ಮಡಿಕೇರಿ, ನ. 8: ಜಿ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಆರೋಗ್ಯ ಕೇಂದ್ರ ಸಮುದಾಯ ವೈದ್ಯಶಾಸ್ತ್ರ ವಿಭಾಗ, ವೈದ್ಯಕೀಯ ವಿಭಾಗಗಳ ಸಂಸ್ಥೆ, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರ, ನಗರಸಭೆ, ಅಶ್ವಿನಿ ಆಸ್ಪತ್ರೆ, ಮುಳಿಯ ಜ್ಯುವೆಲ್ಲರ್ಸ್, ರೋಟರಿ ಮಿಸ್ಟಿಹಿಲ್ಸ್, ಲಯನ್ಸ್ ಸಂಸ್ಥೆ, ವಿನಾಯಕ ಯುವ ಮಿತ್ರ ಮಂಡಳಿ, ಸೈಯ್ಯದ್ ಫಯಾಜ್ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಇಲ್ಲಿನ ಅಶ್ವಿನಿ ಆಸ್ಪತ್ರೆಯಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಹಲವಾರು ಮಂದಿ ರಕ್ತದಾನ ಮಾಡಿದರು.