘಾಟಿಸಿದರು. ನಂತರ ನಡೆದ ಪಂದ್ಯಾಟದ ಬಾಲಕಿಯರ ಸಿಂಗಲ್ಸ್‍ನಲ್ಲಿ ಅರೆಯಡ ರಿಯಾಂಕ ಪ್ರಥಮ ಶಿವಚಾಳಿಯಂಡ ದೇಚಕ್ಕ ದ್ವೀತಿಯ ಸ್ಥಾನ ಪಡೆದರೆ, ಡಬಲ್ಸ್‍ನಲ್ಲಿ ರಿಯಾಂಕ ಮತ್ತು ಮಾನ್ಯ ಪ್ರಥಮ ದೇಚಕ್ಕ ಮತ್ತು ತ್ರೀಷಾ ದ್ವೀತಿಯ ಸ್ಥಾನ ಪಡೆದರು. ಬಾಲಕರ ಸಿಂಗಲ್ಸ್‍ನಲ್ಲಿ ಹಿತ್ತೇಶ್ ಬೋಪಣ್ಣ ಪ್ರಥಮ ರಿತೇಶ್ ಬೋಪಣ್ಣ ದ್ವೀತಿಯ ಸ್ಥಾನ ಪಡೆದರೆ, ಡಬಲ್ಸ್‍ನಲ್ಲಿ ಸಾಗರ್ ಮತ್ತು ಇಶಾನ್ ಪ್ರಥಮ ಇತೇಶ್ ಮತ್ತು ಶಾನ್ ದ್ವೀತಿಯ ಸ್ಥಾನ, ಮಹಿಳೆಯರ ಸಿಂಗಲ್ಸ್‍ನಲ್ಲಿ ನಿತ್ಯಾ ಪ್ರಥಮ ಇಂದಿರಾ ದ್ವೀತಿಯ ಸ್ಥಾನ. ಡಬಲ್ಸ್‍ನಲ್ಲಿ ನಿತ್ಯಾ ಮತ್ತು ದಮಯಂತಿ ಪ್ರಥಮ ಇಂದಿರಾ ಮತ್ತು ನಿಶಿತ ದ್ವೀತಿಯ ಸ್ಥಾನ. ಪುರುಷರ ಡಬಲ್ಸ್‍ನಲ್ಲಿ ಬೊಪ್ಪೇರ ಜಯ ಮತ್ತು ಕುಲ್ಲೇಟೀರ ಅಜೀತ್ ನಾಣಯ್ಯ ಪ್ರಥಮ ಸ್ಥಾನ. ಕುಲ್ಲೇಟೀರ ಶಾಂತ ಮತ್ತು ಶಿವಚಾಳಿಯಂಡ ಅಂಬಿ ಕಾರ್ಯಪ್ಪ ದ್ವೀತಿಯ ಸ್ಥಾನ. 50 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಜಯ ಪ್ರಥಮ ಲೋಕೇಶ್ ದ್ವೀತಿಯ ಸ್ಥಾನ. ಸಿಂಗಲ್ಸ್‍ನಲ್ಲಿ ಅಪ್ಪಣ್ಣ ಪ್ರಥಮ ಶಾಂತ ದ್ವೀತಿಯ ಸ್ಥಾನ. ಮಿಕ್ಸ್ಡ್ ಡಬಲ್ಸ್‍ನಲ್ಲಿ ಜಯ ಮತ್ತು ದಿವ್ಯ ಪ್ರಥಮ. ಅಪ್ಪಣ್ಣ ಮತ್ತು ಇಂದಿರಾ ದ್ವೀತಿಯ ಸ್ಥಾನವನ್ನು ಪಡೆದು ಕೊಂಡರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ಕಾಂಡಂಡ ಜೋಯಪ್ಪ ವಹಿಸಿದ್ದರು.