ಗೋಣಿಕೊಪ್ಪಲು ವರದಿ, ನ. 8: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಆವರಣದಲ್ಲಿ 2 ದಿನಗಳ ಕಾಲ ನಡೆಯುವ ಶಿವಮೊಗ್ಗ ವಿಶ್ವ ವಿದ್ಯಾಲಯ ಮಟ್ಟದ 5 ನೇ ವರ್ಷದ ಸಾಂಸ್ಕøತಿಕ ಪೈಪೋಟಿ ಕಾರ್ಯಕ್ರಮ ವಾದ ಯುವ ಸ್ಪಂದನ ಕಾರ್ಯಕ್ರಮ ವನ್ನು ಕೊಡಗು ಅರಣ್ಯ ವೃತ್ತ ಮುಖ್ಯಸ್ಥ ಲಿಂಗರಾಜು ಡೋಲು ಬಡಿಯುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿ ರುವದು ಭವಿಷ್ಯದಲ್ಲಿ ತೊಡಕಾಗುವ ಸಾಧ್ಯತೆ ಹೆಚ್ಚಿದೆ. ಖಾಸಗಿಯಾಗಿ ಹೆಚ್ಚು ಕೆಲಸ ನಿರ್ವಹಣೆ ಹಾಗೂ ಪಾರದರ್ಶ ಕತೆಗೆ ಹೆಚ್ಚು ಆದ್ಯತೆ ನೀಡುವ ಉದ್ದೇಶ ದಿಂದ ಖಾಸಗಿಯಾಗಿ ಕೆಲಸ ನಿರ್ವಹಿಸಿ ಕೊಳ್ಳುವ ಚಿಂತನೆಗಳು ಮುಂದಿನ ದಿನಗಳಲ್ಲಿ ಅನುಷ್ಠಾನಗೊಳ್ಳುವ ಸಾಧ್ಯತೆ ಹೆಚ್ಚಿದೆ. ವಿದ್ಯಾರ್ಥಿಗಳು ತಮ್ಮದೇ ಆದ ಚಿಂತನೆ, ಹಾಗೂ ಜ್ಞಾನದ ಸ್ವತ್ತಿಗೆ ಹೆಚ್ಚಿನ ಆಧ್ಯತೆ ಕಲ್ಪಿಸಿಕೊಳ್ಳಬೇಕು. ಸರ್ಕಾರಿ ಕೆಲಸದ ನಿರೀಕ್ಷೆ ಬಿಟ್ಟು ಖಾಸಗಿಯಾಗಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು. ಐಎಎಸ್, ಐಪಿಎಸ್ ಹುದ್ದೆ ಸಿಗಲಿಲ್ಲ ಎಂಬ ಕೊರಗಿನಿಂದ ಹೊರ ಬಂದು ಸ್ವ ಉದ್ಯೋಗ, ವಿಶೇಷ ಚಿಂತನೆ ಮೂಲಕ ಪರಿಸರಕ್ಕೆ ಪೂರಕ ಅಭಿವೃದ್ಧಿಗೆ ಮುಂದಾಗಬೇಕೆಂದರು.
ಪರಿಸರ ಶಾಸ್ತ್ರೀಯವಾಗಿ ಭೂಮಂಡಲಕ್ಕೆ ತಮ್ಮದೇ ಆದ ಕಾಣಿಕೆ ನೀಡಲು ಮುಂದಾಗಿರುವ ಅರಣ್ಯಶಾಸ್ತ್ರ ವಿದ್ಯಾರ್ಥಿಗಳು ಪರಿಸರ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ಸ್ನಾತಕೋತರ ವಿವಿ ಡೀನ್ ಡಾ. ಟಿ. ಎಸ್. ವಾಗೀಶ್ ಮಾತನಾಡಿ, ಸಾಂಸ್ಕøತಿಕ ಪೈಪೋಟಿಗಳನ್ನು ಪ್ರದರ್ಶನ ವೇದಿಕೆ ಎಂದು ಅರ್ಥೈಸಿಕೊಳ್ಳದೆ, ಭಾವೈಕ್ಯತೆಯ ಸಂಕೇತ ಎಂಬ ಉದ್ದೇಶದಿಂದ ಸಂಸ್ಕøತಿಯ ಪೋಷಣೆ ನಡೆಯಬೇಕಿದೆ. ಯುವ ಸಮೂಹ ಕಲೆಯ ಸಂರಕ್ಷಣೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದರು.
ಈ ಸಂದರ್ಭ ಸ್ಮರಣ ಸಂಚಿಕೆಯನ್ನು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋಧ ಸ್ವರೂಪನಂದಾಜಿ ಬಿಡುಗಡೆಗೊಳಿಸಿದರು.
ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡೀರ ಕುಶಾಲಪ್ಪ ಕೊಡಗಿನ ಸಾಂಪ್ರದಾಯಿಕ ಕುಪ್ಯಚೇಲೆ ತೊಟ್ಟು ಸಾಂಸ್ಕøತಿಕ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು.
ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡೀರ ಕುಶಾಲಪ್ಪ ಸ್ವಾಗತಿಸಿದರು. ಡಾ. ದೇವಗಿರಿ ನಿರೂಪಿಸಿದರು. ಡಾ. ರಾಮಕೃಷ್ಣ ಹೆಗಡೆ ವಂದಿಸಿದರು.
ಈ ಸಂದರ್ಭ ಶಿವಮೊಗ್ಗ ವಿವಿ ವಿದ್ಯಾರ್ಥಿ ಕಲ್ಯಾಣ ಮುಖ್ಯಸ್ಥ ಡಾ. ವೈ. ವಿಶ್ವನಾಥಶೆಟ್ಟಿ, ವಿಸ್ತರಣಾ ನಿರ್ದೇಶಕ ಡಾ. ಟಿ. ಹೆಚ್. ಗೌಡ, ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಎಂ. ಹನುಮಂತಪ್ಪ, ಹಿರಿಯೂರು ವಿದ್ಯಾಲಯ ಮುಖ್ಯಸ್ಥ ಡಾ. ಆರ್. ಬಸವರಾಜಪ್ಪ, ಹಣಕಾಸು ನಿಯಂತ್ರಣಾಧಿಕಾರಿ ಕೆ. ಗಣೇಶಪ್ಪ, ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾ ವಿದ್ಯಾಲಯ ಮುಖಸ್ಥ ಡಾ. ಕಾಮತ್, ಕತ್ತಲಗೆರೆ ಕೃಷಿ ಡಿಪ್ಲೋಮಾ ಮಹಾ ವಿದ್ಯಾಲಯ ಮುಖಸ್ಥ ಡಾ. ಆನಂದಕುಮಾರ್ ಉಪಸ್ಥಿತರಿದ್ದರು.
ಬೆಳಿಗ್ಗೆ ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ವಿದ್ಯಾರ್ಥಿಗಳು ತಮ್ಮ ಕಲೆ ಪ್ರದರ್ಶನದ ಮೂಲಕ ಮೆರವಣಿಗೆ ನಡೆಸಿದರು. ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದರು. ಪೊನ್ನಮಪೇಟೆ ರಾಮಕೃಷ್ಣ ಶಾರದಾಶ್ರಮ ವಿಶ್ರಾಂತ ಸ್ವಾಮೀಜಿ ಜಗದಾತ್ಮನಂದಾಜಿ ಡೋಲು ಬಡಿದು ಚಾಲನೆ ನೀಡಿದರು.
ಶಿವಮೊಗ್ಗ ವಿಶ್ವ ವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಾದ ಶಿವಮೊಗ್ಗ, ಮೂಡಿಗೆರೆ, ಚಿಕ್ಕಮಗಳೂರು, ಹಿರಿಯೂರು, ಕತ್ತಲೆಗೆರೆ, ಬ್ರಹ್ಮಾವರ ಹಾಗೂ ಪೊನ್ನಂಪೇಟೆ ಮಹಾವಿದ್ಯಾಲಯದ ತಂಡಗಳು ವಿಶೇಷ ಉಡುಪಿನಲ್ಲಿ ಸಾಂಸ್ಕøತಿಕ ಉಡುಪಿನಲ್ಲಿ ಪಾಲ್ಗೊಂಡರು.
ಸಾಂಸ್ಕøತಿಕ ಪೈಪೊಟಿ : 2 ದಿನ ನಡೆಯುವ ಸ್ಪರ್ಧೆಯಲ್ಲಿ 20 ಬಗೆಯ ಕಲಾ ಪೈಪೋಟಿ ನಡೆಯಲಿದೆ. ಮಣ್ಣಿನ ಕಲಾಕೃತಿ, ದೇಶಭಕ್ತಿ ಗೀತೆ, ಸಮೂಹ ಗಾಯನ, ಮೂಕಾಭಿನಯ, ಏಕಾಂಕ ನಾಟಕ, ವ್ಯಂಗ್ಯಚಿತ್ರ ಬಿಡಿಸುವದು, ಚಿತ್ರ ರಚನೆ, ಏಕಪಾತ್ರಾಭಿನಯ, ರಂಗೋಲಿ, ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಆಶುಭಾಷಣ, ಬಿತ್ತಿಪತ್ರ ಬಿಡಿಸುವದು, ಭಾಷಣ, ಲಘು ಪ್ರಹಸನ, ಜಾನಪದ ಸಮೂಹ ನೃತ್ಯ ಪೈಪೋಟಿ ಕಲಾ ಪ್ರದರ್ಶನಕ್ಕೆ ವೇದಿಕೆಯಾಗಿದೆ.