ಮಡಿಕೇರಿ, ನ. 11: ನಿನ್ನೆ ಜಿಲ್ಲಾಡಳಿತದಿಂದ ಮಡಿಕೇರಿ ಕೋಟೆಯ ಹಳೆ ವಿಧಾನಸಭಾಂಗಣದಲ್ಲಿ ಏರ್ಪಡಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಒಟ್ಟು 170 ಮಂದಿಗೆ ಆಹ್ವಾನ ಪತ್ರಿಕೆ ನೀಡಿರುವದು ಬಹಿರಂಗಗೊಂಡಿದೆ. ಆದರೆ ಕಾರ್ಯಕ್ರಮಕ್ಕೆ ಆಹ್ವಾನಿಸಿದವರ ಹೊರತಾಗಿ ಸ್ವತಃ ಆಹ್ವಾನ ಪತ್ರಿಕೆ ತೋರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅನೇಕ ಕಾಂಗ್ರೆಸ್ ಪ್ರಮುಖರಿಗೆ ಅವು ದೊರೆತಿತ್ತಾದರೂ ಎಲ್ಲಿ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.ಕಾರಣ ಜಿ.ಪಂ. ಸಭಾಂಗಣದಲ್ಲಿ ಟಿಪ್ಪು ಜಯಂತಿ ಬಹಿಷ್ಕರಿಸಿದ ಬಿಜೆಪಿ ಜನಪ್ರತಿನಿಧಿಗಳಿಗೆ ಶೇಮ್... ಶೇಮ್... ಎಂದು ಘೋಷಣೆ ಕೂಗಿದ ಕಾಂಗ್ರೆಸ್‍ನ ಜನಪ್ರತಿನಿಧಿಗಳೇ ತಮಗೆ ಆಮಂತ್ರಣ ಈ ಕ್ಷಣಕ್ಕೂ ಸಿಕ್ಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದರು.
(ಮೊದಲ ಪುಟದಿಂದ) ಹೀಗಿರುವಾಗ 170 ಮಂದಿಗೆ ನೀಡಲಾಗಿದ್ದ ಆಹ್ವಾನ ಹೊರತಾಗಿ ಅಲ್ಲಿ ಬಂದವರನ್ನು ಕರೆಸಿದವರಾರು? ಎಂಬ ಕುರಿತು ವ್ಯಾಪಕ ಚರ್ಚೆ ನಡೆದಿದೆ. ಅಲ್ಲದೆ ಇಲ್ಲಿ ಯಾರಿಂದ... ಯಾರಿಗೆ... ಯಾತಕ್ಕಾಗಿ... ಶೇಮ್...!! ಗೊತ್ತಾಗಲೇ ಇಲ್ಲ...!