ಮಡಿಕೇರಿ, ನ. 11: ತುಳುವೆರ ಜನಪದ ಕೂಟದ ಮರಗೋಡು ವಲಯ ಮಟ್ಟದ ತುಳು ಭಾಷಿಕರ ಸಭೆ ಕೂಟದ ಹಿರಿಯರಾದ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಮರಗೋಡು ವಿವೇಕಾನಂದ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡು ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ ಮಾತನಾಡಿದರು. ಕೂಟದ ಜಿಲ್ಲಾ ಉಪಾಧ್ಯಕ್ಷ ಬಿ.ವೈ. ಆನಂದ ರಘು, ಜಿಲ್ಲಾ ಸಲಹೆ ಗಾರ ಎಂ.ಡಿ. ನಾಣಯ್ಯ ಮಾತ ನಾಡಿ, ತುಳು ಭಾಷಾ ಬಾಂಧ ವರು ಜಿಲ್ಲೆಯಲ್ಲಿ 2 ಲಕ್ಷಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿದ್ದು, ಸಂಘಟಿತರಾಗÀಬೇಕು ಎಂದರು.
ಮರಗೋಡು ವಲಯ ಸಮಿತಿ
ಅಧ್ಯಕ್ಷರಾಗಿ ವೇಣುಗೋಪಾಲ್, ಗೌರವಧ್ಯಕ್ಷರಾಗಿ ಬಿ.ಆರ್. ನಾರಾಯಣ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಬಿ. ಜನಾರ್ಧನ, ಉಪಾಧ್ಯಕ್ಷರಾಗಿ ಜಾಜಿ, ಸಂಚಾಲಕರಾಗಿ ಎಂ.ಟಿ. ದೇವಪ್ಪ, ಸಹ ಕಾರ್ಯದರ್ಶಿಯಾಗಿ ಹರಿಣಾಕ್ಷಿ ಧನಂಜಯ, ಖಜಾಂಚಿಯಾಗಿ ಬಿ.ಆರ್. ಲತಾ, ಸಂಘಟನಾ ಕಾರ್ಯದರ್ಶಿಯಾಗಿ ಲೀಲಾವತಿ, ಎಂ.ಜಿ. ಮಂಜುಳ, ಎಂ.ಟಿ. ಕುಸುಮ, ಸಂಘಟಕರಾಗಿ ಎಂ.ಪಿ. ಶ್ರೀನಿವಾಸ, ಸಲಹೆಗಾರರಾಗಿ ಹರಿಶ್ಚಂದ್ರ, ಸುಂದರ್, ಬಿ.ಬಿ. ಭಾಲಕೃಷ್ಣ, ನಿರ್ದೇಶಕರಾಗಿ ಧನಂಜಯ, ಬಿ.ಕೆ. ಶ್ರೀಧರ್, ಬಿ.ಬಿ. ತಿಮ್ಮಪ್ಪ, ಜನಾರ್ಧನ, ಗಿರಿಜಾ, ಎಂ.ಎಂ. ಸುರೇಶ್ಕುಮಾರ್, ಎಂ.ಡಿ. ಲಿಖಿತ, ಬಿ.ಎಸ್. ಸುನೀತ, ಎಂ.ಆರ್. ರಾಜೇಶ್, ಬಿ.ಬಿ. ಭರತ್, ಪ್ರಶಾಂತ್, ಬಿ.ಆರ್. ರವಿ, ಎಂ.ಎ. ಕುಞ್ಞಣ್ಣ, ಎಂ.ಎನ್. ಹರೀಶ್ ಆಯ್ಕೆಯಾದರು.
ವೇದಿಕೆಯಲ್ಲಿ ಮಡಿಕೇರಿ ತಾಲೂಕು ತುಳುವೆರ ಜನಪದ ಕೂಟದ ಉಪಾಧ್ಯಕ್ಷರಾದ ಎಂ.ಡಿ. ಸುರೇಶ್, ಬಿ.ಬಿ. ಬಾಲಕೃಷ್ಣ ಹಾಗೂ ಮೂರ್ನಾಡು ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಉಪಸ್ಥಿತರಿದ್ದರು.