ಸಿದ್ದಾಪುರ, ನ. 9: ಕೊಂಡಂಗೇರಿ ಗ್ರಾಮದಲ್ಲಿ ಸಿ.ಬಿ. ಮಹಮ್ಮದ್ ತಾನು ‘ಮಂತ್ರವಾದಿ ಬಾಬಾ’ ಎಂದು ಹೇಳಿ ಕೊಂಡು ಜನರನ್ನು ವಂಚಿಸುತ್ತಿದ್ದಾರೆ. ಇವರ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕೊಂಡಂಗೇರಿ ಗ್ರಾಮಸ್ತರು ಹಾಗೂ ಜಮ್ಮಾ ಮಸೀದಿಯ ಸದಸ್ಯರು ಒತ್ತಾಯಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೊಂಡಂಗೇರಿ ಮುಸ್ಲಿಂ ಜಮಾಅತ್ ಸದಸ್ಯ ಪಿ.ಎ. ಅಬ್ಬಾಸ್ ಕೊಂಡಂಗೇರಿ ಗ್ರಾಮದಲ್ಲಿ ವಾಸ ಮಾಡಿಕೊಂಡಿರುವ ಸಿ.ಬಿ. ಮಹಮ್ಮದ್ ತಾನು ಪವಾಡ ಪುರುಷನೆಂದು ಹೇಳಿಕೊಂಡು ತನ್ನ ಕೊಠಡಿಯಲ್ಲಿ ಮಾಟ, ಮಂತ್ರ, ತಂತ್ರಗಳನ್ನು ಮಾಡಿ ಜನರಿಂದ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದು ಗ್ರಾಮದಲ್ಲಿ ಆಶಾಂತಿಯ ವಾತಾವರಣ ಸೃಷ್ಟಿಸುತ್ತಿದ್ದಾರೆಂದು ಆರೋಪಿಸಿದರು. ಈ ಹಿನೆÀ್ನಲೆಯಲ್ಲಿ ಮಹಮ್ಮದ್ ವಿರುದ್ಧ ಸೂಕ್ತ ರೀತಿಯ ಕ್ರಮ ಕೈಗೊಂಡು ಅಲ್ಲಿಂದ ತೆರವುಗೊಳಿಸಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಎರಡು ದಿನಗಳ ಹಿಂದೆ ಕೇರಳ ರಾಜ್ಯದಿಂದ ಕೆಲವು ಅಪರಿಚಿತರನ್ನು ಕೊಂಡಂಗೇರಿಗೆ ಬರಮಾಡಿಕೊಂಡು ಅಶಾಂತಿಯನ್ನು ಸೃಷ್ಟಿಸಿದರು. ಅಲ್ಲದೆ ಗ್ರಾಮಸ್ತರಿಗೆ ಬೆದರಿಕೆಯನ್ನು ಒಡ್ಡಿರುತ್ತಾರೆ ಎಂದು ಅಬ್ಬಾಸ್ ತಿಳಿಸಿದರು.
ಜಮಾಅತ್ ಸದಸ್ಯ ಎ.ಎಂ. ಅಬ್ದುಲ್ಲಾ ಮಾತನಾಡಿ, ತಾನು ಮಂತ್ರವಾದಿ ಎಂದು ಹೇಳಿಕೊಂಡು ಗ್ರಾಮದಲ್ಲಿ ಗೊಂದಲ ಸೃಷ್ಟಿಸುತ್ತಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಈಗಾಗಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ದೂರನ್ನು ನೀಡಲಾಗಿದೆ ಎಂದರು. ಈಗಾಗಲೇ ನಕಲಿ ಬಾಬ ವಿರುದ್ಧ ಗ್ರಾಮಸ್ತರು ವಿರೋಧ ವ್ಯಕ್ತಪಡಿಸಿದ್ದು ಈ ಹಿನ್ನೆಲೆಯಲ್ಲಿ ಈತನ ಅಕ್ರಮ ದಂಧÉಗಳಿಗೆ ಕಡಿವಾಣ ಹಾಕಬೇಕೆಂದು ಇಲಾಖೆಗಳನ್ನು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಜಮಾಅತ್ ಸದಸ್ಯ ಪಿ.ಎ. ಆಲಿ, ಮುತ್ತುಕೋಯ ಇನ್ನಿತರರು ಹಾಜರಿದ್ದರು.