ಬಂದ್ ಕರೆ ಸರಿಯಲ್ಲ : ಶಿವು ಮಾದಪ್ಪ
ಮಡಿಕೇರಿ, ನ. 9: ಟಿಪ್ಪು ಆಚರಣೆಯ ವಿಚಾರಕ್ಕೆ ಸಂಬಂಧಿಸಿದಂತೆ ವೃತಾಗೊಂದಲ ಸೃಷ್ಟಿಯಾಗುತ್ತಿದೆ. ಈ ಕುರಿತಾಗಿ ಜಿಲ್ಲಾಡಳಿತ ಈಗಾಗಲೇ ಮುನ್ನಚ್ಚರಿಕಾ ಕ್ರಮವಾಗಿ ಸೆಕ್ಷನ್ 144ರಂತೆ ನಿಷೇದಾಜ್ಞೆ ಜಾರಿಗೊಳಿಸಿದೆ, ಇದರ ಬಳಿಕವೂ ಕೊಡಗು ಬಂದ್ ಕರೆ ನೀಡಿರುವದು ಒಪ್ಪುವಂತಹ ವಿಚಾರವಲ್ಲ. ಇದು ಸರಕಾರದ ಒಂದು ಕಾರ್ಯಕ್ರಮವಾಗಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ಶಾಂತಿಯುತ ಜಯಂತಿ ಆಚರಣೆಗೆ ಮುಂದಾಗಬೇಕೆಂದು ಜಿಲ್ಲಾ ಕಾಂಗ್ರೆಸ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ ಅವರು ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳೇ ಟಿಪ್ಪು ಕುರಿತಾಗಿ ಸದಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ ಶಾಂತಿ ನೆಮ್ಮದಿ ಮುಖ್ಯವಾಗಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸುತ್ತಿರುವದು ಸರಿಯಲ್ಲ. ಕೋಮು ಸಂಬಂಧಿತ ವಿಚಾರವನ್ನು ದೊಡ್ಡದು ಮಾಡುವ ಬದಲು ಸರಕಾರಿ ಕಾರ್ಯಕ್ರಮಕ್ಕೆ ಸರ್ವರ ಸಹಕಾರ ನೀಡಬೇಕು ಎಂದು ಅವರು ಕೋರಿದ್ದಾರೆ.
ಬಲವಂತ ಆಚರಣೆಗೆ ಸಮ್ಮತಿಯಿಲ್ಲ
ಅಮ್ಮತ್ತಿ : ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಸಾರ್ವತ್ರಿಕ ವಿರೋಧವಿದೆ. ಅದರಲ್ಲೂ ಕೊಡಗಿನಲ್ಲಿ ಹೆಚ್ಚು ವಿರೋಧವಿದ್ದು, ಟಿಪ್ಪುವಿನಿಂದ ಸಂತ್ರಸ್ತರಾಗಿರುವ ಕೊಡವ ಜನಾಂಗದವರು ಇದನ್ನು ಆರಂಭದಿಂದಲೂ ವಿರೋಧಿಸಿಕೊಂಡು ಬರುತ್ತಿದ್ದಾರೆ. ಹೀಗಿರುವಾಗ ಬಲವಂತ ಆಚರಣೆಗೆ ಸರಕಾರ ಮುಂದಾಗಿರುವದು ಖಂಡನೀಯ ಎಂದು ಅಮ್ಮತ್ತಿ ಕೊಡವ ಸಮಾಜ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸಮಾಜದ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ ಅವರು ಈ ಜಯಂತಿಗೆ ಸಮಾಜದ ವಿರೋಧವಿರುವದಾಗಿ ತಿಳಿಸಿದ್ದಾರೆ.
ಬಂದ್ ಕರೆಗೆ ನಗರ ಕಾಂಗ್ರೆಸ್ ವಿರೋಧ
ಮಡಿಕೇರಿ : ಟಿಪ್ಪು ಜಯಂತಿ ಆಚರಣೆ ರಾಜ್ಯ ಸರಕಾರದ ಕಾರ್ಯಕ್ರಮವಾಗಿದ್ದು, ಬಿಜೆಪಿ ಇದನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಂಡು ಕೊಡಗು ಬಂದ್‍ಗೆ ಕರೆ ನೀಡಿದ್ದು, ಇದನ್ನು ಖಂಡಿಸುವದಾಗಿ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ.ಯು.ಅಬ್ದುಲ್ ರಜಾóಕ್ ತಿಳಿಸಿದ್ದಾರೆ.
ವರ್ತಕರು, ಖಾಸಗಿ ಬಸ್ ಮಾಲೀಕರು, ವಿವಿಧ ವಾಹನ ಮಾಲೀಕರು ಹಾಗೂ ಆಟೋರಿಕ್ಷಾ ಚಾಲಕರು ಕಾನೂನಿಗೆ ವಿರುದ್ಧವಾದ ಬಂದ್‍ಗೆ ಬೆಂಬಲ ನೀಡಬಾರದೆಂದು ಅಬ್ದುಲ್ ರಜಾóಕ್ ಮನವಿ ಮಾಡಿದ್ದಾರೆ.
ಮುಖಂಡರ ಬಂಧನಕ್ಕೆ ಆಗ್ರಹ
ತಾ. 18ರಂದು ಕಾರ್ಯಕ್ರಮ
ಮಡಿಕೇರಿ : ಟಿಪ್ಪು ಜಯಂತಿಯನ್ನು ವಿರೋಧಿಸಿ ನವೆಂಬರ್ 10 ರಂದು ಬಿಜೆಪಿ ಹಾಗೂ ಸಂಘ ಪರಿವಾರ ನೀಡಿರುವ ಕೊಡಗು ಬಂದ್ ಕರೆಯನ್ನು ಜಿಲ್ಲೆಯ ಪ್ರಜ್ಞಾವಂತ ಜನತೆ ವಿಫಲಗೊಳಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಎಫ್‍ಐನ ಮಾಜಿ ಜಿಲ್ಲಾಧ್ಯಕ್ಷ ಟಿ.ಹೆಚ್.ಅಬೂಬಕ್ಕರ್, ಬಂದ್‍ನಿಂದಾಗಿ ಕೊಡಗಿನ ಆರ್ಥಿಕ ಕ್ಷೇತ್ರ ಮತ್ತು ಪ್ರವಾಸೋದ್ಯಮದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿರುವದರಿಂದ ಸಾರ್ವಜನಿಕರು, ರಾಜಕೀಯ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳು ಬಿಜೆಪಿಯ ರಾಜಕೀಯ ಪ್ರೇರಿತ ಬಂದ್‍ನ್ನು ವಿಫಲಗೊಳಿಸಬೇಕೆಂದು ಒತ್ತಾಯಿಸಿದರು. ಬಂದ್‍ಗೆ ಕರೆ ನೀಡುವದು ಕಾನೂನು ಬಾಹಿರವೆಂದು ಈಗಾಗಲೆ ವಿವಿಧ ಉಚ್ಚ ನ್ಯಾಯಾಲಯಗಳು ತೀರ್ಪು ನೀಡಿದ್ದು, ಬಂದ್‍ಗೆ ಕರೆ ನೀಡಿರುವ ಮುಖಂಡರನ್ನು ಕೊಡಗು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಬಂಧಿಸಬೇಕೆಂದು ಆಗ್ರಹಿಸಿದರು. ನವೆಂಬರ್ 10 ರಂದು ನಡೆಯುವ ವಾರದ ಸಂತೆಯನ್ನು ರದ್ದುಗೊಳಿಸಿರುವ ಆದೇಶ ಪರೋಕ್ಷವಾಗಿ ಜಿಲ್ಲಾಡಳಿತ ಬಂದ್‍ಗೆ ಬೆಂಬಲ ನೀಡಿದಂತಾಗಿದೆಯೆಂದು ಟೀಕಿಸಿದರು.
ಪಿಎಫ್‍ಐ ಜಿಲ್ಲಾಧ್ಯಕ್ಷ ಟಿ.ಎ.ಹ್ಯಾರೀಸ್ ಮಾತನಾಡಿ, ಜಿಲ್ಲಾಡಳಿತ ನಡೆಸುವ ಟಿಪ್ಪು ಜಯಂತಿ ನಾಲ್ಕು ಗೋಡೆಗಳ ನಡುವೆ ನಡೆಯುವದರಿಂದ ಟಿಪ್ಪುವಿನ ಜೀವನ ಚರಿತ್ರೆಯನ್ನು ಸಾರ್ವಜನಿಕವಾಗಿ ತಿಳಿಸುವ ಉದ್ದೇಶದಿಂದ ಪಿಎಫ್‍ಐ ತಾ. 18 ರಂದು ಮಡಿಕೆÉೀರಿಯಲ್ಲಿ “ಟಿಪ್ಪು ಸುಲ್ತಾನ್ ಆಡಳಿತ ಹಾಗೂ ಸುಧಾರಣೆ” ಎಂಬ ವಿಷಯದ ಬಗ್ಗೆ ಕಾರ್ಯಕ್ರಮ ನಡೆಸಲಿದೆ. ಈ ಕಾರ್ಯಕ್ರಮದಲ್ಲಿ ಸಂಶೋಧಕರಾದ ತಲಕಾಡು ಚಿಕ್ಕರಂಗೇಗೌಡ, ಮಳವಳ್ಳಿ ನಂಜುಂಡಸ್ವಾಮಿ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಪಿಎಫ್‍ಐ ಸದಸ್ಯ ಮನ್ಸೂರ್ ಉಪಸ್ಥಿತರಿದ್ದರು.
‘ಧೃತಿಗೆಡಬೇಡಿ’
ಟಿಪ್ಪು ಜಯಂತಿ ಸರ್ಕಾರದ ಕಾರ್ಯಕ್ರಮವಾಗಿದ್ದು, ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ಸೂಚಿಸುತ್ತಿದೆ. ಬಿಜೆಪಿ ಬಂದ್‍ಗೆ ಕರೆ ನೀಡಿರುವದರಿಂದ ಜಿಲ್ಲೆಯಲ್ಲಿ ಆಶಾಂತಿ ವಾತಾವರಣ ಗಲಬೆ ನಡೆಯಬಾರದೆಂದು ಜಿಲ್ಲಾಡಳಿತ ಸೆಕ್ಷನ್ 144 ಹಾಕಿರುವದರಿಂದ ಜಿಲ್ಲೆಯ ಜನತೆ ಧೃತಿಗೆಡಬಾದು ಎಂದು ಜಿಲ್ಲಾ ಕಾಂಗ್ರೆಸ್ ವಕಾರ್ತ ಟಿ.ಎಂ. ಅಯ್ಯಪ್ಪ ಕರೆ ನೀಡಿದ್ದಾರೆ.
ಮಡಿಕೇರಿ : ಟಿಪ್ಪು ಜಯಂತಿ ಬಹುಸಂಖ್ಯಾತ ಹಿಂದುಗಳ ಭಾವನೆಗೆ ವಿರುದ್ಧವಾದ ಜಯಂತಿಯಾಗಿದ್ದು, ಇತರ ಜಯಂತಿಗಳಂತಲ್ಲ . ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಬೆಂಬಲಿಸುವವರನ್ನೇ ಗಡಿಪಾರು ಮಾಡಬೇಕೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ ಆಗ್ರಹಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ವಕ್ತಾರ ಆಪಟ್ಟಿರ ಎಸ್. ಮೊಣ್ಣಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಬಿನ್ ದೇವಯ್ಯ ತಾ.10 ರಂದು ನಡೆಯಲಿರುವ ಟಿಪ್ಪು ಜಯಂತಿಯನ್ನು ಜಿಲ್ಲೆ ಸೇರಿದಂತೆ ರಾಜ್ಯದ ಬಹುಸಂಖ್ಯಾತ ಹಿಂದುಗಳು ಮಾತ್ರವಲ್ಲದೇ ಕ್ರೈಸ್ತರು ಹಾಗೂ ಪ್ರಜ್ಞಾವಂತ ಮುಸಲ್ಮಾನರು ವಿರೋಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಶಾಂತಿ ಕಾಪಾಡಲು ಜೆಡಿಎಸ್ ಮನವಿ
ನಾಪೆÉÇೀಕ್ಲು : ನ. 10 ರಂದು ನಡೆಯುವ ಟಿಪ್ಪು ಜಯಂತಿ ಸಂದರ್ಭ ಜಿಲ್ಲೆಯ ಎಲ್ಲಾ ಜನತೆ ಶಾಂತಿ, ಸೌಹಾರ್ದತೆಯನ್ನು ಪ್ರದರ್ಶಿಸಬೇಕೆಂದು ರಾಜ್ಯ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಎಂ.ಎ.ಮನ್ಸೂರ್ ಅಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿದ ಅವರು ಕೊಡಗು ಜಿಲ್ಲೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಟಿಪ್ಪು ಜಯಂತಿ ಹೆಸರಿನಲ್ಲಿ ಇಲ್ಲಿ ಗಲಭೆಗಳು ನಡೆದಲ್ಲಿ ಪ್ರವಾಸೋಧ್ಯಮಕ್ಕೆ ಧÀಕ್ಕೆ ಉಂಟಾಗುವದರೊಂದಿಗೆ ಜಿಲ್ಲೆಯ ಜನತೆಯ ಶಾಂತಿ ಮತ್ತು ಸಾಮರಸ್ಯಕ್ಕೂ ಹಾನಿಯಾಗಲಿದೆ. ಪ್ರವಾಸೋಧ್ಯಮದ ಹಿನ್ನಡೆ ಜಿಲ್ಲೆಯ ಅಭಿವೃದ್ಧಿಗೂ ಮಾರಕವಾಗಲಿದೆ. ಜಿಲ್ಲೆಯ ಜನತೆ ವೂಹಾ ಪೆÇೀಹಗಳಿಗೆ ಕಿವಿಗೊಡದೆ ಸಾರ್ವಜನಿಕ ಶಾಂತಿ ಸಾಮರಸ್ಯಕ್ಕೆ ಒತ್ತು ನೀಡಬೇಕೆಂದಿದ್ದಾರೆ.
ಆಹ್ವಾನ ಪತ್ರಿಕೆ ಇಲ್ಲದ ಅಸಮಾಧಾನ
ಇಂದಿನ ಟಿಪ್ಪು ಜಯಂತಿ ಆಚರಣೆ ಸಂಬಂಧ ಹಲವು ಜಿಲ್ಲಾ ಪಂಚಾಯತ್‍ನ ಸದಸ್ಯರಿಗೆ ಜಿಲ್ಲಾಡಳಿತ ಆಮಂತ್ರಣ ಪತ್ರಿಕೆ ನೀಡಿಲ್ಲವೆಂದು ಜಿ.ಪಂ. ಸದಸ್ಯ ಅಬ್ದುಲ್ ಲತೀಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾನೂ ಸೇರಿದಂತೆ ಕೆ.ಪಿ. ಚಂದ್ರಕಲಾ ಹಾಗೂ ಸೋಮವಾರಪೇಟೆ ತಾಲೂಕಿನ ಹಲವು ಸದಸ್ಯರಿಗೆ ಆಮಂತ್ರಣ ಪತ್ರಿಕೆ ನೀಡದೆ ಜಿಲ್ಲಾಡಳಿತ ಅವಮಾನಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.