ಶಾಸಕ ಅಪ್ಪಚ್ಚು ರಂಜನ್

ಕುಶಾಲನಗರ, ನ. 9: ಶುದ್ಧ ನೀರು ಬಳಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ವಾಸವಿ ಯುವಜನ ಸಂಘದ ನಿರ್ವಹಣೆಯೊಂದಿಗೆ ಕ್ಷೇತ್ರ ಶಾಸಕರ ನಿಧಿಯಿಂದ ನಿರ್ಮಾಣಗೊಂಡ ಸಾರ್ವಜನಿಕರ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಳೀಯ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಕಲುಷಿತ ನೀರಿನ ಮೂಲಕ ಹೆಚ್ಚಿನ ರೋಗರುಜಿನಗಳು ಉಂಟಾಗುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ನಾಗರಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸರಕಾರದ ಕಾರ್ಯಕ್ರಮಗಳು ಯಶಸ್ಸು ಕಾಣಲು ಸಾಧ್ಯ ಎಂದ ಅವರು, ಕುಶಾಲನಗರದ ವಾಸವಿ ಯುವಜನ ಸಂಘದ ಸೇವಾ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ವಾಸವಿ ಯುವಜನ ಸಂಘದ ಅಧ್ಯಕ್ಷ ವಿ.ಆರ್. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಜಗದೀಶ್, ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್, ಡಿ.ಕೆ. ತಿಮ್ಮಪ್ಪ ಆರ್ಯವೈಶ್ಯ ಮಹಾಸಭಾದ ಪ್ರಮುಖರಾದ ಎ.ಆರ್. ರವಿಕುಮಾರ್, ಎಸ್.ಎನ್. ನರಸಿಂಹಮೂರ್ತಿ, ಹೆಚ್.ಎಂ. ಸಂದೀಪ್, ಬಿ.ಆರ್. ನಾಗೇಂದ್ರಪ್ರಸಾದ್, ಕೆ.ಆರ್. ರವಿಕುಮಾರ್, ಅಶಾ ಅಶೋಕ್, ಕುಸುಮರಾಜ್, ವಿ.ಜೆ. ಬಾಲಾಜಿ, ವೈಶಾಖ್ ಮತ್ತು ವಾಸವಿ ಯುವಜನ ಸಂಘದ ಪದಾಧಿಕಾರಿಗಳು ಇದ್ದರು.