ವೀರಾಜಪೇಟೆ, ನ. 7: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಮುಕ್ತ ತನಿಖೆ ನಡೆಸಲು ಪ್ರಕರಣದಲ್ಲಿನÀ ಮೊದಲ ಆರೋಪ ಸ್ಥಾನದಲ್ಲಿರುವ ಸಚಿವ ಜಾರ್ಜ್ ಅವರು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಜಾತ್ಯತೀತ ಜನತಾ ದಳ ಪಕ್ಷದಿಂದ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ಇಂದು ಬೆಳಿಗ್ಗೆ ಮುಕ್ತಾಯಗೊಂಡಿತು.

ನಿನ್ನೆ ದಿನ ಬೆಳಿಗ್ಗೆ 7 ಗಂಟೆಗೆ ಪಕ್ಷದ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರ ನೇತೃತ್ವದಲ್ಲಿ ಆರಂಭಿಸಿದ ಸತ್ಯಾಗ್ರಹ ಇಂದಿನ ಬೆಳಗಿನವರೆಗೂ ಮುಂದುವರೆದು ಬೆಳಿಗ್ಗೆ 7ಗಂಟೆಗೆ ಪ್ರಶಸ್ತಿ ವಿಜೇತರಾದ ನಿವೃತ್ತ ಯೋಧ ಹಾಗೂ ಶಿಕ್ಷP ಮುಂಡ್ಯೋಳಂಡ ಸನ್ನಿ ಬೋಪಯ್ಯ ಸಂಕೇತ್ ಪೂವಯ್ಯ ಅವರಿಗೆ ಎಳನೀರು ಕುಡಿಸಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.

ನಿನ್ನೆ ದಿನ ರಾತ್ರಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಸಂಕೇತ್ ಪೂವಯ್ಯ ಅವರನ್ನು ಸಂಪರ್ಕಿಸಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಅವರ ಕುಟುಂಬಕ್ಕೆ ನ್ಯಾಯ ಸಿಗುವ ತನಕ ಪಕ್ಷದ ಕಾರ್ಯಕರ್ತರು ಉಗ್ರ ಹೋರಾಟ ನಡೆಸುವಂತಾಗ ಬೇಕು. ಕೊಡಗಿನ ಜಲ್ವಂತ ಸಮಸ್ಯೆಗಳ ಕುರಿತು ಶಾಶ್ವತ ಪರಿಹಾರ ದೊರೆಯುವ ತನಕ ಹೋರಾಟ ನಡೆಸಿ: ಪಕ್ಷದ ಕಾರ್ಯಕರ್ತರ ಹೋರಾಟಕ್ಕೆ ಪಕ್ಷದ ವರಿಷ್ಠ ಮಂಡಳಿಯ ಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.

ಉಪವಾಸ ಸತ್ಯಾಗ್ರಹದಲ್ಲಿ ಎಸ್.ಎಚ್. ಮತೀನ್, ಎಚ್.ಜಿ. ಗೋಪಾಲ್, ಅಮ್ಮಂಡ ವಿವೇಕ್, ಪಿ.ವಿ. ರೆನ್ನಿ, ಎಂ.ಮಂದಣ್ಣ, ಅಶ್ರಫ್ ಆಲಿ, ಪಿ.ಗಣೇಶ್

ಚಿಲ್ಲವಂಡ ಗಣಪತಿ, ಪಿ.ಎ. ಮಂಜುನಾಥ್, ಎಚ್.ಎಂ. ಶಂಭು, ಎಂ.ಎಸ್.ಧನುಂಜಯ, ಪ್ರವೀಣ್, ಕೆ.ಶಂಕರ್, ಬಾಳೆಕುಟ್ಟೀರ ದಿನಿ, ಇಟ್ಟೀರ ಸಂಪತ್, ಜೆ.ಸಿ.ಸುನಿಲ್ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.