ಸುಳ್ಯ, ನ. 9: ಕೇಂದ್ರ ಸರ್ಕಾರ ನೋಟು ಅಪಮೌಲ್ಯ ಮಾಡಿ ವರ್ಷ ತುಂಬಿದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಸುಳ್ಯ ಬ್ಲಾಕ್ ಮತ್ತು ಕೊಡಗು ಜಿಲ್ಲೆಯ ನಾಪೆÇೀಕ್ಲು ಬ್ಲಾಕ್ ಕಾಂಗ್ರೆಸ್ ಜಂಟಿಯಾಗಿ ಹಮ್ಮಿಕೊಂಡಿದ್ದ ಕರಾಳ ದಿನಾಚರಣೆಯ ಪ್ರಯುಕ್ತ ಕೊಯನಾಡಿನಲ್ಲಿ ಸಮಾರೋಪ ಸಮಾರಂಭ ನಡೆಯಿತು.

ಸಮಾರೋಪ ಭಾಷಣ ಮಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಅಧಿಕಾರದ ದಾಹಕ್ಕಾಗಿ ಜನರನ್ನು ಓಲೈಸಲು ಪರಿವರ್ತನಾ ಯಾತ್ರೆ ಮಾಡುತ್ತಿರುವ ಬಿಜೆಪಿಗರು ಮೊದಲು ಬದಲಾಗಬೇಕು ಎಂದರು. ತಮ್ಮ ಭ್ರಷ್ಟಾಚಾರದ ಕೇಸುಗಳನ್ನು ಮುಗಿಸಿ ಮತ್ತೆ ಭ್ರಷ್ಟಾಚಾರ ಮಾಡುವದಿಲ್ಲ ಎಂದು ಜನರ ಮುಂದೆ ಪಣ ತೊಡಲಿ ಎಂದು ಸವಾಲು ಹಾಕಿದರು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿಯ ಅಜೆಂಡಾದೊಂದಿಗೆ ಸೂಕ್ತ ಉತ್ತರ ನೀಡಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದರು.

ಕೆಪಿಸಿಸಿ ಸದಸ್ಯೆ ನಟಿ ಭಾವನಾ ಮಾತನಾಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಗೆಲುವೇ ಜಪ ಮತ್ತು ತಪವಾಗಲಿ ಎಂದರು.

ನಾಪೆÇೀಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್ ಕರಿಕೆ, ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಉಸ್ತುವಾರಿ ಸವಿತಾ ರಮೇಶ್ ಗೌಡ, ಜಿ.ಪಂ. ಚುನಾವಣೆಯಲ್ಲಿ ಅಭಿವೃದ್ಧಿಯ ಅಜೆಂಡಾದೊಂದಿಗೆ ಸೂಕ್ತ ಉತ್ತರ ನೀಡಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದರು.

ಕೆಪಿಸಿಸಿ ಸದಸ್ಯೆ ನಟಿ ಭಾವನಾ ಮಾತನಾಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಗೆಲುವೇ ಜಪ ಮತ್ತು ತಪವಾಗಲಿ ಎಂದರು.

ನಾಪೆÇೀಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್ ಕರಿಕೆ, ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಉಸ್ತುವಾರಿ ಸವಿತಾ ರಮೇಶ್ ಗೌಡ, ಜಿ.ಪಂ. ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಮಿಟ್ಟು ಚಂಗಪ್ಪ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಕಾವು ಹೇಮನಾಥ ಶೆಟ್ಟಿ, ಮಾಜಿ ಶಾಸಕ ಕುಶಲ, ನೆರವಂಡ ಉಮೇಶ್ ಹಾಗೂ ಎರಡು ಜಿಲ್ಲೆಗಳ ವಿವಿಧ ಘಟಕಗಳ ಪ್ರಮುಖರಿದ್ದರು.

ರೈ ಪಾದಯಾತ್ರೆ: ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಪಾದಯಾತ್ರೆಯಲ್ಲಿ ಭಾಗವಹಿಸಿ ದರು. ಕಲ್ಲುಗುಂಡಿಯಲ್ಲಿ ಪಾದಯಾತ್ರೆ ನಡೆಸಿದ ಅವರು ಕಾರ್ಯ ಕರ್ತರನ್ನುದ್ದೇಶಿಸಿ ಮಾತನಾಡಿದರು.