ಕೂಡಿಗೆ: ಟಿಪ್ಪು ಜಯಂತಿ ಆಚರಣೆ ವಿಷಯವಾಗಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಪ್ರಮುಖರುಗಳ, ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳನ್ನೊಳಗೊಂಡಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಡಿವೈಎಸ್‍ಪಿ ಸಂಪತ್‍ಕುಮಾರ್ ಮಾತನಾಡಿ, ಟಿಪ್ಪು ಜಯಂತಿ ಆಚರಣೆಯ ವಿಚಾರವಾಗಿ ಎಲ್ಲಾ ನಾಯಕರುಗಳು ಯಾವದೇ ರೀತಿಯ ಘರ್ಷಣೆಗೆ ಅವಕಾಶ ಮಾಡದೆ ಶಾಂತ ರೀತಿಯಲ್ಲಿ ಪಾಲ್ಗೊಳ್ಳಬೇಕೆಂದರು.

ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ. ಮಹೇಶ್ ಮಾತನಾಡಿ, ಈಗಾಗಲೇ ಕೊಡಗಿನ ಗಡಿಭಾಗ ಶಿರಂಗಾಲ ಮತ್ತು ಕೂಡಿಗೆ ಸರ್ಕಲ್‍ನಲ್ಲಿ ತಪಾಸಣಾ ಗೇಟ್‍ಅನ್ನು ಅಳವಡಿಸಿ ಸಿಬ್ಬಂದಿಗಳನ್ನು ನೇಮಕ ಮಾಡಿ ಕೊಡಗಿನಿಂದ ಹೋಗುವ ಮತ್ತು ಬರುವ ವಾಹನಗಳ ಸಂಖ್ಯೆಯನ್ನು ನಮೂದಿಸಿ, ತಪಾಸಣೆ ಮಾಡುವ ಕ್ರಮವನ್ನು ಕೈಗೊಳ್ಳಲಾಗಿದೆ. ಗ್ರಾಮಸ್ಥರುಗಳು ಯಾವದೇ ಗಲಭೆಗೆ ಅವಕಾಶ ನೀಡದೇ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ನಂಜರಾಯಪಟ್ಟಣ, ಗುಡ್ಡೆಹೊಸೂರು, ಕೂಡಿಗೆ, ಕೂಡುಮಂಗಳೂರು, ಮುಳ್ಳುಸೋಗೆ, ತೊರೆನೂರು, ಶಿರಂಗಾಲ, ಹೆಬ್ಬಾಲೆ ವ್ಯಾಪ್ತಿಯ ನಾಯಕರು, ಗ್ರಾಮಸ್ಥರು ಇದ್ದರು.

ಗೋಣಿಕೊಪ್ಪಲು ಶಾಂತಿ ಸಭೆ

ಗೋಣಿಕೊಪ್ಪಲು: ಗೋಣಿಕೊಪ್ಪಲಿನಲ್ಲಿ ಟಿಪ್ಪು ಜಯಂತಿ ಆಚರಣೆ ಇಲ್ಲ. ಟಿಪ್ಪು ಜಯಂತಿ ಆಚರಣೆ ಸರ್ಕಾರದ ಕಾರ್ಯಕ್ರಮವೇ ವಿನಾಃ ಮುಸ್ಲಿಂ ಜನಾಂಗದ ಕಾರ್ಯಕ್ರಮವಲ್ಲ. ತಾ. 10 ರಂದು ಶುಕ್ರವಾರ ಪ್ರಾರ್ಥನಾ ಮಂದಿರದಲ್ಲಿ ‘ನಮಾಜ್’ಗೆ ಭದ್ರತೆ ಒದಗಿಸಿಕೊಡಿ ಎಂದು ಧಾರ್ಮಿಕ ಮುಖಂಡರು ಶಾಂತಿ ಸಭೆಯಲ್ಲಿ ಮನವಿ ಮಾಡಿದರು.

ಗೋಣಿಕೊಪ್ಪಲು ಆರಕ್ಷಕ ಠಾಣೆಯಲ್ಲಿ ನೂತನ ಪೆÇಲೀಸ್ ವೃತ್ತ ನಿರೀಕ್ಷಕ ದಿವಾಕರ್ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು. ಟಿಪ್ಪು ಜಯಂತಿ ಆಚರಣೆಯ ಅವಶ್ಯಕತೆ, ಕಾನೂನು ಪಾಲನೆ, 144 ಸೆಕ್ಷನ್ ಅಳವಡಿಕೆ, ಗೋಣಿಕೊಪ್ಪಲಿನಲ್ಲಿ ಸೌಹಾರ್ದತೆಯ ವಾತಾವರಣಕ್ಕೆ ಧಾರ್ಮಿಕ ಬಾಂಧವರ ಸಹಕಾರ ಇತ್ಯಾದಿ ವಿಚಾರವಾಗಿ ಪರಸ್ಪರ ಚರ್ಚೆ ನಡೆಯಿತು.

ಸಿ.ಐ. ದಿವಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ, 2015 ಹಾಗೂ 2016 ರಲ್ಲಿ ಟಿಪ್ಪು ಜಯಂತಿ ಸರ್ಕಾರಿ ಆಚರಣೆ ಸಂದರ್ಭ ನಡೆದ ಘಟನಾವಳಿಗಳು ಹಾಗೂ ಗೋಣಿಕೊಪ್ಪಲಿನಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದರೂ ಪ್ರಮುಖ ವಾಣಿಜ್ಯ ನಗರಿಯಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆ ತರುವಂತಹಾ ಛಾಯಾಚಿತ್ರ ಇತ್ಯಾದಿ ಪೆÇೀಸ್ಟರ್‍ಗಳಿಗೆ ಅವಕಾಶವಿಲ್ಲ.

ಕಾನೂನು ಬಾಹಿರ ಚಟುವಟಿಕೆಯನ್ನು ಹತ್ತಿಕ್ಕುವ ಸಲುವಾಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೆÇಲೀಸ್ ಅಧೀಕ್ಷಕರ ಆದೇಶದ ಮೇರೆ ಜಿಲ್ಲಾದ್ಯಂತ ಅಂದು ಸೆ. 144 ಜಾರಿಯಲ್ಲಿರುತ್ತದೆ. ವೀರಾಜಪೇಟೆ ತಾಲೂಕಿನ ಮಾಕುಟ್ಟ, ಕುಟ್ಟ, ಮಾಲ್ದಾರೆ ಹಾಗೂ ಆನೆಚೌಕೂರು ಚೆಕ್‍ಪೆÇೀಸ್ಟ್ ಒಳಗೊಂಡಂತೆ, ಆಂತರಿಕವಾಗಿ ಕೆಲವು ಸೂಕ್ಷ್ಮ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಹಾಗೂ ಅಪರಿಚಿತ ವ್ಯಕ್ತಿಗಳನ್ನು ತಪಾಸಣೆ ಮಾಡಲಾಗುತ್ತದೆ ಎಂದರು.

ಸರ್ಕಾರದ ಸುತ್ತೋಲೆ ಪ್ರಕಾರ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಮಾತ್ರ ಟಿಪ್ಪುಜಯಂತಿ ಆಚರಣೆಯಿದ್ದು, ಎಲ್ಲ ಪ್ರಾರ್ಥನಾ ಮಂದಿರಗಳಿಗೂ ಭದ್ರತೆ ಒದಗಿಸಲಾಗುವದು ಎಂದು ಭರವಸೆ ನೀಡಿದರು.

ಗೋಣಿಕೊಪ್ಪಲು ಶಾಫಿ ಜುಮ್ಮಾ ಮಸೀದಿಯ ಅಬ್ದುಲ್ ಸಮ್ಮದ್ ಮಾತನಾಡಿ, ಗೋಣಿಕೊಪ್ಪಲನ್ನು ಸೂಕ್ಷ್ಮ ಪ್ರದೇಶ ಎಂದು ಯಾಕೆ ಕರೆಯಲಾಗುತ್ತದೆ. ಇಲ್ಲಿನ ಎಲ್ಲ ಜನಾಂಗದವರು ಒಗ್ಗಟ್ಟಿನೊಂದಿಗೆ ಶಾಂತಿ ಸಹಬಾಳ್ವೆಯೊಂದಿಗೆ ಬದುಕುತ್ತಿದ್ದೇವೆ ಎಂದು ಹೇಳಿದರು.

ಶಾಫಿ ಜುಮ್ಮಾ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಸಲಾಂ ಮಾತನಾಡಿ, ಟಿಪ್ಪು ಜಯಂತಿ ಸರ್ಕಾರಿ ಕಾರ್ಯಕ್ರಮವೇ ಹೊರತು, ಮುಸ್ಲಿಂ ಜನಾಂಗದ ಕಾರ್ಯಕ್ರಮವಲ್ಲ ಎಂದರು. ಗೋಣಿಕೊಪ್ಪಲಿನಲ್ಲಿ ಮುಸ್ಲಿಂ ಬಾಂಧವರು ಯಾವದೇ ಟಿಪ್ಪು ಜಯಂತಿ ಆಚರಣೆ ಮಾಡುತ್ತಿಲ್ಲ. ಮೆರವಣಿಗೆಯೂ ಇಲ್ಲ. ಆದರೆ, ಅಂದು ಶುಕ್ರವಾರ ದಿನ ಮಸೀದಿಯಲ್ಲಿ ಪ್ರಾರ್ಥನೆಗೆ ಭದ್ರತೆಯ ಅವಶ್ಯಕತೆ ಇದೆ. ಈ ಬಗ್ಗೆ ನಿರ್ಬಂಧ ಸಡಿಲಿಸುವಂತೆ ಮನವಿ ಮಾಡಿದರು.

ಆರ್‍ಎಸ್‍ಎಸ್ ಪ್ರಮುಖ ಸುಬ್ರಮಣಿ ಮಾತನಾಡಿ, ಇಸ್ಲಾಂ ಧರ್ಮದಲ್ಲಿ ಮೂರ್ತಿ ಪೂಜೆ, ಗೋರಿ ಪೂಜೆಗೆ ಅವಕಾಶವಿಲ್ಲ ಎಂದು ಹೇಳಿದರು.

ಗ್ರಾ.ಪಂ. ಸದಸ್ಯೆ ಯಾಸ್ಮೀನ್ ಮಾತನಾಡಿ, ನಮಗೆ ಗಾಂಧಿ ಜಯಂತಿ ಆಚರಣೆ ಮೊದಲಿನಿಂದ ಗೊತ್ತಿದೆ. ಟಿಪ್ಪು ಜಯಂತಿ, ಕನಕದಾಸ ಜಯಂತಿ, ವಾಲ್ಮಿಕಿ ಜಯಂತಿ ಇತ್ಯಾದಿಗಳು ಈವಾಗ ತಾನೇ ಆಚರಿಸಲ್ಪಡುತ್ತಿದೆ. ಇದರ ಅವಶ್ಯಕತೆ ಇದೆಯೇ? ಎಂದು ಪ್ರಶ್ನಿಸಿದರು.

ಗೋಣಿಕೊಪ್ಪಲು ನಗರ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕುಟ್ಟಪ್ಪ ಮಾತನಾಡಿ, ಜಿಲ್ಲೆಯಾದ್ಯಂತ ಹಲವು ಜಯಂತಿಗಳು ನಡೆಯುತ್ತಿವೆ. ಕಳೆದ ವರ್ಷದಿಂದ ಜಿಲ್ಲೆಯ ಪೆÇಲೀಸ್ ಇಲಾಖೆಯೂ ಶಾಂತಿ ಸುವ್ಯವಸ್ಥೆಯ ನಿಟ್ಟಿನಲ್ಲಿ ಉತ್ತಮ ಬಂದೋಬಸ್ತ್ ಏರ್ಪಡಿಸುತ್ತಿದೆ. ಇಲ್ಲಿನ ಶಾಂತಿ ಪ್ರಿಯ ಜನತೆ ಹಿಂಸೆಯನ್ನು ಯಾವತ್ತೂ ಸಹಿಸುವದಿಲ್ಲ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಪೆÇನ್ನಂಪೇಟೆ ಪೆÇಲೀಸ್ ಉಪನಿರೀಕ್ಷಕ ಬಿ.ಜೆ. ಮಹೇಶ್, ಅಟೋ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಜಪ್ಪು ಅಚ್ಚಪ್ಪ, ಮಹಿಳಾ ಸಮಾಜದ ಅಧ್ಯಕ್ಷೆ ಸುಮಿ ಸುಬ್ಬಯ್ಯ, ಗ್ರಾ.ಪಂ. ಸದಸ್ಯ ಹಾಗೂ ಧಾರ್ಮಿಕ ಮುಖಂಡ ಕಲೀಮುಲ್ಲಾ, ಸಮೀರ್, ಪತ್ರಕರ್ತ ಟಿ.ಎಲ್. ಶ್ರೀನಿವಾಸ್ ಮುಂತಾದವರು ಮಾತನಾಡಿದರು.

ಗ್ರಾ.ಪಂ. ಅಧ್ಯಕ್ಷೆ ಎಂ. ಸೆಲ್ವಿ, ಸಂತ ಥೋಮಸ್ ಚರ್ಚ್‍ನ ಸಂಚಾಲಕ ಎಂ.ಎಂ. ಥೋಮಸ್, ಹಿದಾಯತ್ ಮಸೀದಿಯ ಅಹಮ್ಮದ್, ಅಶೋಕ್ ರೈ, ಸುರೇಶ್ ರೈ, ಸೋಮಣ್ಣ, ಗ್ರಾ.ಪಂ. ಸದಸ್ಯರಾದ ರತಿ ಅಚ್ಚಪ್ಪ, ಧನಲಕ್ಷ್ಮಿ, ಸಾಹೀನ್, ಸುಲೇಖಾ ಮತ್ತು ಅಬ್ದುಲ್ ರಶೀದ್, ಆಸೀಫ್, ಮನೋಜ್ ಮುಂತಾದವರು ಉಪಸ್ಥಿತರಿದ್ದರು.

ಪಾಡಿಯಲ್ಲಿ ಸಭೆ

ನಾಪೋಕ್ಲು: ರಾಜ್ಯ ಸರ್ಕಾರ ಯಾರಿಗೂ ಬೇಡವಾದ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವದರಿಂದ ಶಾಂತಿ ಸಹಬಾಳ್ವೆಗೆ ಹೆಸರಾದ ಕೊಡಗಿನಲ್ಲಿ ಶಾಂತಿ ಕದಡಿ ಜನಾಂಗಗಳಲ್ಲಿ ಸಾಮರಸ್ಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಭಕ್ತ ಜನ ಸಂಘ ಆರೋಪಿಸಿದೆ. ಕಕ್ಕಬೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು ಇಸ್ಲಾಂ ಧರ್ಮದಲ್ಲಿ ಯಾವದೇ ಜಯಂತಿ ಆಚರಣೆ ನಿಷಿದ್ಧವಿದ್ದರೂ ಬಲವಂತಾದ ಟಿಪ್ಪು ಜಯಂತಿ ಆಚರಣೆ ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಪಾಡಿ ಇಗ್ಗುತ್ತಪ್ಪ ದೇವಾಲಯದ ಭಕ್ತ ಜನ ಸಂಘದ ಉಪಾಧ್ಯಕ್ಷ ಪರದಂಡ ಡಾಲಿ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ನಿರ್ದೇಶಕರಾದ ಪಾಂಡಂಡ ನರೇಶ್, ಕಲಿಯಂಡ ಸುನಂದ, ಕಲ್ಯಾಟಂಡ ರಘು ತಮ್ಮಯ್ಯ, ಚಂಡೀರ ಜಗದೀಶ್, ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.ನಾಪೋಕ್ಲು ಕೊಡವ ಸಮಾಜ

ನಾಪೆÇೀಕ್ಲು: ರಾಜ್ಯ ಸರ್ಕಾರ ಕೊಡಗಿನ ಜನರ ಭಾವನೆಗೆ ಧಕ್ಕೆ ತರುವ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿರುವದು ಖಂಡನೀಯ ಎಂದು ನಾಪೆÇೀಕ್ಲು ಕೊಡವ ಸಮಾಜದ ಉಪಾಧ್ಯಕ್ಷ ಮಾಳೇಯಂಡ ಅಯ್ಯಪ್ಪ ಮತ್ತು ಸಮಿತಿಯವರು ವಿರೋಧ ವ್ಯಕ್ತಪಡಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಮತಬ್ಯಾಂಕ್ ಗಿಮಿಕ್ ರಾಜಕೀಯ ಎಂದು ಲೇವಡಿ ಮಾಡಿದರು. ದೇಶ ಕಂಡ ಮಹಾನ್ ದಂಡ ನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಮತ್ತು ಜನರಲ್ ತಿಮ್ಮಯ್ಯನವರ ಪುತ್ತಳಿ ಅನಾವರಣ ಸಂದರ್ಭ ರಾಜ್ಯ ಸರಕಾರ ತಿರುಗಿ ನೋಡದೆ ರಾಜನ ಜಯಂತಿಯನ್ನು ಮಾಡಲು ಹೊರಟಿರುವದು ನಾಚಿಕೆಗೇಡಿನ ವಿಷಯ ಎಂದರು

ಕೊಡವ ಸಮಾಜದ ಕಾರ್ಯದರ್ಶಿ ಮಂಡೀರ ರಾಜಪ್ಪ, ಖಜಾಂಚಿ ಅಪ್ಪಾರಂಡ ಸುಧೀರ್ ಅಯ್ಯಪ್ಪ, ಕನ್ನಂಬೀರ ಸುಧಿ ತಿಮ್ಮಯ್ಯ, ವ್ಯವಸ್ಥಾಪಕ ಶಿವಚಾಳಿಯಂಡ ಜಗದೀಶ್ ಇದ್ದರು.

ವಿರೋಧ ನಿರ್ಣಯ ಖಂಡನೀಯ - ಕಾಂಗ್ರೆಸ್

ಸೋಮವಾರಪೇಟೆ: ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಕಾರ ಆಚರಿಸುತ್ತಿರುವದು ಸ್ವಾಗತಾರ್ಹ. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್‍ನ ಎಲ್ಲ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಪಕ್ಷದ ಪ್ರಮುಖರು ಪಾಲ್ಗೊಳ್ಳಬೇಕೆಂದು ಸೋಮವಾರಪೇಟೆ ಬ್ಲಾಕ್ ಅಲ್ಪಸಂಖ್ಯಾತ ಘಟಕ ಮನವಿ ಮಾಡಿದೆ.

ಟಿಪ್ಪು ಸುಲ್ತಾನ್ ಮುಸ್ಲಿಂ ಸಮೂದಾಯಕ್ಕೆ ಸೇರಿದವರು ಎಂಬ ಉದ್ದೇಶದಿಂದ ಅವರ ಜಯಂತಿಯನ್ನು ವಿರೋಧಿಸುವ ನೆಪದಲ್ಲಿ ಸಮಾಜದಲ್ಲಿ ಅಶಾಂತಿಯನ್ನು ಮೂಡಿಸುವ ಕೆಲಸವಾಗುತ್ತಿದೆ. ಬಿಜೆಪಿ ಆಡಳಿತವಿರುವ ಜಿಲ್ಲಾ ಪಂಚಾಯಿತಿ ಮತ್ತು ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭೆಗಳಲ್ಲಿ ಟಿಪ್ಪು ಜಯಂತಿಯ ಆಚರಿಸದಂತೆ ನಿರ್ಣಯ ಕೈಗೊಂಡಿರುವದು ಖಂಡನೀಯ. ಇದು ಪಂಚಾಯಿತಿ ಕಾಯ್ದೆಗೆ ವಿರುದ್ಧವಾಗಿದೆ ಎಂದು ಘಟಕ ತಾಲೂಕು ಅಧ್ಯಕ್ಷ ಅಬ್ಬಾಸ್ ಹಾಜಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂಸದ, ಶಾಸಕರು, ಸಂಘ ಪರಿವಾರದ ಪ್ರಮುಖರು ಟಿಪ್ಪು ಸುಲ್ತಾನ್ ಚರಿತ್ರೆಯನ್ನು ತಿರುಚಿ, ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಸರ್ಕಾರದ ಕಾರ್ಯಕ್ರಮವಾದ ಟಿಪ್ಪು ಜಯಂತಿಯನ್ನು ಶಾಂತಿಯುತವಾಗಿ ಆಚರಿಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಕೊಡ್ಲಿಪೇಟೆ ಹೋಬಳಿ ಘಟಕದ ಅಧ್ಯಕ್ಷ ಔರಂಗಜೇಬ್, ಬ್ಯಾಡಗೊಟ್ಟ ವಲಯ ಅಧ್ಯಕ್ಷ ಮಹಮ್ಮದ್ ಹನೀಫ್, ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಂ. ಹಮೀದ್ ಉಪಸ್ಥಿತರಿದ್ದರು.

ಚೆಟ್ಟಳ್ಳಿಯಲ್ಲಿ ಶಾಂತಿ ಸಭೆ

ಚೆಟ್ಟಳ್ಳಿ: ಟಿಪ್ಪು ಜಯಂತಿ ದಿನ ಶಾಂತಿ ಕಾಪಾಡುವ ಮೂಲಕ ಸಹಕರಿಸಬೇಕೆಂದು ಮಡಿಕೇರಿ ವೃತ್ತನಿರೀಕ್ಷಕ ಪ್ರದೀಪ್ ಅವರು ಚೆಟ್ಟಳ್ಳಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮನವಿ ಮಾಡಿದರು.

ಈ ವರ್ಷದ ಆಚರಣೆಯ ಸಂದರ್ಭ ಅಶಾಂತಿ ವಾತಾವರಣ ನಿರ್ಮಾಣವಾಗದಂತೆ ಕಾನೂನೂ ಕ್ರಮವನ್ನು ಕೈಗೊಳ್ಳಲಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್ ಮಾತನಾಡಿ, ಸರಕಾರದ ಕಾರ್ಯಕ್ರಮಕ್ಕೆ ಎಲ್ಲರು ಸಹಕರಿಸಬೇಕೆಂದರು. ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮೊಹಮದ್ ರಫಿ ಮಾತನಾಡಿ, ಟಿಪ್ಪು ಜಯಂತಿಯನ್ನು ಚೆಟ್ಟಳ್ಳಿಯಲ್ಲಿ ಆಚರಿಸುವದಿಲ್ಲ. ಚೆಟ್ಟಳ್ಳಿ ಸೂಕ್ಷ್ಮ ಪ್ರದೇಶವಾಗಿದ್ದು ಸಿಸಿ ಕ್ಯಾಮೆರಾ, ಪೊಲೀಸ್ ಸಿಬ್ಬಂದಿಗಳ ನೇಮಕ ಮಾಡಬೇಕೆಂದರು. ಕಾನೂನನ್ನು ಜಾರಿಗೊಳಿಸಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ನೋಡಿಕೊಳ್ಳಬೇಕೆಂದರು.

ಮಡಿಕೇರಿ ಠಾಣಾಧಿಕಾರಿ ಬೋಜಪ್ಪ ಮಾತನಾಡಿ, ಶಾಂತಿ ಕಾಪಾಡಲು ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಮಾಡಲಾಗುವದು. ಸಾರ್ವಜನಿಕರು ಊಹಾ ಪೋಹಗಳಿಗೆ ಕಿವಿಕೊಡದೆ ಶಾಂತಿಯನ್ನು ಕಾಪಾಡಿಕೊಳ್ಳಬೇಕೆಂದರು. ಜಯಂತಿಯ ಪರ ಹಾಗೂ ವಿರೋಧದ ಪ್ರತಿಭಟನೆ, ಜಾಥಾ, ಸಭೆಗಳಿಗೆಲ್ಲ ಅವಕಾಶವಿಲ್ಲವೆಂದರು.

ಸಭೆಯಲ್ಲಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಧುಸೂಧನ್, ರವಿ, ಚೆಟ್ಟಳ್ಳಿ ಕಾಂಗ್ರೆಸ್ ವಲಯಾಧ್ಯಕ್ಷ ಪುತ್ತರಿರ ಪಪ್ಪು ತಿಮ್ಮಯ್ಯ, ಸುತ್ತಲಿನ ಮಸೀದಿಯ ಪ್ರಮುಖರು ಹಾಗೂ ಇತರರು ಹಾಜರಿದ್ದರು.

ಹಿಂದೂ ಜಾಗರಣಾ ವೇದಿಕೆ ವಿರೋಧ

ಕುಶಾಲನಗರ: ರಾಜ್ಯ ಸರಕಾರ ಸ್ವಾರ್ಥ ರಾಜಕೀಯಕ್ಕಾಗಿ ಟಿಪ್ಪು ಅನ್ನು ವೈಭವೀಕರಿಸುವ ಕಾರ್ಯವನ್ನು ಕೊಡಗು ಜಿಲ್ಲಾ ಹಿಂದು ಜಾಗರಣಾ ವೇದಿಕೆ ಖಂಡಿಸುತ್ತಿದೆ ಎಂದು ವೇದಿಕೆಯ ಜಿಲ್ಲಾ ಸಂಚಾಲಕ ಮಂಜುನಾಥ್ ತಿಳಿಸಿದ್ದಾರೆ. ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ತಾ. 10 ರಂದು ಸರಕಾರ ಆಚರಿಸಲು ನಿರ್ಧರಿಸಿರುವ ಟಿಪ್ಪು ಜಯಂತಿ ದಿನದಂದು ಜಯಂತಿ ವಿರೋಧಿ ಹೋರಾಟ ಸಮಿತಿ ಕೈಗೊಳ್ಳುವ ನಿರ್ಣಯವನ್ನು ಹಿಂದು ಜಾಗರಣಾ ವೇದಿಕೆ ಸಂಪೂರ್ಣ ಬೆಂಬಲಿಸುತ್ತದೆ ಎಂದಿದ್ದಾರೆ.

ರಾಜ್ಯ ಸರಕಾರ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಟಿಪ್ಪು ಜಯಂತಿ ಆಚರಿಸಲು ವಿನಾಕಾರಣ ಸರಕಾರದ ಹಣವನ್ನು ವ್ಯಯಿಸುತ್ತಿರುವದು ಸರಿಯಲ್ಲ ಎಂದು ಹೇಳಿದ್ದಾರೆ.ಕೊಡವ ಸಮಾಜ ವಿರೋಧ

ಮಡಿಕೇರಿ: ಟಿಪ್ಪುವಿನ ಜಯಂತಿಯನ್ನು ಕೊಡಗಿನಲ್ಲಿ ಮಾಡಬಾರದು. ಸರಕಾರ ಹೊರಟಿರುವ ಈ ಕಾರ್ಯಕ್ರಮಕ್ಕೆ ಮಡಿಕೇರಿ ಕೊಡವ ಸಮಾಜ ಖಂಡನೆ ವ್ಯಕ್ತಪಡಿಸುತ್ತದೆಂದು ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಡಗಿನಲ್ಲಿ ಕೊಡವರನ್ನು ಕೊಂದಿರುವದಕ್ಕೆ ಮೂಕಸಾಕ್ಷಿಯಾದ ದೇವಟ್ಟಿ ಪರಂಬು, ಟಿಪ್ಪುವಿನ ಮಂತಾಧತೆಗೆ ಒಳಗಾದ ಅದೆಷ್ಟೋ ಕುಟುಂಬಗಳು, ಲೂಟಿಗೆ ಸಾಕ್ಷಿಯಾದ ಹಿಂದೂ ದೇವಾಲಯಗಳ ವಿರೂಪಗೊಂಡ ವಿಗ್ರಹಗಳೆಲ್ಲ ಇಂದಿಗೂ ಸಾಕ್ಷಿಹೇಳುತ್ತಿವೆ. ಇವೆಲ್ಲವನ್ನು ಮನಗಾಣದ ಸರಕಾರ ಟಿಪ್ಪು ಜಯಂತಿ ಆಚರಣೆ ಮಾಡುವದಕ್ಕೆ ಸದಸ್ಯರ ವಿರೋಧವಿದೆ ಎಂದು ಹೇಳಿದ್ದಾರೆ.

ಅಮ್ಮತ್ತಿ ದೇವಾಲಯ ಸಮಿತಿ ವಿರೋಧ

ವೀರಾಜಪೇಟೆ: ಟಿಪ್ಪು ಜಯಂತಿಯನ್ನು ಅಮ್ಮತ್ತಿ ಬಸವೇಶ್ವರ ದೇವಾಲಯ ಸಮಿತಿ ವಿರೋಧಿಸಿದೆ. ಈಗ ಅನ್ಯೋನ್ಯತೆಯಿಂದ ಇರುವ ಜನರೊಂದಿಗೆ ಒಡಕನ್ನು ಮೂಡಿಸುವ ಉದ್ದೇಶ ಸರ್ಕಾರದ್ದು ಎಂದು ದೇವಾಲಯ ಸಮಿತಿ ಉಪಾಧ್ಯಕ್ಷ ಕುಟ್ಟಂಡ ಪ್ರಿನ್ಸ್ ಗಣಪತಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಜನರ ಹಿತವನ್ನು ಕಾಯಬೇಕು ಎಂದು ಒತ್ತಾಯಿಸಿದರು. ದೇವಾಲಯ ಸಮಿತಿ ಖಜಾಂಚಿ ಉದ್ದಪಂಡ ಜಗತ್ ಮಾತನಾಡಿದರು. ಅಧ್ಯಕ್ಷ ಮಾಚಿಮಂಡ ಮಧು, ಜಂಟಿ ಕಾರ್ಯದರ್ಶಿ ಪಟ್ರಪಂಡ ಸೋಮಯ್ಯ, ನಿರ್ದೇಶಕ ಅಚ್ಚಿಯಂಡ ಹರೀಶ್ ಕಾವೇರಪ್ಪ ಉಪಸ್ಥಿತರಿದ್ದರು.

ಟಿಪ್ಪು ವೀರತ್ವ ಸ್ಫೂರ್ತಿ-ಎ.ಕೆ. ಸುಬ್ಬಯ್ಯ

*ಗೋಣಿಕೊಪ್ಪಲು: ಆಡಳಿತದಲ್ಲಿ ದೂರದೃಷ್ಟಿ ಹೊಂದಿದ್ದ ಟಿಪ್ಪು ಸುಲ್ತಾನ್ ಒಬ್ಬ ಪ್ರಚಂಡ ದೇಶಭಕ್ತ ಮಾತ್ರವಲ್ಲದೇ ಅಪ್ರತಿಮ ವೀರನಾಗಿದ್ದ. ಜೊತೆಗೆ ಜೀವಪ್ರೇಮಿಯೂ, ಮುತ್ಸದಿಯೂ ಆಗಿದ್ದ ಟಿಪ್ಪುವಿನ ವೀರತ್ವ ವೀರ ಕೊಡವರಿಗೆ ಸ್ಫೂರ್ತಿಯಾಗಬೇಕು ಎಂದು ಹಿರಿಯ ಮುಖಂಡ ಎ.ಕೆ. ಸುಬ್ಬಯ್ಯ ಹೇಳಿದ್ದಾರೆ. ಬ್ರಿಟೀಷರಿಗೆ ಸದಾ ಸಿಂಹಸ್ವಪ್ನರಾಗಿದ್ದ ಟಿಪ್ಪುವನ್ನೆ ಮಣಿಸಿದ ಕೊಡವರು ಹೆಮ್ಮೆ ಪಟ್ಟುಕೊಳ್ಳಬೇಕು. ಎದುರಾಳಿಯ ಪರಾಕ್ರಮಕ್ಕೆ ತಲೆದೂಗಿ ಗೌರವಿಸುವದೇ ವೀರರ ಲಕ್ಷಣವಾಗಿದೆ. ಅದು ಬಿಟ್ಟು ಟಿಪ್ಪು ಕೊಡವರನ್ನು ಕೊಂದ ಎಂದು ಸಂಘ ಪರಿವಾರ ಹಬ್ಬಿಸುವ ಸುಳ್ಳಿಗೆ ಮರುಳಾಗಿ ಕುಣಿಯುವದು ವೀರ ಕೊಡವರ ಲಕ್ಷಣವಲ್ಲ ಎಂದು ತಿಳಿಸಿದ್ದಾರೆ.

ಕೊಡಗಿನ ಕಾಂಗ್ರೆಸ್ಸಿಗರು ಟಿಪ್ಪು ಜಯಂತಿ ವಿಷಯದಲ್ಲಿ ಕಣಕ್ಕಿಳಿಯಬೇಕು. ಸಂಘ ಪರಿವಾರ ಮತ್ತು ಕೋಮುವಾದಿಗಳು ಕಾನೂನು ಬಾಹಿರ ಪ್ರತಿಭಟನೆ ನಡೆಸಿದರೆ ಅದನ್ನು ಕಾಂಗ್ರೆಸ್ ಪ್ರತಿರೋಧಿಸಬೇಕು. ಆದರೆ ಕೊಡಗು ಕಾಂಗ್ರೆಸ್‍ನ ಮುಂದಾಳುಗಳು ಈ ಕುರಿತು ಇನ್ನೂ ಮೌನ ವಹಿಸಿದಂತಿದೆ. ಇದನ್ನು ರಾಜ್ಯದ ಕಾಂಗ್ರೆಸ್ ವರಿಷ್ಠರು ಗಮನಿಸಬೇಕು. ಅಂತವರನ್ನು ಗುರುತಿಸಿ ಅವರಿಗೆ ಪಕ್ಷದಲ್ಲಿ ಸ್ಥಾನಮಾನ ಪಡೆಯಲು ಅನರ್ಹರೆಂದು ಘೋಷಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಮತ್ತು ಕೆ.ಪಿ.ಸಿ.ಸಿ.ಯನ್ನು ಎ.ಕೆ. ಸುಬ್ಬಯ್ಯ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ನಿಲುವಿಗೆ ಆಗ್ರಹ

ವೀರಾಜಪೇಟೆ: ಕಾಂಗ್ರೆಸ್ ಸರ್ಕಾರÀ ಜಾತಿ-ಧರ್ಮಗಳ ಬಗ್ಗೆ ಒಡೆದು ಆಳುವ ನೀತಿಯನ್ನು ಅನುಸರಿಸಿ ಟಿಪ್ಪು ಜಯಂತಿಯನ್ನು ಆಚರಿಸಲು ಸಿದ್ಧತೆ ನಡೆಸಿರುವದಕ್ಕೆ ವೀರಾಜಪೇಟೆ ಹಿಂದೂ ಅಗ್ನಿದಳ ಖಂಡಿಸುತ್ತದೆ ಎಂದು ಅಗ್ನಿದಳದ ಪ್ರಧಾನ ಸಂಚಾಲಕ ದಿನೇಶ್ ನಾಯರ್ ಹೇಳಿದರು.

ಕೊಡಗಿಗೆ ಮಾರಕವಾಗಿರುವ ಟಿಪ್ಪು ಜಯಂತಿಯ ಬಗ್ಗೆ ತಳೆದಿರುವ ನಿಲುವನ್ನು ಜನತೆಗೆ ಕಾಂಗ್ರೆಸ್ಸಿಗರು ತಿಳಿಸಬೇಕು ಎಂದರು. ಅಗ್ನಿ ದಳದ ಕಾನೂನು ಸಲಹೆಗಾರ ಟಿ.ಪಿ. ಕೃಷ್ಣ, ಸಹ ಸಂಚಾಲಕ ಜನಾರ್ಧನ್, ಸದಸ್ಯರಾದ ಕೆ.ಬಿ. ಹರ್ಷವರ್ಧನ್, ಪ್ರದೀಪ್ ರೈ ಉಪಸ್ಥಿತರಿದ್ದರು.ಸಹಕಾರ ನೀಡಲು ಡಿವೈಎಸ್‍ಪಿ ಮನವಿ

ಸೋಮವಾರಪೇಟೆ: ರಾಜ್ಯ ಸರ್ಕಾರದ ನಿರ್ದೇಶನದಂತೆ ತಾ. 10 ರಂದು ಟಿಪ್ಪು ಜಯಂತಿ ಆಚರಿಸಲು ಎಲ್ಲರೂ ಸಹಕಾರ ನೀಡಬೇಕೆಂದು ಡಿವೈಎಸ್‍ಪಿ ಸಂಪತ್ ಕುಮಾರ್ ಮಾಡಿದ ಮನವಿಗೆ, ಟಿಪ್ಪು ಜಯಂತಿ ಆಚರಣೆಗೆ ನಮ್ಮ ವಿರೋಧವಿದೆ ಎಂದು ಸಭೆಯಲ್ಲಿದ್ದ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಡಿವೈಎಸ್‍ಪಿ ಸಂಪತ್ ಕುಮಾರ್, ಶಾಂತಿಯುತವಾಗಿ ಟಿಪ್ಪು ಜಯಂತಿಯನ್ನು ಆಚರಿಸಲು ಎಲ್ಲರೂ ಸಹಕಾರ ನೀಡಬೇಕು. ಕಾನೂನು ಭಂಗವಾದರೆ ಇಲಾಖೆಯಿಂದ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.

ಟಿಪ್ಪು ಜಯಂತಿ ಆಚರಣೆಗೆ ನಮ್ಮ ವಿರೋಧವಿದೆ. ಶಾಂತಿಯುತ ಪ್ರತಿಭಟನೆಗೆ ನೀವುಗಳೂ ಅವಕಾಶ ನೀಡಿ ಎಂದು ವಿರೋಧಿ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಟಿ.ಕೆ. ರಮೇಶ್ ಮನವಿ ಮಾಡಿದರು. ಅಂದು 144 ಸೆಕ್ಷನ್ ಜಾರಿಯಲ್ಲಿರುವದರಿಂದ ಪ್ರತಿಭಟನೆಗೆ ಅವಕಾಶವಿಲ್ಲ. ಕಾನೂನು ಮೀರಿದರೆ ಕ್ರಮ ಕೈಗೊಳ್ಳಲಾಗುವದು ಎಂದರು.

144 ಸೆಕ್ಷನ್ ಇದ್ದ ಮೇಲೆ ಕಾರ್ಯಕ್ರಮ ಹೇಗೆ ಮಾಡುತ್ತೀರಿ? ಎಂದು ಮಹೇಶ್, ಸುರೇಶ್, ಸಂತೋಷ್‍ಕುಮಾರ್ ಪ್ರಶ್ನಿಸಿದರು. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಅನ್ವಯವಾಗುವಂತೆ ಸೆಕ್ಷನ್‍ನಲ್ಲಿ ಸಡಿಲಿಕೆ ಮಾಡಲಾಗುವದು ಎಂದು ಅಧಿಕಾರಿ ತಿಳಿಸಿದರು.

ಟಿಪ್ಪು ಓರ್ವ ಮತಾಂಧ, ದೌರ್ಜನ್ಯ ಎಸಗಿದ ಕಾರಣ ವಿರೋಧ ಮಾಡುತ್ತಿದ್ದೇವೆಯೇ ಹೊರತು ಆತನೊಬ್ಬ ಮುಸ್ಲಿಂ ಎಂಬ ಕಾರಣಕ್ಕೆ ವಿರೋಧಿಸುತ್ತಿಲ್ಲ. ಜಯಂತಿ ಮಾಡಬೇಕಿದ್ದರೆ ಸಂತ ಶಿಶುನಾಳ ಷರೀಫ ಅಥವಾ ಅಬ್ದುಲ್ ಕಲಾಂ ಜಯಂತಿ ಜಾರಿಗೆ ತರಲಿ. ನಾವುಗಳೇ ಮುಂದೆ ನಿಂತು ಮಾಡುತ್ತೇವೆ ಎಂದು ಮಸಗೋಡು ಸುರೇಶ್, ಮಹೇಶ್, ಉಮೇಶ್, ಸಂತೋಷ್ ಸೇರಿದಂತೆ ಇತರರು ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ದೀಪಕ್, ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಣ್ಣ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಪ.ಪಂ. ನಾಮನಿರ್ದೇಶನ ಸದಸ್ಯ ಇಂದ್ರೇಶ್, ವಿವಿಧ ಸಂಘಟನೆಗಳ ಪ್ರಮುಖರಾದ ಹರಗ ಉದಯ, ದರ್ಶನ್, ಹೆಚ್.ಎ. ನಾಗರಾಜ್, ಹೊನ್ನಪ್ಪ, ಹಸನಬ್ಬ, ಉಮ್ಮರ್, ಮಂಜುನಾಥ್, ಚರ್ಚ್‍ನ ಧರ್ಮಗುರು ಅಲೆಕ್ಸಾಂಡರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಸ್ವಾಭಿಮಾನಿ ಮಹಿಳಾ ಸಂಘಟನೆ ವಿರೋಧ

ಮಡಿಕೇರಿ: ಅಲ್ಪಸಂಖ್ಯಾತರ ಓಲೈಕೆಯ ದೃಷ್ಟಿಯಿಂದ ಟಿಪ್ಪು ಜಯಂತಿಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಕಾವೇರಿ ಮಾತಾ ಪ್ರಜ್ಞಾವಂತ ಸ್ವಾಭಿಮಾನಿ ಮಹಿಳಾ ಸಂಘಟನೆ, ಜಿಲ್ಲೆಯ ಜನರ ಭಾವನೆಗೆ ವಿರುದ್ಧವಾಗಿ ಜಯಂತಿ ಆಚರಿಸಬಾರದೆಂದು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರಾದ ಕಾಂತಿ ಸತೀಶ್, ಇತಿಹಾಸದ ಪÀÅಟಗಳಲ್ಲಿ ಟಿಪ್ಪು ಸುಲ್ತಾನ್ ನಡೆಸಿರುವ ದುಷ್ಕøತ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೂ ರಾಜ್ಯ ಸರ್ಕಾರ ಮತ ಬ್ಯಾಂಕ್‍ಗಾಗಿ ಟಿಪ್ಪು ಜಯಂತಿ ಆ?