ಅಕಾಲಿಕ ಮಳೆಯಿಂದ ಜೋಳದ ಬೆಲೆ ಕುಸಿತಕೂಡಿಗೆ, ನ. 9: ಜಿಲ್ಲೆಯಲ್ಲಿಯೇ ಹೆಚ್ಚು ಜೋಳವನ್ನು ಬೆಳೆಯುವ ಕುಶಾಲನಗರ ಹೋಬಳಿ ಮತ್ತು ಶನಿವಾರಸಂತೆ ಹೋಬಳಿ ವ್ಯಾಪ್ತಿಗಳಲ್ಲಿ ಈಗಾಗಲೇ ಜೋಳದ ಬೆಳೆಯು ಕಟಾವಿಗೆ ಬಂದು ಕೆಲವು ರೈತರು ಜೋಳವನ್ನು ಕಟಾವು ಮಾಡಿ ಮಾರಾಟಕ್ಕೆ ಸಿದ್ಧಗೊಳಿಸಿದ್ದಾರೆ.

ಮಳೆಯ ನೆಪವನ್ನು ಹೇಳುತ್ತಾ ಕಳೆದ ಬಾರಿಗಿಂತ ಈ ಸಾಲಿನಲ್ಲಿ ಜೋಳದ ಬೆಲೆ ಭಾರೀ ಕುಸಿತ ಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ.

ತಾಲೂಕಿನಲ್ಲಿ 3590 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಜೋಳವನ್ನು ಬೆಳೆಯಲಾಗಿದೆ. ಜೋಳವನ್ನು ಬಿತ್ತನೆ ಮಾಡುವ ಕೂಡಿಗೆ, ನ. 9: ಜಿಲ್ಲೆಯಲ್ಲಿಯೇ ಹೆಚ್ಚು ಜೋಳವನ್ನು ಬೆಳೆಯುವ ಕುಶಾಲನಗರ ಹೋಬಳಿ ಮತ್ತು ಶನಿವಾರಸಂತೆ ಹೋಬಳಿ ವ್ಯಾಪ್ತಿಗಳಲ್ಲಿ ಈಗಾಗಲೇ ಜೋಳದ ಬೆಳೆಯು ಕಟಾವಿಗೆ ಬಂದು ಕೆಲವು ರೈತರು ಜೋಳವನ್ನು ಕಟಾವು ಮಾಡಿ ಮಾರಾಟಕ್ಕೆ ಸಿದ್ಧಗೊಳಿಸಿದ್ದಾರೆ.

ಮಳೆಯ ನೆಪವನ್ನು ಹೇಳುತ್ತಾ ಕಳೆದ ಬಾರಿಗಿಂತ ಈ ಸಾಲಿನಲ್ಲಿ ಜೋಳದ ಬೆಲೆ ಭಾರೀ ಕುಸಿತ ಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ.

ತಾಲೂಕಿನಲ್ಲಿ 3590 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಜೋಳವನ್ನು ಬೆಳೆಯಲಾಗಿದೆ. ಜೋಳವನ್ನು ಬಿತ್ತನೆ ಮಾಡುವ ಬೆಲೆಯು ಕುಸಿತಗೊಂಡು, ಮಳೆಯು ಬಂದು ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಸೋಮವಾರಪೇಟೆ ತಾಲೂಕಿನಲ್ಲಿ ಕೃಷಿ ಇಲಾಖೆಯ ಅಂದಾಜಿನ ಪ್ರಕಾರ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳವನ್ನು ಬೆಳೆಯಲಾಗುವಷ್ಟು ಬಿತ್ತನೆ ಬೀಜವನ್ನು ವಿತರಣೆ ಮಾಡಲಾಗಿತ್ತು. ಅದರನ್ವಯ ತಾಲೂಕಿನಿಂದ ವರ್ಷಂಪ್ರತಿಯಂತೆ 400 ಕ್ಕೂ ಹೆಚ್ಚು ಲಾರಿಗಳಷ್ಟು ಜೋಳವನ್ನು ಬೆಳೆದು ಮಾರಾಟ ಮಾಡುತ್ತಿದ್ದರು. ಈ ಜೋಳವನ್ನು ದೂರದ ಬೆಂಗಳೂರು ಮತ್ತು ಆಂಧ್ರಪ್ರದೇಶದ ಖರೀದಿದಾರರು ಖರೀದಿಸಿ ಜೋಳದಿಂದ ಪಶು ಆಹಾರ ಮತ್ತು ಕೋಳಿ, ಹಂದಿಗಳ ಆಹಾರ ತಯಾರಿಕೆಗೆ ಉಪ ಯೋಗಿಸುತ್ತಾರೆ. ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಜೋಳದ ಬೆಳೆಗೂ ಬೆಂಬಲ ಬೆಲೆಯನ್ನು ನೀಡಬೇಕು. ಸರಕಾರ ಜೋಳ ಖರೀದಿ ಕೇಂದ್ರವನ್ನು ಪ್ರಾರಂಭಿಸಿ ನಿಗದಿತ ಬೆಲೆಯನ್ನು ನೀಡುವದರ ಮೂಲಕ ರೈತರಿಗೆ ಸಹಕಾರ ಕೊಡಬೇಕೆಂದು ಕುಶಾಲನಗರ ಹೋಬಳಿ ರೈತರು ಆಗ್ರಹಿಸಿದ್ದಾರೆ.

- ನಾಗರಾಜ ಶೆಟ್ಟಿ