ಗೋಣಿಕೊಪ್ಪ ವರದಿ, ನ. 8: ಪೊನ್ನಂಪೇಟೆ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಪ್ರೌಢಶಾಲಾ ಮಟ್ಟದ ಬಾಲಕ, ಬಾಲಕಿಯರ ಕೋದಂಡ ಎ. ಪೂವಯ್ಯ ಮೆಮೋರಿಯಲ್ ಹಾಕಿ ಟೂರ್ನಿಯ ಬಾಲಕಿಯರ ಬಿ, ಡಿವಿಜûನ್ನಲ್ಲಿ ಭಾರತೀಯ ವಿದ್ಯಾಭವನ್ ಹಾಗೂ ಗೋಣಿಕೊಪ್ಪ ಪ್ರೌಢÀಶಾಲಾ ತಂಡ ಫೈನಲ್ಗೆ ಲಗ್ಗೆ ಇಟ್ಟಿವೆ.
ಗೋಣಿಕೊಪ್ಪ ಪ್ರೌಢಶಾಲಾ ತಂಡವು ರೂಟ್ಸ್ ವಿರುದ್ಧ 3-0 ಗೋಲುಗಳಿಂದ ಜಯ ಸಾಧಿಸಿ ಫೈನಲ್ಗೆ ಪ್ರವೇಶ ಪಡೆಯಿತು. ಗೋಣಿಕೊಪ್ಪ ಪರ 16ನೇ (ನಿ) ಭೂಮಿಕಾ, 20 ಹಾಗೂ 21ನೇ (ನಿ) ನಯನ 2 ಗೋಲು ಹೊಡೆದರು.
ಭಾರತೀಯ ವಿದ್ಯಾಭವನ್ ತಂಡವು ಪ್ರತಿಭಾ ತಂಡವನ್ನು 3-0 ಗೋಲುಗಳಿಂದ ಸೋಲಿಸಿತು. ವಿದ್ಯಾ ಭವನ್ ಪರ 5ನೇ (ನಿ) ಆಧ್ವಿಕಾ, 10 ಹಾಗೂ 24ನೇ (ನಿ) ರಿಶಿಕಾ 2 ಗೋಲು ಬಾರಿಸಿದರು.
ಗೋಣಿಕೊಪ್ಪ ಪ್ರೌಢÀಶಾಲಾ ತಂಡವು ಸಂತ ಆಂಥೋನಿ ತಂಡವನ್ನು 1-0 ಗೋಲುಗಳಿಂದ ಸೋಲಿಸಿತು. 25 ನೇ ನಿಮಿಷದಲ್ಲಿ ಭೂಮಿಕಾ ಏಕೈಕ ಗೋಲು ಹೊಡೆದರು.
ಬಾಲಕರಲ್ಲಿ ಗೋಣಿಕೊಪ್ಪ ಲಯನ್ಸ್ ತಂಡವು ಅಮ್ಮತ್ತಿ ಪ್ರೌಢÀಶಾಲಾ ತಂಡವನ್ನು 4-1 ಗೋಲುಗಳಿಂದ ಮಣಿಸಿತು. ಲಯನ್ಸ್ ಪರ 13ನೇ (ನಿ) ಜಗತ್, 28, 29ನೇ (ನಿ) ಚರಣ್ 2 ಗೋಲು, 15ನೇ (ನಿ) ನಾಣಯ್ಯ, ಅಮ್ಮತ್ತಿ ಪರ 12ನೇ (ನಿ) ಮಿಲನ್ ಗೋಲು ಹೊಡೆದರು.
ಕಾಲ್ಸ್ ತಂಡವು ಮಡಿಕೇರಿ ಭಾರತೀಯ ವಿದ್ಯಾ ಭವನ್ ವಿರುದ್ಧ 5-0 ಗೋಲುಗಳಿಂದ ಜಯ ಸಾಧಿಸಿತು. ಕಾಲ್ಸ್ ಪರವಾಗಿ 11, 18ನೇ (ನಿ) ಮೌರ್ಯ, 20, 29ನೇ (ನಿ) ಪೂವಣ್ಣ 2 ಗೋಲು, 22ನೇ (ನಿ) ಶ್ರವಣ್ 1 ಗೋಲು ಹೊಡೆದರು.
ಲಯನ್ಸ್ ತಂಡವು ಅಂಕುರ್ ತಂಡವನ್ನು 5-0 ಗೋಲುಗಳಿಂದ ಮಣಿಸಿತು. ಲಯನ್ಸ್ ಪರ 2ನೇ (ನಿ) ಪೊನ್ನಣ್ಣ, 4ನೇ (ನಿ) ನಾಣಯ್ಯ, 8ನೇ (ನಿ) ಚಿಣ್ಣಪ್ಪ 24, 27ನೇ (ನಿ) ಪೂಣಚ್ಚ 2 ಗೋಲು ಹೊಡೆದರು.
ಅಮ್ಮತ್ತಿ ತಂಡ ಹಾತೂರು ವಿರುದ್ಧ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಅಮ್ಮತ್ತಿ ಪರ 9ನೇ (ನಿ) ಸಚಿನ್, 18ನೇ (ನಿ) ಮಿಲನ್ 27ನೇ (ನಿ) ಅಯ್ಯಪ್ಪ ಗೋಲು ಬಾರಿಸಿದರು.
ಶ್ರೀರಾಮ ಟ್ರಸ್ಟ್ ತಂಡವು ರೋಟರಿ ವಿರುದ್ಧ 3-0 ಗೋಲುಗಳಿಂದ ಗೆಲುವು ಪಡೆಯಿತು. ವಿಜೇತ ತಂಡದ ಪರ 6ನೇ (ನಿ) ಉತ್ತಪ್ಪ, 7, 22ನೇ (ನಿ) ಸೂರಜ್ 2 ಗೋಲು ಹೊಡೆದರು.
ಕಾಲ್ಸ್ ತಂಡವು ಸೆಂಟ್ ಆಂಥೋನಿ ತಂಡವನ್ನು 3-0 ಗೋಲುಗಳಿಂದ ಸೋಲಿಸಿತು. ಕಾಲ್ಸ್ ಪರ 8ನೇ (ನಿ) ಮೌರ್ಯ, 10ನೇ (ನಿ) ಪೂವಣ್ಣ, 11ನೇ (ನಿ) ತಶ್ವಿನ್ ಗೋಲು ಬಾರಿಸಿದರು.
ಮಡಿಕೇರಿ ಭಾರತೀಯ ವಿದ್ಯಾ ಭವನ್ ತಂಡ ರೂಟ್ಸ್ ವಿರುದ್ದ 4-0 ಗೋಲುಗಳಿಂದ ಗೆಲುವು ಪಡೆಯಿತು. ವಿಜೇತ ತಂಡದ ಪರ 5, 7ನೇ ನಿಮಿಷಗಳಲ್ಲಿ ಗೌರವ್ 2 ಗೋಲು, 8ರಲ್ಲಿ ಆರ್ಯನ್, 20ರಲ್ಲಿ ನಿತಿನ್ ಗೋಲು ಹೊಡೆದರು.
ಗುರುವಾರ ನಡೆಯುವ ಬಾಲಕರ ಎ. ಡಿವಿಜನ್ ಫೈನಲ್ನಲ್ಲಿ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಹಾಗೂ ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡ ಪೈಪೋಟಿ ನಡೆಸಲಿವೆ. ಬಿ. ಡಿವಿಜನ್ನ ಸೆಮಿಯಲ್ಲಿ ಕಾಲ್ಸ್, ಲಯನ್ಸ್, ಪೊನ್ನಂಪೇಟೆ ಜಿಪಿಯು ಹಾಗೂ ಶ್ರೀರಾಮಟ್ರಸ್ಟ್ ಪೈಪೋಟಿ ನಡೆಸಲಿವೆ.
ಬಾಲಕಿಯರ ಎ. ಡಿವಿಜನ್ನಲ್ಲಿ ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್, ಪೊನ್ನಂಪೇಟೆ ಸ್ಪೋಟ್ರ್ಸ್ ಹಾಗೂ ಮಡಿಕೇರಿ ಸಾಯಿ ತಂಡ ರೌಂಡ್ ರಾಬಿನ್ ಮೂಲಕ ಫೈನಲ್ಗೆ ಪ್ರವೇಶ ಪಡೆಯಲು ಪೈಪೋಟಿ ನಡೆಸಲಿವೆ. ಬಾಲಕಿಯರ ಬಿ, ಡಿವಿಜನ್ನಲ್ಲಿ ಮಡಿಕೇರಿ ಭಾರತೀಯ ವಿದ್ಯಾಭವನ್ ಹಾಗೂ ಗೋಣಿಕೊಪ್ಪ ಪ್ರೌಢÀಶಾಲಾ ತಂಡ ಫೈನಲ್ನಲ್ಲಿ ಪೈಪೋಟಿ ನಡೆಸಲಿವೆ.
ಅಂಪೈರ್ಗಳಾಗಿ ಪೊನ್ನಣ್ಣ, ದರ್ಶನ್, ಕೀರ್ತಿ, ಕಾಳಪ್ಪ, ಅಯ್ಯಪ್ಪ ಹಾಗೂ ಚೋಯಮಾಡಂಡ ಬಿಪಿನ್ ಕಾರ್ಯನಿರ್ವಹಿಸಿದರು. ಟೂರ್ನಿ ನಿರ್ದೇಶಕರಾಗಿ ಕುಪ್ಪಂಡ ದಿಲನ್, ಟೂರ್ನಿ ಅಂಪೈಯರ್ ಕಮಿಟಿ ವ್ಯವಸ್ಥಾಪಕರಾಗಿ ಬೊಳ್ಳಚಂಡ ನಾಣಯ್ಯ ಕಾರ್ಯನಿರ್ವಹಿಸಿದರು.