ಕುಶಾಲನಗರ, ನ. 6: ಸರಕಾರಿ ಶಾಲೆಗಳ ಬಗ್ಗೆ ಸಂಘ-ಸಂಸ್ಥೆಗಳು ಕಾಳಜಿ ವಹಿಸುವದರೊಂದಿಗೆ ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಕೈಜೋಡಿಸಬೇಕೆಂದು ಉದ್ಯಮಿ ಎಸ್‍ಎಲ್‍ಎನ್ ವಿಶ್ವನಾಥನ್ ಕರೆ ನೀಡಿದ್ದಾರೆ. ಅವರು ಗುಡ್ಡೆಹೊಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ರೈಡರ್ಸ್ ರಿಪಬ್ಲಿಕ್ ಮೋಟರ್ ಸೈಕಲ್ ಕ್ಲಬ್ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು ಮಾತನಾಡಿ ದರು.
ವಿದ್ಯಾರ್ಥಿಗಳು ಶಾಲೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿ ಕೊಂಡು ಉತ್ತಮ ಮಟ್ಟದ ಶಿಕ್ಷಣ ಪಡೆಯುವದರೊಂದಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿ ಕೊಳ್ಳಬೇಕೆಂದರು.
ಬೆಂಗಳೂರಿನಿಂದ ಬೈಕ್‍ಗಳಲ್ಲಿ ಆಗಮಿಸಿದ್ದ ಕ್ಲಬ್‍ನ ಸದಸ್ಯರುಗಳು ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಪಠ್ಯ, ಪಠ್ಯೇತರ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭ ಮಾತನಾಡಿದ ಕ್ಲಬ್‍ನ ಅಧ್ಯಕ್ಷರಾದ ಶ್ರೀನಿವಾಸ್ ಕಾಲ್ಯ, ತಮ್ಮ ಸಂಸ್ಥೆಯ 5ನೇ ವಾರ್ಷಿಕೋತ್ಸವದ ಅಂಗವಾಗಿ ಸಂಸ್ಥೆ ಸದಸ್ಯರು ಕೊಡಗು ಜಿಲ್ಲೆಗೆ ಬೆಂಗಳೂರಿನಿಂದ ಬೈಕ್ ಮೂಲಕ ಆಗಮಿಸಿದ್ದು ಸ್ಥಳೀಯ ಸರಕಾರಿ ಶಾಲೆಯ ಮಕ್ಕಳಿಗೆ ಬೇಕಾದ ನೋಟ್ ಪುಸ್ತಕ, ಡಿಕ್ಷನರಿ, ಸ್ಮಾರ್ಟ್ ಕ್ಲಾಸ್ ಪ್ರೊಜೆಕ್ಟರ್ ಸೇರಿದಂತೆ ಅವಶ್ಯಕತೆ ಯುಳ್ಳ ಸ್ಟೇಷನರಿ ಸಾಮಗ್ರಿಗಳನ್ನು ವಿತರಿಸಲು ಕ್ರಮಕೈಗೊಂಡಿದ್ದೇವೆ. ಈ ಮೂಲಕ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳೊಂದಿಗೆ ಕೆಲವು ಸಮಯ ಕಳೆಯುವ ಅವಕಾಶ ದೊರೆತಿರುವದು ಸಂತಸ ತಂದಿದೆ ಎಂದರು.
ಸುಮಾರು 25 ಕ್ಕೂ ಅಧಿಕ ಐಷಾರಾಮಿ ಬೈಕ್‍ಗಳಲ್ಲಿ ಆಗಮಿಸಿದ್ದ 50ಕ್ಕೂ ಅಧಿಕ ಮಂದಿ ಮತ್ತು ಸಂಸ್ಥೆಯ ಪ್ರಮುಖರು ಕುಟುಂಬ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳೊಂದಿಗೆ ಕೆಲ ಸಮಯ ಕಳೆದಿದ್ದು ಗ್ರಾಮೀಣ ಶಾಲೆಯ ಮಕ್ಕಳಲ್ಲಿ ಸಂತಸ ಮೂಡಿಸಿತು.
ಈ ಸಂದರ್ಭ ನಡೆದ ಸರಳ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಶಾಲಾ ಮುಖ್ಯೋಪಾಧ್ಯಾಯರಾದ ಸಣ್ಣಸ್ವಾಮಿ, ಗ್ರಾಪಂ ಅಧ್ಯಕ್ಷೆ ಭಾರತಿ, ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿ ದ್ದರು.
ಬೆಂಗಳೂರಿನಿಂದ ಬಂದ ಸಂಸ್ಥೆಯ ಸದಸ್ಯರುಗಳ ಐಷಾರಾಮಿ ಬೈಕ್‍ಗಳ ಮೌಲ್ಯ ಕನಿಷ್ಟ ಎಂದರೆ 10 ಲಕ್ಷದಿಂದ ರೂ. 50 ಲಕ್ಷದ ತನಕ ಇದ್ದವು. ಅವುಗಳನ್ನು ಸ್ಥಳೀಯರು ಅಚ್ಚರಿಯಿಂದ ನೋಡುತ್ತಿದ್ದ ದೃಶ್ಯ ಕಂಡುಬಂತು.