ಸೋಮವಾರಪೇಟೆ, ನ. 8: ಪುರಾತನ ಇತಿಹಾಸ ಹೊಂದಿರುವ ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ತಟದಲ್ಲಿರುವ ಶ್ರೀ ಶಾಂತಮಲ್ಲಿ ಕಾರ್ಜುನ ದೇವಾಲಯದ ವಾರ್ಷಿಕೋತ್ಸವ ಮತ್ತು ಬ್ರಹ್ಮ ಕಲಶೋತ್ಸವ ತಾ. 26 ರಿಂದ 29 ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ.ಪಿ. ಚಂಗಪ್ಪ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ತಾ. 26 ರಂದು ದೇವಾಲಯದಲ್ಲಿ ಆಚಾರ್ಯರ ಪೂಜೆ, ಗಣಪತಿ ಹೋಮ, ಉಷಾ ಪೂಜೆ, ಕಾಳು ಮೊಳಕೆ ಪೂಜೆ, ಶುದ್ಧೀ ಕಾರ್ಯ, ನವಗ್ರಹ ಪೂಜೆ, ವಾಸ್ತುಬಲಿ, ವಾಸ್ತು ಹೋಮ, ವಸ್ತು ಕಲಶ, ಅಸ್ತ್ರ ಕಲಶ, ಸಂಜೆ ಪೂಜಾ ಕಾರ್ಯಗಳು ನಡೆಯಲಿದೆ ಎಂದರು.
ತಾ. 27 ರಂದು ಬೆಳಿಗ್ಗೆಯಿಂದ ಉಷಾ ಪೂಜೆ, ಪ್ರಧಾನ ಆಚಾರ್ಯರ ಪೂಜೆ, ಮಹಾಗಣಪತಿ ಹೋಮ, ಮಹಾ ಸುದರ್ಶನ ಹೋಮ, ಸರ್ಪ ಬಲಿ ಪೂಜೆ, ತಾ. 28 ರಂದು ಮಹಾಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ಜೀವ ಕಲಶ, ತತ್ವ ಕಲಶ, ತತ್ವ ಹೋಮ, ಜೀವ ವಹನ, ಸರ್ವ ಐಶ್ವರ್ಯ ಪೂಜೆ, ಸಹಸ್ರನಾಮ ಅರ್ಚನೆ, ದೀಪಾರಾಧನೆ, ತಾ. 29 ರಂದು ಉಷಾ ಪೂಜೆ, ಮಹಾಗಣಪತಿ ಹೋಮ, ಗೋವು ಪೂಜೆ, ಪ್ರಾತಃಕಾಲ 11.30ಕ್ಕೆ ಕಲಶಾಭಿಷೇಕ, ಮಧ್ಯಾಹ್ನ ವಿಶೇಷ ಪೂಜೆ, ಪ್ರಸಾದ ವಿನಿಯೋಗ ಸೇರಿದಂತೆ ಇತರ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ದೇವಾಲಯದಲ್ಲಿ ನಡೆಯ ಲಿರುವ ಹೋಮ ಕಾರ್ಯಗಳಲ್ಲಿ ಭಾಗವಹಿಸುವವರು ಸಮಿತಿಯಲ್ಲಿ ಹೆಸರನ್ನು ನೋಂದಾಯಿಸಿ ಕೊಳ್ಳಬೇಕು. ಅನ್ನದಾನಕ್ಕೆ ಅಕ್ಕಿ, ಧವಸ ಧಾನ್ಯಗಳನ್ನು ನೀಡುವವರು ಎರಡು ದಿನ ಮುಂಚಿತವಾಗಿ ದೇವಾಲಯಕ್ಕೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗೆ ಮೊ: 9739539790ನ್ನು ಸಂಪರ್ಕಿಸಬಹುದು ಎಂದು ಅವರು ಮನವಿ ಮಾಡಿದರು.
ಗೋಷ್ಠಿಯಲ್ಲಿ ದೇವಾಲಯ ಸಮಿತಿಯ ಕಾರ್ಯದರ್ಶಿ ಡಿ.ಬಿ. ವಿಜಯಕುಮಾರ್, ಸಮಿತಿ ಸದಸ್ಯರುಗಳಾದ ಎಸ್.ಆರ್. ಕಾಶಿ ಗೋಪಾಲ್, ಡಿ.ಪಿ. ಮೊಗಪ್ಪ ಅವರುಗಳು ಉಪಸ್ಥಿತರಿದ್ದರು.