ಮಡಿಕೇರಿ, ನ. 11: ಅಲ್ಪಸಂಖ್ಯಾತ ಯುವಕ, ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಇಲಾಖೆಯ ವತಿಯಿಂದ ಡಿ.ಟಿ.ಪಿ. ಮತ್ತು ಪ್ರಿಂಟ್ ಪಬ್ಲಿಷಿಂಗ್ ಅಸ್ಸಿಸ್‍ಟೆಂಟ್ ಹಾಗೂ ಬ್ಯೂಟಿ ಥೆರಫಿಸ್ಟ್ ಮತ್ತು ಹೇರ್ ಸ್ಟೈಲಿಂಗ್ ಲೆವಲ್ ವಿಷಯಗಳಲ್ಲಿ ತರಬೇತಿಯನ್ನು ಜಿಲ್ಲೆಯ ಎ.ಸಿ.ಸಿ.ಪಿ.ಎಲ್. ಟ್ರೈನಿಂಗ್ ಸಂಸ್ಥೆಯ ಮೂಲಕ ನೀಡುವ ಕುರಿತಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ತಾ. 20 ಕೊನೆಯ ದಿನವಾಗಿದೆ.
ಅಭ್ಯರ್ಥಿಗಳು ವೋಟರ್ ಐಡಿ, ಆಧಾರ ಕಾರ್ಡ್, ಮನೆ ವಿಳಾಸ ದೂರವಾಣಿ ಸಂಖ್ಯೆ ಹಾಗೂ ಇನ್ನಿತರ ಅವಶ್ಯ ದಾಖಲಾತಿಗಳೊಂದಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಧಿಕಾರಿ ಯವರ ಕಾರ್ಯಾಲಯ, ದೇವರಾಜ್ ಅರಸು ಭವನ್, ಜನರಲ್ ತಿಮ್ಮಯ್ಯ ಸ್ಟೇಡಿಯಂ, ಮ್ಯಾನ್ಸ್ ಕಾಂಪೌಂಡ್ ಹತ್ತಿರ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿಂದ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ದೂ.ಸಂ: 08272-225628 ನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.