ಮಡಿಕೇರಿ, ನ. 9: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬಂತೆ ವಿದ್ಯಾರ್ಥಿಗಳ ಕೈಚಳಕದೀ ಮೂಡಿದ ವೈಜ್ಞಾನಿಕ ಮಾದರಿಗಳು ಗಮನ ಸೆಳೆದವು.
ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಯೋಗದೊಂದಿಗೆ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳಿಂದ ಪರಿಸರ ರಕ್ಷಣೆ, ಕಸ, ತ್ಯಾಜ್ಯ ವಿಂಗಡಣೆ, ಮಳೆ ನೀರು ಕೊಯ್ಲು, ಸೋಲಾರ್ ಚಾಲಿತ ವಾಹನಗಳು ಸೇರಿದಂತೆ ಇತರ ಮಾದರಿಗಳು ಗಮನ ಸೆಳೆದವು.
ಆರೋಗ್ಯವೇ ಭಾಗ್ಯ ಎಂಬ ಧ್ಯೆಯೋದ್ದೇಶದೊಂದಿಗೆ ಶಾಲೆಯೊಂದರ ವಿದ್ಯಾರ್ಥಿಗಳು ರಚಿಸಿದ್ದ ಮಾದರಿಯಲ್ಲಿ ಹಣ್ಣು, ತರಕಾರಿ, ಧವಸ ಧಾನ್ಯ ಸೇರಿದಂತೆ ಮೀನು, ಮೊಟ್ಟೆ, ಕೋಳಿ ಕಾಲುಗಳು ಕಂಡುಬಂದು ಮೆಚ್ಚುಗೆ ಗಳಿಸಿತು.
ಒಟ್ಟು 6 ವಿಭಾಗಗಳಲ್ಲಿ ನಡೆದ ಪ್ರದರ್ಶನದಲ್ಲಿ 26 ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅತಿಥಿಯಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ ಬಹುಮಾನ ವಿತರಿಸಿದರು. ಈ ಸಂದರ್ಭ ಬಿಆರ್‍ಸಿ ಮಹದೇವ, ಎಟಿಸಿ ಪರಶಿವಮೂರ್ತಿ, ಪದವಿ ಪೂರ್ವೂ ಕಾಲೇಜು ಉಪ ಪ್ರಾಂಶುಪಾ¯ ಕೆ.ಪಿ. ಗುರುರಾಜ್, ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಪದವೀಧರ ಮುಖ್ಯ ಶಿಕ್ಷಕ ಶಿವರಾಂ, ಕಾರ್ಯಕ್ರಮ ಸಂಯೋಜಕ ರಂಜಿತ್ ಇದ್ದರು.