ಗೋಣಿಕೊಪ್ಪ ವರದಿ, ನ. 9 : ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಪ್ರೌಢಶಾಲಾ ಮಟ್ಟದ ಬಾಲಕ, ಬಾಲಕಿಯರ ಕೋದಂಡ ಎ. ಪೂವಯ್ಯ ಜ್ಞಾಪಕಾರ್ಥ ಹಾಕಿ ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳು ಕಿರಿಯ ಚಾಂಪಿಯನ್ ತಂಡಗಳಾಗಿ ಹೊರ ಹೊಮ್ಮಿದವು. ಎರಡು ವಿಭಾಗದಲ್ಲಿ ಎ ಮತ್ತು ಬಿ. ಡಿವಿಜನ್‍ಗಳಾಗಿ ತಲಾ ಎರಡು ತಂಡಗಳು ಫೈನಲ್‍ನಲ್ಲಿ ಪ್ರಶಸ್ತಿ ಪಡೆದುಕೊಂಡವು.
ಬಾಲಕಿಯರ ಎ. ಡಿವಿಜನ್‍ನಲ್ಲಿ ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ಚಾಂಪಿಯನ್, ಮಡಿಕೇರಿ ಸಾಯಿ ರನ್ನರ್ ಅಪ್, ಬಿ, ಡಿವಿಜûನ್‍ನಲ್ಲಿ ಭಾರತೀಯ ವಿದ್ಯಾಭವನ್ ಚಾಂಪಿಯನ್, ಗೋಣಿಕೊಪ್ಪ ಪ್ರೌಢಶಾಲೆ ರನ್ನರ್ ಅಪ್ ಸ್ಥಾನ, ಬಾಲಕರ ಬಿ. ಡಿವಿಜನ್‍ನಲ್ಲಿ ಪೊನ್ನಂಪೇಟೆ ಸರ್ಕಾರಿ ಪ್ರೌಢಶಾಲೆ ಚಾಂಪಿಯನ್, ಕಾಲ್ಸ್ ರನ್ನರ್ ಅಪ್, ಎ. ಡಿವಿಜನ್‍ನಲ್ಲಿ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಚಾಂಪಿಯನ್, ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡವು.
ಬಾಲಕಿಯರ ಫಲಿತಾಂಶ
ಬಾಲಕಿಯರ ಎ. ಡಿವಿಜನ್‍ನಲ್ಲಿ ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವು ಮಡಿಕೇರಿ ಸಾಯಿ ತಂಡವನ್ನು 3-0 ಗೋಲುಗಳಿಂದ ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಕೂಡಿಗೆ ಪರ 1, 16 ಹಾಗೂ 30 ನೇ ನಿಮಿಷಗಳಲ್ಲಿ ಕಾವ್ಯಾ ಹ್ಯಾಟ್ರಿಕ್ ಗೋಲು ಹೊಡೆದರು.
ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವು ಪೊನ್ನಂಪೇಟೆ ಸ್ಪೋಟ್ರ್ಸ್ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಫೈನಲ್ ಪ್ರವೇಶ ಪಡೆಯಿತು. ಕೂಡಿಗೆ ಪರ 7 ನೇ (ನಿ) ಚಿತ್ರಾ, 14 ಮತ್ತು 21 ನೇ (ನಿ) ಲಕ್ಷ್ಮಿ 2 ಗೋಲು, ಪೊನ್ನಂಪೇಟೆ ಪರ 17 ನೇ (ನಿ) ಲೇಖನ್ 1 ಗೋಲು ಹೊಡೆದರು. ಬಿ, ಡಿವಿಜûನ್‍ನಲ್ಲಿ ಭಾರತೀಯ ವಿದ್ಯಾಭವನ ತಂಡವು ಗೋಣಿಕೊಪ್ಪ ಪ್ರೌಢಶಾಲಾ ತಂಡವನ್ನು 1-0 ಗೋಲುಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಪಡೆದುಕೊಂಡಿತು. ವಿದ್ಯಾಭವನ್ ಪರವಾಗಿ ರಿಶಿಕಾ ತಿಮ್ಮಯ್ಯ 4 ನೇ (ನಿ) 1 ಗೋಲು ಹೊಡೆದು ಗೆಲುವಿನ ರೂವಾರಿ ಎನಿಸಿಕೊಂಡರು.
ಬಾಲಕರ ಫಲಿತಾಂಶ
ಬಾಲಕರ ಬಿ. ಡಿವಿಜನ್‍ನಲ್ಲಿ ಪೊನ್ನಂಪೇಟೆ ಸರ್ಕಾರಿ ಪ್ರೌಢಶಾಲೆ ತಂಡವು ಕಾಲ್ಸ್ ತಂಡವನ್ನು ಶೂಟೌಟ್‍ನಲ್ಲಿ 4-3 ಗೋಲುಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಶೂಟೌಟ್‍ನಲ್ಲಿ ಪೊನ್ನಂಪೇಟೆ ತಂಡವು 4-3 ಅಂತರದಿಂದ ಜಯಿಸಿತು.
ಎ. ಡಿವಿಜನ್ ಬಾಲಕರಲ್ಲಿ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವು ಕೂಡಿಗೆ ಸ್ಪೋಟ್ಸ್ ಹಾಸ್ಟೆಲ್ ತಂಡವನ್ನು 3-1 ಗೋಲುಗಳಿಂದ ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಪೊನ್ನಂಪೇಟೆ ಪರ 1 ನೇ (ನಿ) ಪೂವಣ್ಣ, 4 ನೇ (ನಿ) ಅಖಿಲ್, 29 ನೇ (ನಿ) ವಿವೇಕ್, ಕೂಡಿಗೆ ಪರ 7 ನೇ (ನಿ) ವಿಶ್ವಾಸ್ ಗೋಲು ಹೊಡೆದರು.
ಇದಕ್ಕೂ ಮುನ್ನ ನಡೆದ ಸೆಮಿ ಫೈನಲ್‍ನಲ್ಲಿ ಕಾಲ್ಸ್ ತಂಡವು ಲಯನ್ಸ್ ತಂಡವನ್ನು 5-0 ಅಂತರದ ಗೆಲುವು ದಾಖಲಿಸಿ ಫೈನಲ್‍ಗೆ ಪ್ರವೇಶ ಪಡೆಯಿತು. ಕಾಲ್ಸ್ ಪರ 7 ನೇ (ನಿ) ಪೂವಣ್ಣ, 10 ನೇ (ನಿ) ತಶ್ವಿನ್, 19, 20 ಹಾಗೂ 22 ನೇ (ನಿ) ಮೌರ್ಯ ಹ್ಯಾಟ್ರಿಕ್ ಗೋಲು ಹೊಡೆದರು.
ಸೆಮಿಯಲ್ಲಿ ಪೊನ್ನಂಪೇಟೆ ಜಿಪಿಯು ತಂಡವು ಶ್ರೀರಾಮ ಟ್ರಸ್ಟ್ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಪೊನ್ನಂಪೇಟೆ ಪರ 4 ನೇ (ನಿ) ಉಮೈಜ್, 8 ನೇ (ನಿ) ಪ್ರಥ್ವಿ, 19 ನೇ (ನಿ) ಮೋನಿಶ್ ತಲಾ ಒಂದೊಂದು ಗೋಲು ಹೊಡೆದರು.
ಸರಣಿ ವಿಶೇಷ ಪ್ರಶಸ್ತಿ
ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ಬಿಡ್ ಫೀಲ್ಡರ್ ಪ್ರಶಸ್ತಿಯನ್ನು ಗೋಣಿಕೊಪ್ಪ ತಂಡದ ಪಿ. ಜೆ. ಕೃತಿ ಹಾಗೂ ಪೊನ್ನಂಪೇಟೆ ತಂಡದ ಅಧಿರಾ, ಆಲ್‍ರೌಂಡರ್ ಪ್ರಶಸ್ತಿಯನ್ನು ಭಾರತೀಯ ವಿದ್ಯಾಭವನದ ರಿಶಿಕಾ ತಿಮ್ಮಯ್ಯ, ಡಿಫೆಂಡರ್ ಪ್ರಶಸ್ತಿಯನ್ನು ಮಡಿಕೇರಿ ಸಾಯಿ ತಂಡದ ಶಿಲ್ಪ, ಫಾರ್ವರ್ಡ್ ಪ್ರಶಸ್ತಿಯನ್ನು ಕೂಡಿಗೆ ತಂಡದ ಪದ್ಮಾವತಿ, ಬಾಲಕರಲ್ಲಿ ಬೆಸ್ಟ್ ಗೋಲು ಕೀಪರ್ ಪ್ರಶಸ್ತಿಯನ್ನು ಪೊನ್ನಂಪೇಟೆ ತಂಡದ ಕಾಮೇಶ್, ಬೆಸ್ಟ್ ಡಿಫೆಂಡರ್ ಶ್ರೀರಾಮ ಟ್ರಸ್ಟ್‍ನ ಕೆ. ಪಿ. ಸುಬ್ಬಯ್ಯ, ಮಿಡ್ ಫೀಲ್ಡರ್ ಆಗಿ ಕೂಡಿಗೆ ತಂಡದ ಅನಂತ್, ಫಾರ್ವರ್ಡ್ ಅಗಿ ಪೊನ್ನಂಪೇಟೆ ತಂಡದ ಧ್ಯಾನ್ ಗಣಪತಿ, ಆಲ್‍ರೌಂಡರ್ ಆಗಿ ಕಾಲ್ಸ್ ತಂಡದ ನಿಖಿಲ್ ತಿಮ್ಮಯ್ಯ ಪ್ರಶಸ್ತಿ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಹಿರಿಯ ಕ್ರೀಡಾಪಟು ಕೋದಂಡ ಧ್ಯಾನ್ ಚೆಂಗಪ್ಪ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಹಾಕಿಕೂರ್ಗ್ ಉಪಾಧ್ಯಕ್ಷರುಗಳಾದ ಪಳಂಗಂಡ ಲವ, ಕಳ್ಳಿಚಂಡ ಪ್ರಸಾದ್, ಟೂರ್ನಿ ಕಮಿಟಿ ಮುಖ್ಯಸ್ಥ ಬುಟ್ಟಿಯಂಡ ಚೆಂಗಪ್ಪ, ದಾನಿಗಳಾದ ಧ್ಯಾನ್ ಚೆಂಗಪ್ಪ, ಸಿ. ಪಿ. ಅಪ್ಪಣ್ಣ, ಸಿ. ಪಿ. ಮುದ್ದಪ್ಪ, ಹಾಗೂ ಸಿ. ಪಿ. ಮೇದಪ್ಪ ಉಪಸ್ಥಿತರಿದ್ದರು.
ಟೂರ್ನಿ ನಿರ್ದೇಶಕ ಕುಪ್ಪಂಡ ದಿಲನ್, ಟೂರ್ನಿ ಅಂಪೈಯರ್ ಕಮಿಟಿ ವ್ಯವಸ್ಥಾಪಕ ಬೊಳ್ಳಚಂಡ ನಾಣಯ್ಯ, ಅಂಪೈರ್‍ಗಳಾಗಿ ಪೊನ್ನಣ್ಣ, ದರ್ಶನ್, ಕೀರ್ತಿ, ಕಾಳಪ್ಪ, ಅಯ್ಯಪ್ಪ ಚೋಯಮಾಡಂಡ ಬಿಪಿನ್, ತಿಶಾ ಬೋಪಯ್ಯ ಹಾಗೂ ಅಯ್ಯಣ್ಣ, ಹರಿಣಾಕ್ಷಿ ಪೂಜಾರಿ ಕಾರ್ಯ ನಿರ್ವಹಿಸಿದರು. ಸುಳ್ಳಿಮಾಡ ಸುಬ್ಬಯ್ಯ ಹಾಗೂ ಅಜ್ಜಮಾಡ ಪೊನ್ನಪ್ಪ ವೀಕ್ಷಕ ವಿವರಣೆ ನೀಡಿದರು.