ಕುಶಾಲನಗರ, ನ. 9: ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಹೆಸರನ್ನು ಕೆಲವರು ದುರುಪಯೋಪಗಪಡಿಸುತ್ತಿರುವದಾಗಿ ಕುಶಾಲನಗರ ಪಟ್ಟಣದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ವಿ.ಪಿ. ನಾಗೇಶ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಾಪಟ್ಟಣದ ಶ್ರೀ ಕುಶಾಲನಗರ, ನ. 9: ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಹೆಸರನ್ನು ಕೆಲವರು ದುರುಪಯೋಪಗಪಡಿಸುತ್ತಿರುವದಾಗಿ ಕುಶಾಲನಗರ ಪಟ್ಟಣದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ವಿ.ಪಿ. ನಾಗೇಶ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಾಪಟ್ಟಣದ ಶ್ರೀ ಇರುವದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಘದ ಮಾಜಿ ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಸಂಘದ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಯಾವದೇ ಕಾರ್ಯಕ್ರಮ ನಡೆಸಲು ತಮ್ಮ ಆಕ್ಷೇಪ ಇರುವದಿಲ್ಲ. ಆದರೆ ಅನವಶ್ಯಕವಾಗಿ ಸಂಘದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ನಾಗೇಶ್, ಈ ಬಗ್ಗೆ ಸಂಘದ ಕಾನೂನು ಸಲಹೆಗಾರರ ಬಳಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವದು ಎಂದಿದ್ದಾರೆ.
ತಾ. 12 ರಂದು ಮಧ್ಯಾಹ್ನ 11 ಗಂಟೆಗೆ ಕೂಡ್ಲೂರು ಸಂಚಾರಿ ಪೊಲೀಸ್ ಠಾಣೆ ಆವರಣದಲ್ಲಿ ಆಟೋ ಚಾಲಕರಿಗೆ ಮಾಸ್ಟರ್ ಕಾರ್ಡ್ ಮತ್ತು ಕೆಎನ್‍ಪಿ ಫಲಕಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜೋಸೆಫ್ ವಂದನಾಥ್, ಸಂಚಾಲಕರುಗಳಾದ ದೇವರಾಜ್, ಖಜಾಂಚಿ ಟಿ.ಕೆ. ಜಗದೀಶ್, ಶಿವಪ್ಪ, ಕಾರ್ಯದರ್ಶಿ ಶ್ಯಾಮ್, ಸಹ ಕಾರ್ಯದರ್ಶಿ ಶಶಿ, ಸಲಹೆಗಾರರಾದ ಆನಂದ್ ಇದ್ದರು.