ಕೂಡಿಗೆ, ನ. 11: ಕೊಡಗಿನ ಪವಿತ್ರ ಕಾವೇರಿ-ಹಾರಂಗಿ ನದಿ ಸಂಗಮ ತಟದಲ್ಲಿರುವ ಕೂಡಿಗೆಯ ಶ್ರೀ ಉದ್ಬವ ಸುಬ್ರಹ್ಮಣ್ಯಸ್ವಾಮಿಯ 49ನೇ ವಾರ್ಷಿಕ ರಥೋತ್ಸವವು ತಾ. 24 ರಂದು ನೆರವೇರಲಿದೆ.
ಶ್ರೀ ಸ್ವಾಮಿಯ ಸನ್ನಿಧಾನದಲ್ಲಿ ಅಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ದಿಗ್ಭಲಿ, ರಥಬಲಿ, ರಥಪೂಜೆ ನಂತರ 12 ಗಂಟೆಗೆ ಮಹಾರಥೋತ್ಸವ ನೆರವೇರಲಿದೆ. ಅಂದು ಸಂಜೆ 7.30ಕ್ಕೆ ಮಂಟಪೋತ್ಸವ ನಡೆಯಲಿದೆ.
ರಥೋತ್ಸವದ ಅಂಗವಾಗಿ ತಾ. 23ರಂದು ಪುಣ್ಯಾಹ ಪಂಚಗವ್ಯಶುದ್ಧಿ ಅಂಕುರಾರ್ಪಣ, ಧ್ವಜಾರೋಹಣ, ಗಣಹೋಮ ಹಾಗೂ ಸುಬ್ರಹ್ಮಣ್ಯ ಪೂಜೆ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ನಡೆಯಲಿವೆ. ರಾತ್ರಿ 7 ಗಂಟೆಗೆ ಮಹಾಪೂಜೆ, ಅಷ್ಠಾವಧಾನ ಸೇವೆ, ಪಲ್ಲಕ್ಕಿ ಉತ್ಸವ ನಡೆಯಲಿವೆ.
ತಾ. 25ರ ಮಾರ್ಗಶಿರ ಶುಕ್ಲ ಸಪ್ತಮಿಯಂದು ಅವಭೃತೋತ್ಸವ ನಡೆಯಲಿವೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.
ತಾ.18ರಂದು ಲಕ್ಷದೀಪೋತ್ಸವ
ಕೂಡಿಗೆಯ ಶ್ರೀ ಉದ್ಬವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪೂಜೋತ್ಸವದ ಅಂಗವಾಗಿ ಶ್ರೀ ಸತ್ಯನಾರಾಯಣ ವ್ರತಾಚರಣ ಸಮಿತಿ ವತಿಯಿಂದ ಲಕ್ಷ ದೀಪೋತ್ಸವ ಕಾರ್ಯಕ್ರಮವು ನಡೆಯಲಿದೆ.
ಅಂದು ಸ್ವಾಮಿಗೆ ಮಹಾಪೂಜೆಯ ಅಂಗವಾಗಿ ಬೆಳಗ್ಗಿನಿಂದ ವಿಶೇಷ ಪೂಜೆ ಹಾಗೂ ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿವೆ ಎಂದು ಶ್ರೀ ಸತ್ಯನಾರಾಯಣ ವ್ರತಾಚರಣ ಸಮಿತಿ ಪ್ರಕಟಣೆ ತಿಳಿಸಿದೆ.