ಗೋಣಿಕೊಪ್ಪ ವರದಿ, ನ. 11: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಆವರಣದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯ ಮಟ್ಟದ 5 ನೇ ವರ್ಷದ ಸಾಂಸ್ಖøತಿಕ ಪೈಪೋಟಿ ಯುವ ಸ್ಪಂದನ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಹಾಗೂ ಬ್ರಹ್ಮಾವರ ಕೃಷಿ ಡಿಪ್ಲೋಮಾ ಕಾಲೇಜು ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡವು. ಸ್ಪರ್ಧೆಯಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ಸ್ನಾತಕೋತರ ವಿದ್ಯಾಲಯ ಹಾಗೂ ಡಿಪ್ಲೋಮ ವಿಭಾಗಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆಯಿತು. ಸ್ನಾತಕೋತರ ವಿಭಾಗದಲ್ಲಿ ಪೊನ್ನಂಪೇಟೆ ಅರಣ್ಯ ವಿದ್ಯಾಲಯವು 106 ಅಂಕ ಪಡೆದು ಚಾಂಪಿಯನ್, ಮೂಡಿಗೆರೆ ತೋಟಗಾರಿಕಾ ವಿದ್ಯಾಲಯ 96 ಅಂಕಗಳ ಮೂಲಕ ರನ್ನರ್ ಅಪ್, ಡಿಪ್ಲೋಮಾ ವಿಭಾಗದಲ್ಲಿ 127 ಅಂಕಗಳೊಂದಿಗೆ ಬ್ರಹ್ಮಾವರ ಕೃಷಿ ಡಿಪ್ಲೋಮಾ ಕಾಲೇಜು ಚಾಂಪಿಯನ್, ಕತ್ತಲಗೆರೆ ಕೃಷಿ ಡಿಪ್ಲೋಮಾ ಕಾಲೇಜು 112 ಅಂಕಗಳ ಮೂಲಕ ರನ್ನರ್ ಅಪ್ ಸ್ಥಾನ ಅಲಂಕರಿಸಿತು.

ಸ್ನಾತಕೋತ್ತರ ವಿಭಾಗ: ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ತಂಡಗಳು. ಲಘು ಸಂಗೀತದಲ್ಲಿ ಶಿವಮೊಗ್ಗ ಕೃಷಿ ಮಹಾ ವಿದ್ಯಾಲಯ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಹಿರಿಯೂರು ತೋಟಗಾರಿಕಾ ವಿದ್ಯಾಲಯ. ದೇಶಭಕ್ತಿ ಗೀತೆಯಲ್ಲಿ ಹಿರಿಯೂರು ತೋಟಗಾರಿಕಾ ವಿದ್ಯಾಲಯ, ಶಿವಮೊಗ್ಗ ಕೃಷಿ ಮಹಾವಿದ್ಯಾಲಯ, ಮೂಡಿಗೆರೆ ತೋಟಗಾರಿಕಾ ವಿದ್ಯಾಲಯ, ಏಕಾಂಕ ನಾಟಕದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಶಿವಮೊಗ್ಗ ಕೃಷಿ ಮಹಾವಿದ್ಯಾಲಯ, ಮೂಡಿಗೆರೆ ತೋಟಗಾರಿಕಾ ವಿದ್ಯಾಲಯ, ಮೂಕಭಿನಯದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಶಿವಮೊಗ್ಗ ಕೃಷಿ ಮಹಾವಿದ್ಯಾಲಯ, ಹಿರಿಯೂರು ತೋಟಗಾರಿಕಾ ವಿದ್ಯಾಲಯ, ಚಿತ್ರ ರಚನೆಯಲ್ಲಿ ಹಿರಿಯೂರು ತೋಟಗಾರಿಕಾ ವಿದ್ಯಾಲಯ, ಮೂಡಿಗೆರೆ ತೋಟಗಾರಿಕಾ ವಿದ್ಯಾಲಯ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಮಣ್ಣಿನ ಕಲಾಕೃತಿಯಲ್ಲಿ ಮೂಡಿಗೆರೆ ತೋಟಗಾರಿಕಾ ವಿದ್ಯಾಲಯ, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ, ಹಿರಿಯೂರು ತೋಟಗಾರಿಕಾ ವಿದ್ಯಾಲಯ, ವ್ಯಂಗ್ಯಚಿತ್ರದಲ್ಲಿ ಮೂಡಿಗೆರೆ ತೋಟಗಾರಿಕಾ ವಿದ್ಯಾಲಯ, ಹಿರಿಯೂರು ತೋ, ಪೊನ್ನಂಪೆಂಟೆ ಅರಣ್ಯ ವಿ, ರಂಗೋಲಿಯಲ್ಲಿ ಪೊನ್ನಂಪೇಟೆ ಅರಣ್ಯ, ಮೂಡಿಗೆರೆ ತೋ, ಹಿರಿಯೂರು ತೋ, ಪೋಸ್ಟರ್ ಮೇಕಿಂಗ್‍ನಲ್ಲಿ ಮೂಡಿಗೆರೆ ತೋ, ಹಿರಿಯೂರು ತೋ, ಪೊನ್ನಂಪೇಟೆ ಅರಣ್ಯ, ನಾಟಕದಲ್ಲಿ ಮೂಡಿಗೆರೆ ತೋ, ಪೊನ್ನಂಪೆಟೆ, ಹಿರಿಯೂರು, ಭಾಷಣದಲ್ಲಿ ಪೊನ್ನಂಪೇಟೆ, ಮೂಡಿಗೆರೆ, ಹಿರಿಯೂರು, ಸಾಮೂಹಿಕ ನೃತ್ಯದಲ್ಲಿ ಹಿರಿಯೂರು, ಮೂಡಿಗೆರೆ, ಶಿವಮೊಗ್ಗ ತೋ, ಜನಪದ ನೃತ್ಯದಲ್ಲಿ ಪೊನ್ನಂಪೇಟೆ, ಮೂಡಿಗೆರೆ, ಶಿವಮೊಗ್ಗ ಪಡೆದುಕೊಂಡಿತು.

ಡಿಪ್ಲೋಮಾ ವಿಭಾಗ: ಬ್ರಹ್ಮಾವರ ಡಿಪ್ಲೋಮಾ ಕಾಲೇಜು ಲಘು ಗಾಯನ, ಸಾಮೂಹಿಕ ಗಾಯನ, ಸಾಮೂಹಿಕ ನೃತ್ಯ, ರಸಪ್ರಶ್ನೆ, ಆಶುಭಾಷಣ, ಭಾಷಣ, ಏಕಪಾತ್ರಾಭಿನಯ, ಕಿರುನಾಟಕ, ಚಿತ್ರರಚನೆ, ಬಿತ್ತಿಚಿತ್ರ, ಮಣ್ಣಿನ ಆಕೃತಿ ರಚನೆ, ವ್ಯಂಗ್ಯ ಚಿತ್ರ, ರಂಗೋಲಿ, ಏಕಾಂಕ ನಾಟಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಹಾಗೂ ದೇಶಭಕ್ತಿ ಗೀತೆ, ಮೈಮ್ ಮತ್ತು ಚರ್ಚೆ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಕತ್ತಲೆಗೆರೆ ಡಿಪ್ಲೋಮಾ ಕಾಲೇಜು ದೇಶಭಕ್ತಿ ಗೀತೆ, ಮೈಮ್, ಚರ್ಚೆ ಹಾಗೂ ಮೂಕಾಭಿನಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಹಾಗೂ ಲಘು ಗಾಯನ, ಸಾಮೂಹಿಕ ಗಾಯನ, ಸಾಮೂಹಿಕ ನೃತ್ಯ, ರಸಪ್ರಶ್ನೆ, ಆಶುಭಾಷಣ, ಭಾಷಣ, ಏಕಪಾತ್ರಾಭಿನಯ, ಕಿರುನಾಟಕ, ಚಿತ್ರರಚನೆ, ಬಿತ್ತಿಚಿತ್ರ, ಮಣ್ಣಿನ ಆಕೃತಿ ರಚನೆ, ವ್ಯಂಗ್ಯ ಚಿತ್ರ, ರಂಗೋಲಿ, ಏಕಾಂಕ ನಾಟಕ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಸಮಾರೋಪ: ವೃತ್ತಿಪರ ಶಿಕ್ಷಣ ಕೇಂದ್ರಗಳಲ್ಲಿ ಕಲೆಗೆ ಪ್ರೋತ್ಸಾಹ ನೀಡಲು ರಂಗಾಯಣದ ಮೂಲಕ ತರಬೇತಿ ನೀಡಲು ಪ್ರೋತ್ಸಾಹ ನೀಡಲಾಗುವದು ಎಂದು ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಹೇಳಿದರು. ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಈ ಸಂದರ್ಭ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡೀರ ಕುಶಾಲಪ್ಪ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿವಿ ವಿದ್ಯಾರ್ಥಿ ಕಲ್ಯಾಣ ಮುಖ್ಯಸ್ಥೆ ಡಾ. ವೈ. ವಿಶ್ವನಾಥ್ ಶೆಟ್ಟಿ, ವ್ಯವಸ್ಥಾಪನಾ ಮಂಡಳಿ ಸದಸ್ಯ ನೀತು ಯೋಗಿರಾಜ್ ಪಾಟೀಲ್, ಶಿವಮೊಗ್ಗ ಕೃಷಿ ಮಹಾ ವಿದ್ಯಾಲಯ ಡಾ. ಎಂ. ಮಂಜುನಾಥ್, ಮೂಡಿಗೆರೆ ತೋಟಗಾರಿಕಾ ಮಹಾ ವಿದ್ಯಾಲಯ ಮುಖ್ಯಸ್ಥ ಡಾ. ಎಂ. ಹನುಮಂತಪ್ಪ, ಹಣಕಾಸು ನಿಯಂತ್ರಣಾಧಿಕಾರಿ ಕೆ. ಗಣೇಶಪ್ಪ, ಬ್ರಹ್ಮಾವರ ಕೃಷಿ ಡಿಪ್ಲೋಮ ಪ್ರಾಂಶುಪಾಲ ಡಾ. ಕಾಮತ್, ಕತ್ತಲಗೆರೆ ಕೃಷಿ ಡಿಪ್ಲೋಮಾ ಪ್ರಾಂಶುಪಾಲ ಡಾ. ಬಿ.ಎಂ. ಆನಂದಕುಮಾರ್ ಉಪಸ್ಥಿತರಿದ್ದರು.