ನಾಪೆÇೀಕ್ಲು, ನ.9: ಸುಮಾರು 1.10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸ ಲಾಗುತ್ತಿರುವ ಮಕ್ಕಿ ದೇವಳ ರಸ್ತೆ ಡಾಮರೀಕರಣ ಕಾಮಗಾರಿಗೆ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಚಾಲನೆ ನೀಡಿದರು.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಈಗಾಗಲೆ ಸುಮಾರು 3.50 ಕೋಟಿ ರೂ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯನ್ನು ನಿರ್ಮಿಲಾಗಿದೆ ಎಂದ ಅವರು ಬೇತು ಗ್ರಾಮದ ಮಕ್ಕಿ ಕಡವು ಸೇತುವೆ ಕಾಮಗಾರಿ ಅರ್ಧದಲ್ಲಿದ್ದು ಇದನ್ನು 5 ಲಕ್ಷ ವೆಚ್ಚದಲ್ಲಿ ಪೂರ್ಣ ಗೊಳಿಸಲಾಗುವದು. ನಾಪೆÇೀಕ್ಲು ಫಾರಂ ಬಳಿಯಿಂದ ಮಕ್ಕಿ ಜಂಕ್ಸನ್ ರಸ್ತೆಯನ್ನು 10 ಲಕ್ಷ ರೂ ವೆಚ್ಚದ ವಿಶೇಷ ಪ್ಯಾಕೇಜ್ನಲ್ಲಿ ಕಾಮಗಾರಿ ಯನ್ನು ಕೈಗೊಳ್ಳಲಾಗುವದು ಎಂದರು.
ಮಕ್ಕಿ ದೇವಳಕ್ಕೆ ಸುಮಾರು 16.50 ಲಕ್ಷ ವೆಚ್ಚದ ಊಟದ ಸಭಾಂಗಣದ ಕಾಮಗಾರಿಯನ್ನು ವೀಕ್ಷಿಸಿ ಕೂಡಲೆ ಕಾಮಗಾರಿಯನ್ನು ಪೂರ್ಣ ಗೊಳಿಸುವಂತೆ ಗುತ್ತಿಗೆದಾರನಿಗೆ ಸೂಚಿಸಿದರು. ಈ ಸಂದರ್ಭ ಗ್ರಾ. ಪಂ. ಉಪಾಧ್ಯಕ್ಷ ಕೆ.ಸಾಬ ತಿಮ್ಮಯ್ಯ, ಮಕ್ಕಿ ದೇವಳ ಸಮಿತಿ ಅಧ್ಯಕ್ಷ ಕೆ.ಬೋಪಣ್ಣ, ಗ್ರಾ.ಪಂ. ಸದಸ್ಯ ಯಂ.ಕುಶು ಕುಶಾಲಪ್ಪ, ಸಿ. ರೋಷನ್, ಬಿ.ಗಿರೀಶ್ ಬೋಪಣ್ಣ, ಚೋಕಂಡ ಸಂಜು, ಮತ್ತಿತರರು ಇದ್ದರು.