ಕುಶಾಲನಗರ, ನ. 11: ಪ್ರತಿಯೊಬ್ಬರೂ ಕಾನೂನಿನ ಕನಿಷ್ಟ ಅರಿವು ಹೊಂದುವದು ಅತ್ಯವಶ್ಯಕ ವಾಗಿದೆ ಎಂದು ಪಿರಿಯಾ ಪಟ್ಟಣದ ಹಿರಿಯ ಸಿವಿಲ್ ಮುಖ್ಯ ನ್ಯಾಯಾಧೀಶ ಅರ್ಜುನ್ ಎಸ್. ಮಳ್ಳೂರು ಹೇಳಿದರು.

ಕಾನೂನು ಸೇವಾ ದಿನಾಚರಣೆಯ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ ಪಿರಿಯಾಪಟ್ಟಣ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ಸ್ಥಳೀಯ ಭಾರತಮಾತ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸಮಿತಿ ಸದಸ್ಯ ಕಾರ್ಯದರ್ಶಿ ಜೈಶಂಕರ್ ಜನನ ಮತ್ತು ಮರಣ ಪ್ರಮಾಣ ಪತ್ರದ ಅವಶ್ಯಕತೆ, ಬಾಲ್ಯ ವಿವಾಹ ಅಪರಾಧದ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಭಾಸ್ಕರ್ ಮಾತನಾಡಿದರು. ಕಾಲೇಜು ಉಪ ಪ್ರಾಂಶುಪಾಲ ಫಾದರ್ ಪ್ರತೀಶ್ ಅಧ್ಯಕ್ಷತೆ ವಹಿಸಿದ್ದರು. ಸಿಸ್ಟರ್ ಸಿನಿಮ್ಯಾಥಿವ್, ಸಿಸ್ಟರ್ ಟ್ರಿಜಾ ಹಾಗೂ ಉಪನ್ಯಾಸಕ ವರ್ಗದವರು ಇದ್ದರು. ಉಪನ್ಯಾಸಕ ಕೆ. ಜ್ಞಾನೇಶ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.