ಮಡಿಕೇರಿ, ನ. 11: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ದುಬೈನಲ್ಲಿ ಮಿಲಾದ್ ಸಮಾವೇಶ ತಾ. 24 ರಂದು ಏರ್ಪಡಿಸಿದೆ. ಕಡಲುಂಡಿ ತಂಘಳ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮ ಯಶಸ್ವಿಗಾಗಿ ಉಸ್ಮಾನ್ ಹಾಜಿ ನಾಪೋಕ್ಲು ಮತ್ತು ಇರ್ಷಾದ್ ಕೊಂಡಂಗೇರಿ ನೇತೃತ್ವದಲ್ಲಿ ಸ್ವಾಗತ ಸಮಿತಿ ರಚನೆ ಮಾಡಲಾಗಿದೆ.
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸಅ) ಜನ್ಮ ದಿನದಿಂದ ಅನುಗ್ರಹಿತವಾದ ರಬೀವುಲ್ ಅವ್ವಲ್ ತಿಂಗಳ ಪ್ರಯುಕ್ತ ‘ಪ್ರವಾದಿ ಪ್ರೀತಿ ವಿಶ್ವದ ಶಾಂತಿ’ ಎಂಬ ಶೀರ್ಷಿಕೆಯಲ್ಲಿ ಮಿಲಾದ್ ಸಮಾವೇಶ ತಾ. 24 ರಂದು ಸಂಜೆ 6 ಗಂಟೆಗೆ ದುಬೈ ದೇರಾದಲ್ಲಿರುವ ಬನಿಯಾಸ್ ಮೆಟ್ರೋ ಸಮೀಪದ ಅಲ್ ಖಲೀಜ್ ಗ್ರಾಂಡ್ ಹೊಟೇಲ್ ಸಭಾಂಗಣದಲ್ಲಿ ನಡೆಯಲಿದೆ.
ಹಿರಿಯ ಸೂಪೀವರ್ಯರು, ಸುನ್ನಿ ಸಂಘ ಕುಟುಂಬದ ಅಗ್ರಗಣ್ಯ ನಾಯಕ ಸಯ್ಯದ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಘಳ್ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಸಮಾವೇಶದ ಯಶಸ್ವಿಗಾಗಿ ದುಬೈಯಲ್ಲಿರುವ ಸುನ್ನಿ ಸಂಘಟನಾ ಮುಂದಾಳು ಹಿರಿಯ ಉದ್ಯಮಿ ಜನಾಬ್ ಉಸ್ಮಾನ್ ಹಾಜಿ ನಾಪೋಕ್ಲು ನಾಯಕತ್ವದಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ. ಅಲ್ಲದೆ ಉಪ ಸಮಿತಿಗಳನ್ನು ರಚಿಸಲಾಗಿದೆ.