ಮೂರ್ನಾಡು, ನ. 11: ಮೂರ್ನಾಡು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗಮಂಡಲದಿಂದ ತಲಕಾವೇರಿವರೆಗೆ ಸ್ವಚ್ಛತಾ ಕಾರ್ಯ ನಡೆಸಿದರು.
ವಿದ್ಯಾಸಂಸ್ಥೆಯ ಕ್ಲೀನ್ ಇಂಡಿಯಾ ಬ್ರಿಗೇಡ್ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳು ಭಾಗಮಂಡಲದಿಂದ ತಲಕಾವೇರಿಗೆ ಸಾಗುವ ಮುಖ್ಯ ರಸ್ತೆ ಬದಿಯಲ್ಲಿ ಬಿದ್ದ ಬಾಟಲಿ, ಪ್ಲಾಸ್ಟಿಕ್, ಪೇಪರ್‍ಗಳನ್ನು ಹೆಕ್ಕಿ
ಸ್ವಚ್ಛಗೊಳಿಸಿದರು. ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ 80ಮಂದಿ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು 9 ಕಿಲೋ ಮೀಟರ್ ರಸ್ತೆ ಬದಿಗಳನ್ನು ಸ್ವಚ್ಛಗೊಳಿಸಿದ್ದಾರೆ.
ಮೂರ್ನಾಡು ವಿದ್ಯಾಸಂಸ್ಥೆ ಕಾರ್ಯದರ್ಶಿ ಚೌರೀರ ಎಂ. ಪೆಮ್ಮಯ್ಯ, ನಿರ್ದೇಶಕ ನಂದೇಟಿರ ರಾಜ ಮಾದಪ್ಪ, ಈರಮಂಡ ಸೋಮಣ್ಣ, ಸದಸ್ಯ ಪುದಿಯೊಕ್ಕಡ ರಾಜ ಮೇದಪ್ಪ, ಪದವಿ ಪೂರ್ವ ಕಾಲೇಜು ಎನ್‍ಎಸ್‍ಎಸ್ ಯೋಜನಾಧಿಕಾರಿ ಯು.ಸಿ. ಮಾಲತಿ, ಉಪನ್ಯಾಸಕರಾದ ಕುಮುದ, ನಂಜೇಗೌಡ, ಪ್ರೌಢಶಾಲೆ ವೃತ್ತಿ ಶಿಕ್ಷಕ ಹೆಚ್.ಬಿ. ಕೃಷ್ಣಪ್ಪ, ಪದವಿ ಪೂರ್ವ ಕಾಲೇಜು ದೈಹಿಕ ಶಿಕ್ಷಕ ಮಂಜುನಾಥ್ ಪಾಲ್ಗೊಂಡಿದ್ದರು.