ಮಡಿಕೇರಿ, ನ. 7: ಜಿಲ್ಲೆಯ ಹಲವು ದೇವಾಲಯಗಳಿಗೆ ರಾಜ್ಯ ಮುಜರಾಜಿ ಇಲಾಖೆ ಅನುದಾನ ಬಿಡುಗಡೆಗೊಳಿಸಿದೆ.ಮಡಿಕೇರಿಯ ಮಂಗಳಾದೇವಿ ನಗರದ ಶ್ರೀ ರಾಜರಾಜೇಶ್ವರಿ ದೇವಾಲಯಕ್ಕೆ ರೂ. 5 ಲಕ್ಷ, ಬಾಳೆಲೆ ದೇವನೂರಿನ ಶ್ರೀ ನಾರಮುನೇಶ್ವರ ದೇವಾಲಯಕ್ಕೆ ರೂ. 4 ಲಕ್ಷ, ದೇವಣಗೇರಿ ಶ್ರೀ ಈಶ್ವರಿ ದೇವಸ್ಥಾನಕ್ಕೆ ರೂ. 3 ಲಕ್ಷ, ಹೆಗ್ಗಳದ ಅಯ್ಯಪ್ಪ ಶ್ರೀ ಭಗವತಿ ದೇವಾಲಯಕ್ಕೆ ರೂ. 3 ಲಕ್ಷ, ಪೊನ್ನಂಪೇಟೆ ಶ್ರೀ ಮುತ್ತಪ್ಪ ದೇವಾಲಯಕ್ಕೆ ರೂ. 3 ಲಕ್ಷ, ಪೊನ್ನಂಪೇಟೆ ಹಳ್ಳಿಗಟ್ಟುವಿನ ಶ್ರೀ ಭದ್ರಕಾಳಿ ದೇವಸ್ಥಾನಕ್ಕೆ ರೂ. 3 ಲಕ್ಷ, ತೂಚಮಕೇರಿಯ ಶ್ರೀ ಮಹಾದೇವರ ದೇವಾಲಯಕ್ಕೆ ರೂ. 3 ಲಕ್ಷ, ಬೇಟೋಳಿಯ ಶ್ರೀ ಮಹಾದೇವರ ದೇವಾಲಯಕ್ಕೆ ರೂ. 3 ಲಕ್ಷ, ವಿ. ಬಾಡಗದ ಪೊದಕೇರಿ ಮಹಾದೇವರ ದೇವಾಲಯಕ್ಕೆ ರೂ. 3 ಲಕ್ಷ, ನಾಪೋಕ್ಲುವಿನ ಶ್ರೀ ಭಗವತಿ ದೇವಾಲಯಕ್ಕೆ ರೂ. 3 ಲಕ್ಷ, ಬಿಳುಗುಂದ ನಲ್ವತ್ತೊಕ್ಲು ಈಶ್ವರ ದೇವಾಲಯಕ್ಕೆ ರೂ. 3 ಲಕ್ಷ, ವೀರಾಜಪೇಟೆ ಮಲೆತಿರಿಕೆ ಬೆಟ್ಟದ ಶ್ರೀ ಮಲೆಮಹದೇಶ್ವರ ದೇವಾಲಯಕ್ಕೆ ರೂ. 3 ಲಕ್ಷ, ಸೋಮವಾರಪೇಟೆ ಬೆಸೂರು ಶ್ರೀ ಬಸವೇಶ್ವರ ದೇವಾಲಯಕ್ಕೆ ರೂ. 5 ಲಕ್ಷ ಹಾಗೂ ಅಮ್ಮತ್ತಿ ಕಾವಾಡಿಯ ಶ್ರೀ ಭಗವತಿ ದೇವಾಲಯಕ್ಕೆ ರೂ. 5 ಲಕ್ಷ ಅನುದಾನವನ್ನು ಬಿಡುಗಡೆ ಗೊಳಿಸಿ ಮುಜರಾಯಿ ಇಲಾಖೆಯ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಅವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಬೋಪಣ್ಣ ತಿಳಿಸಿದ್ದಾರೆ.