ಮಡಿಕೇರಿ, ನ. 9: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಉದ್ಯೋಗಗಳನ್ನು ಸೃಷ್ಟಿಸದೇ ಇರುವದನ್ನು ಖಂಡಿಸಿ ‘ಉದ್ಯೋಗ ಇಲ್ಲ ಅಂದ್ರೆ ಓಟ್ ಇಲ್ಲ’ ಎನ್ನುವ ಆಂದೋಲನವನ್ನು ಹುಟ್ಟು ಹಾಕುವದಾಗಿ ಉದ್ಯೋಗಕ್ಕಾಗಿ ಯುವಜನರು-ಕರ್ನಾಟಕ ಸಂಘಟನೆ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮೈಸೂರು ಜಿಲ್ಲಾ ಸಂಚಾಲಕ ಸೋಮಶೇಖರ್, ಶಿಕ್ಷಣವಂತರಾಗಿ ನಿರುದ್ಯೋಗದ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಯುವ ಸಮೂಹ ಸಂಘಟನೆಯ ಸದಸ್ಯತ್ವವನ್ನು ಪಡೆದುಕೊಳ್ಳಬಹುದೆಂದರು.

ಪ್ರಸ್ತುತ ರಾಷ್ಟ್ರವ್ಯಾಪಿ ಕೋಟ್ಯಾಂತರ ಮಂದಿ ಯುವ ಸಮೂಹ ಶಿಕ್ಷಣವಿದ್ದರೂ ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಅತಂತ್ರ ಬದುಕನ್ನು ನಡೆಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಈ ಸಂಬಂಧ ಮನವಿ ಸಲ್ಲಿಸಲಾಗುವದು. ನಂತರ ಉದ್ಯೋಗ ಸೃಷ್ಟಿಗಾಗಿ ಆಂದೋಲನವನ್ನು ನಡೆಸಲಾಗು ವದೆಂದರು.

ಉದ್ಯೋಗಕ್ಕಾಗಿ ಹುಟ್ಟು ಹಾಕಲು ಯತ್ನಿಸುತ್ತಿರುವ ಆಂದೋಲನದ ಭಾಗವಾಗಲು ಇಚ್ಛಿಸುವವರಿಗೆ ಅನುಕೂಲವಾಗುವ ‘ಮೈ ಜಾಬ್’ ಎನ್ನುವ ಮೊಬೈಲ್ ಆಪ್ ಅನ್ನು ಇದೇ ಸಂದರ್ಭ ಪ್ರಮುಖರು ಬಿಡುಗಡೆ ಮಾಡಿದರು.

ಗೋಷ್ಠಿಯಲ್ಲಿ ಉದ್ಯೋಗಕ್ಕಾಗಿ ಯುವಜನರು ಸಂಘÀಟನೆಯ ಮೈಸೂರು ವಿಭಾಗದ ಕಾರ್ಯದರ್ಶಿ ಹರ್ಷ ಕುಮಾರ್, ರಶ್ಮಿ, ಮಂಜಿಲ್ ಹಾಗೂ ಕೊಡಗು ಜಿಲ್ಲಾ ಸಂಚಾಲಕ ಇಬ್ರಾಹಿಂ ಉಪಸ್ಥಿತರಿದ್ದರು.