ವೀರಾಜಪೇಟೆ, ನ. 11: ಪಿಕ್‍ಅಪ್ ವಾಹನ ಡಿಕ್ಕಿಯಾಗಿ ಎಡಗಾಲು ಮುರಿದುಕೊಂಡು ಜಿವನ್ಮರಣ ಸ್ಥಿತಿಯಲ್ಲಿದ್ದ ಬೀಡಾಡಿ ಹೆಣ್ಣು ಕರುವೊಂದನ್ನು ನಾಗರಿಕರು ರಕ್ಷಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಕಳೆದ ಒಂದು ವಾರದ ಹಿಂದೆ ಪಟ್ಟಣದಲ್ಲಿ ಹೆಣ್ಣುಕರುವಿಗೆ ಪಿಕ್‍ಅಪ್ ವಾಹನ ಡಿಕ್ಕಿ ಪಡಿಸಿ ಪರಾರಿಯಾಗಿತ್ತು. ಕರು ಎಲ್‍ಐಸಿ ಕಚೇರಿ ಎದುರು ನರಳುತ್ತಿದ್ದನ್ನು ಕಂಡ ಕ್ಯಾಂಟೀನ್‍ನ ಸುಮತಿ ಹಾಗೂ ಪೌರ ಕಾರ್ಮಿಕ ನವೀನ್ ಕುಮಾರ್, ಆಟೋ ಚಾಲಕರಾದ ಜಾನ್ಸನ್ ಹಾಗೂ ಸುಬ್ಬಯ್ಯ ಕರುವನ್ನು ಪಶು ವ್ಯೆದ್ಯಕೀಯ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮರೆದಿದ್ದಾರೆ. ಪಶುವೈದÀ್ಯ ಡಾ. ರಾಕೇಶ್ ಹಾಗೂ ಸಿಬ್ಬಂದಿ ಸುಬ್ಬಯ್ಯ ಕರುವಿಗೆ ಚಿಕಿತ್ಸೆ ನೀಡಿದರು.
ಬೀಡಾಡಿ ದನಗಳು: ಪಟ್ಟಣದಲ್ಲಿ ಬೀಡಾಡಿ ದನಗಳು ಹಾಗೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಗೂ ವಾಹನ ಚಾಲಕರಿಗೆ ತೊಂದರೆ ಉಂಟಾಗುತ್ತಿದೆ. ಕೂಡಲೇ ಪಟ್ಟಣ ಪಂಚಾಯಿತಿ ಕ್ರಮ ತೆಗದುಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.